ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಜಾ ರಾಮಮೋಹನರಾಯರ ಜೀವಿತ ಚರಿತ್ರ. ಬಿಸಿದಳು. ಇವಳು ಒಂದಾನೊಂದುದಿನ ಸಣ್ಣ ಮಗುವಾದ ರಾಮಮೋಹನನೊಂದಿಗೆ 3 ರು ಮನೆಗೆ ಬಂದಿದ್ದಾಗ ಇವಳ ತಂದೆಯು ಪೂಜಾಸಂಬಂಧವಾದ ಪುಷ್ಪಗಳನ್ನು ಮೊಮ್ಮಗನ ಕೈಗೆ ಕೊಟ್ಟನೆಂತಲೂ, ಅವನು ಅವುಗಳನ್ನು ಅಲಂಕರಿಸಿಕೊಳ್ಳುವುದಕ್ಕೆ ಬದಲಾಗಿ, ಅಗಿದು ನುಂಗಿಬಿಟ್ಟನೆಂತಲೂ, ವಾಕ್ಸುದ್ಧಿಯುಳ್ಳ ಆ ಭಾಚಾರನು ಅದನ್ನು ನೋಡಿ «ತಾ ಕೂರಾಣಿ : ಹೀಗೆ ದೇವತಾ ತಿರಸ್ಕಾರಮಾಡಿದ ನಿನ್ನ ಮಗನಿಂದ ನಿನಗೆ ಸೌಖ್ಯ ಎಲ್ಲದೇ ಹೋಗಲಿ, ಮತ್ತೂ ಈ ಬಾಲನು ಸನಾತನ ಧರ್ಮಕ್ಕೆ ಬಾಹ್ಯನಾಗಿರಲಿ' ಎಂದು ಶಪಿಸಿದನೆಂತಲೂ, ತನ್ನ ತಂದೆಯು ಹೀಗೆ ಶಪಿಸಿದಕೂಡಲೇ ಆ ಠಾಕೂರಾಣಿಯ ಚಿಂತಿಸಿ. ಗದ್ದದ ಸ್ವರದಿಂದ ಈ ಶಾಪ ಪರಿಹಾರಮಾಡಬೇಕೆಂದು ಬೇಡಿಕೊಂಡಳೆಂತಲೂ, ಅದಕ್ಕಾ ತನು ನನ್ನ ವಾಕ್ಯವು ತಪ್ಪಲರಿಯದು, ಈತನು ಧರಬಾಹ್ಯನಾದರೂ ಸಾಮಾನ್ಯ ಜನರಂತ ಅಲ್ಲದೆ ಸುಪ್ರಸಿದ್ಧನಾಗುವನು ಎಂದು ಅನುಗ್ರಹಿಸಿದನೆಂತಲೂ ಹೇಳಿಕೊಳ್ಳುವರು. ಈ ರಾಮ ಮೋಹನನ ಜೀವಿತಕಾಲದಲ್ಲಿದ್ದವರು ಇವನ ಕೆಲಸಗಳನ್ನು ನೋಡಿ, ಈ ರೀತಿಯ ಗಾಧೆಯ ನ್ನು ಕಲ್ಪಿಸಿರಬಹುದು, ಠಾಕೂರಾಣಿಯು ಸ್ವಸ್ಥಾನವನ್ನು ಸೇರಿದಮೇಲೆ ತನ್ನ ಪತಿಯೊಡನೆ ಈ ವೃತ್ತಾಂತವನ್ನು ತಿಳಿಸಿದಳೆಂತಲೂ, ಆಗಿನ ಕಾಲಕ್ಕೆ ತಕ್ಕಂತೆ ಶಾಪಗಳಲ್ಲಿ ನಂಬಿಕೆಯುಳ್ಳ ಆ 'ದಂಪತಿಗಳು ತಮ್ಮ ಮಗನನ್ನು ಹೇಗಾದರೂ ಸನಾತನಧಮ್ಮ ಪರನಾಗಿರುವಂತೆ ಮಾಡಬೇ ಕೆಂದು ಯಾವಾಗಲೂ ಯೋಚಿಸುತ್ತಲಿದ್ದರೆಂತಲೂ ಹೇಳುವರು. ರಾಮಕಾಂತರಾಯನು ತನ್ನ ಹಿರಿಯರ ವೃತ್ತಿಯನ್ನ ಮಸರಿಸಿ, ಮುರಷದಾಬಾದ್ ನ ವಾಬನ ಬಳಿಯ ಒಂದು ಉದ್ಯೋಗದಲ್ಲಿ ಸೇರಿದನು, ಆದರೂ ತಮ್ಮ ತಂದೆಯಂತೆಯೇ ತನ ಗೂ ಕೆಲವು ಆಕ ಒಗ್ಗಳು ಜರುಗಿದ್ದರಿಂದ ಆ ಉದ್ಯೋಗವನ್ನು ಬಿಟ್ಟು ಬಿಟ್ಟು, ಮರಳಿ ರಾಧಾ ನಗರಕ್ಕೆ ಬಂದು, ಜೀವನಕ್ಕಾಗಿ ಬರರ್ದ್ವಾ ಚರ್ಮಾ ದಾರಿಯಲ್ಲಿ ಕೆಲವು ಗ್ರಾಮಗಳನ್ನು ಗುತ್ತಿಗೆಗೆ ತೆಗೆದುಕೊಂಡನು. ಕೆಲವು ದಿನಗಳ ತರುವಾಯ ಆ ಜರ್ಮೀದಾರನೊಂದಿಗೆ ಅಂತಃ ಕಲಹಗಳು ಉಂಟಾಗಲು, ರಾಯರ ವಂಶಸ್ಥರೆಲ್ಲರೂ ಒಗ್ಗಟ್ಟಾಗಿ, ಆಗಿನ ರಾಜನಾದ ತೇಜ ಚಂದ್ರನೊಡನೆ ಕೆಲವು ಶಾಶ್ವತ ನಿಬಂಧನೆಗಳನ್ನು ಮಾಡಿಕೊಂಡು, ಗುತ್ತಿಗೆಯನ್ನು ಸ್ಥಿರಪಡಿಸಿ ಕೊಂಡರು. ಆಗ ರಾಮಮೋಹನನು ಸಣ್ಣ ಹುಡುಗನಾಗಿದ್ದನು. ರಾಯರ ವಂಶವು ತುಂಬ ವೃದ್ಧಿಯಾದ ತರುವಾಯ ರಾಮಕಾಂತರಾಯನು ತನ್ನ ಕಾಯಂಗುತ್ತಾ ಗ್ರಾಮವಾದ ಲಾಂ ಗೋಲ್ವಾಡಾ ಎಂಬ ಪ್ರದೇಶಕ್ಕೆ ತನ್ನ ನಿವಾಸವನ್ನು ಬದಲಾಯಿಸಿದನು. ರಾಜಾರಾಮಮೋಹನರಾಯನ ಮನಸ್ಸಿನಲ್ಲಿ ಮತದ ಪ್ರೇಮವು ಬಾಲ್ಯದಿಂದ ಬೆಳೆಯುತ್ತಲೇ ಇದ್ದಿತು. ಮುಂದಿನಕಾಲದಲ್ಲಿ ಒಂದು ಅಖಂಡನತ ಸಂಸ್ಕರಣಕರ್ತನಾಗ ತಕ್ಕ ಈಮಹಾತ್ಮನು ತನ್ನ ಚಿಕ್ಕಂದಿನಲ್ಲಿಯೇ ತಮ್ಮ ಮನೆಯಲ್ಲಿ ದೇವರ ಪೂಜೆಗಾಗಿ ಇಟ್ಟಿದ ರಾಧಾಗೋವಿಂದವಿಗ್ರಹದಲ್ಲಿ ತುಂಬ ಭಕ್ತಿಯುಳ್ಳವನಾಗಿದ್ದನು. ಮನೆಯಿಂದ ಎಲ್ಲಿಗಾದರೂ ಹೊರಡಬೇಕಾಗಿ ಬಂದಾಗ ಆ ವಿಗ್ರಹಕ್ಕೆ ನಮಸ್ಕರಿಸಿಯೇ ಹೊರಡುತ್ತಿದ್ದನು. ಪ್ರತಿದಿನವೂ ಭಾಗವತದಲ್ಲಿನ ಒಂದೊಂದು ಅಧ್ಯಾಯವನ್ನು ಪಾರಾಯಣಮಾಡುವ ವಾಡಿಕೆಯನ್ನಿಟ್ಟು