ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೩ ಗಾಜಾ ರಾಮಮೋಹನರಾಯರ ಜೀವಿತ ಚರಿತ್ರ. ನಿಗೆ ಅವನನ್ನು ಒಪ್ಪಿಸಿದನು. ಆತನು ಇವನನ್ನು ತನ್ನ ಮಕ್ಕಳಲ್ಲಿ ಒಬ್ಬನಂತೆ ತಿಳಿದು ತುಂಬ ಪ್ರೇಮದಿಂದ ನೋಡುತ್ತಿದ್ದನು. ವಿರಾಮ ದೊರೆತಾಗ ರಾಮಮೋಹನನು ತಾನೇ ಹೋಗಿ ಆ ಹುಡುಗನನ್ನು ವಿಚಾರಿಸುತ್ತಾ ಉಳಿದ ಕಾಲಗಳಲ್ಲಿ ಪತ್ರಗಳಿಂದ ಅವನ ಕ್ಷೇಮ ಸಮಾಚಾರವನ್ನು ತಿಳಿದುಕೊಳ್ಳುತ್ತಾ ಇದ್ದನು. ಇದರಿಂದ ಅವನ ಮನೆಯವರೆಲ್ಲರಿಗೂ ಈತನಲ್ಲಿ ತುಂಬಾ ವಿಶ್ವಾಸವುಂಟಾಯಿತು, ಡೇವಿರ್ಸರನಗೆ ಆ ಕಾಲದಲ್ಲಿಯೇ ಒಬ್ಬ ಮಗ ಹುಟ್ಟಿದನು. ಆ ಹುಡುಗನಿಗೆ ನಾಮಕರಣಮಾಡುವ ಸಂದರ್ಭ ದಲ್ಲಿ ರಾಮಮೋಹನನನ್ನು ಕೂಡ ಕರೆಯಿಸಿ ತಮ್ಮನ್ನು ಎಂದಿಗೂ ಮರೆಯದಂತೆ ಈ ನನ್ನ ಮಗನಿಗೆ ತಮ್ಮ ಪವಿತ್ರನಾಮವನ್ನು ದಯಪಾಲಿಸಬೇ ಕೆಂದು ಡೇವಿರ್ಸ ಪ್ರಾರ್ಥಿ ಸಿದನು. ಅದನ್ನು ಆತನು ಅಂಗೀಕರಿಸಿ ಆ ಶಿಶುವಿಗೆ ರಾಮಮೋ ಹನರಾಯ ಎಂಬ ತನ್ನ ಹೆಸರನ್ನು ಇಟ್ಟನು, ಡೇವಿಸನ್ನಿ ನ ಸತೀಮಣಿಯ ತನ್ನ ಡೈರಿ ಯಲ್ಲಿ ಹೀಗೆ ಬರೆದಿಟ್ಟಿರುವಳು. ಆತನು ನನ್ನ ಮಗನನ್ನು ತುಂಬಾ ಪ್ರೇಮದಿಂದ ನೋಡು ತಿದ್ದನು. ಒಂದೊಂದುವೇಳೆ ನಾನು ಮನೆಯಲ್ಲಿ ಎಷ್ಟರ ಒಳಭಾಗದಲ್ಲಿದ್ದರೂ ಅಲ್ಲಿಗೆ ಬಂದು ಆ ಮಗುವನ್ನೆತ್ತಿಕೊಂಡು ಮುದ್ದಿಟ್ಟು ತೂಗುತ್ತಿದ್ದನು, ಆತನು ನನ್ನಲ್ಲಿ ತೋರಿ ಸಿದ ಭಕ್ತಿವಿನಯಗಳನ್ನು ರಾಜ್ಯವನ್ನಾಳುವ ರಾಣಿಯರಲ್ಲಿ ಸುದಾ ಯಾರೂ ತೋರಿಸಲಾರ ರೆಂದು ತಿಳಿಯುವೆನು, ಒಂದುಸಾರಿ ಆ ಮಹಾತ್ಮನು ಬಂದ ವೇಳೆಯಲ್ಲಿ ನನ್ನ ಮುದ್ದು ಕುವರನು ಆಡಿಕೊಳ್ಳಲಿಕ್ಕೆ ಎಲ್ಲಿಗೋ ಹೋಗಿದ್ದನು, ಅದರಿಂದ ತಾನು ಅವಸರದಿಂದ ಹೊರಡಬೇಕಾದವನಾಗಿದ್ದರೂ ಆ ಬಾಲಕನನ್ನು ಕರೆದುಕೊಂಡು ಬರುವತನಕ ತಡೆದು ನಿಂತ ನು, ಪಾಪ ! ಆಗಲೇ ಆತನು ತನ್ನ ರುದ್ರಭೂಮಿಯಾದ ಬ್ರಿಸ್ಟಲ್ಲಿಗೆ ಹೊರಟಿದ್ದನು.” ರಾಮಮೋಹನನು ಕಲ್ಕತ್ತೆಯಿಂದ ಹೊರಡುವಾಗ್ಗೆ ಆತನಿಗೆ ಪ್ರಾಣಮಿತ್ರನಾದ ಡೇವಿಡ್ ಹೇರ್ ಎಂಬವನು ತನ್ನ ಸಹೋದರರಿಗೆ ಒಂದು ಪತ್ರವನ್ನು ಬರೆದಿದ್ದನು, ಅದರಲ್ಲಿ ನಿಮ್ಮ ಕೈಯಿಂದಲಾದಮಟ್ಟಿಗೆ ರಾಮಮೋಹನನಿಗೆ ಮರಾದೆಮಾಡುವುದರಲ್ಲಿ ಸ್ವಲ್ಪವೂ ಲೋಪವಿಲ್ಲದಂತೆ ನೋಡಿಕೊಳ್ಳಬೇಕೆಂತಲೂ, ಪರದೇಶಸ್ಟರಿಗೆ ಪರಸ್ಥಳಗಳಲ್ಲಿ ತೋರುವ ಕಷ್ಟ ಗಳು ಯಾವುವೂ ಈತನಿಗೆ ಸಂಭವಿಸದಂತೆ ಮಾಡತಕ್ಕದ್ದೆಂತಲೂ, ಅವರಿಗೆ ತಿಳಿಹಿಸಿದ್ದುದ ರಿಂದ ಬೆಡ್ ಫರು ಸೈಯರ್ ಎಂಬ ಬೀದಿಯಲ್ಲಿ ದೊಡ್ಡ ವರ್ತಕರಾಗಿದ್ದ ಆತನ ಸೋದ ರರು ರಾಮಮೋಹನನು ಲಂರ್ಡ ನಗರವನ್ನು ಪ್ರವೇಶಿಸಿರುವನೆಂಬ ಸುದ್ದಿಯನ್ನು ಕೇಳಿದ ಕೂಡಲೆ ಆತನ ಒಳಿಗೆ ಬಂದು ತಾವು ನಮ್ಮ ಮನೆಗೆ ದಯಮಾಡಿ ಅಲ್ಲಿಯೇ ವಾಸಮಾಡು ತಿರಬೇಕೆಂತಲೂ, ನಾವೆಲ್ಲರೂ ಸೇವಕರಂತೆ ತಮ್ಮ ಕೆಲಸಗಳನ್ನು ನಡೆಸುತ್ತಿರುವೆವೆಂತಲೂ, ಹಲವು ಬಗೆಯಿಂದ ಬೇಡಿಕೊಂಡರು. ಆದರೆ ಅದರಿಂದ ಅವರಿಗೆ ತೊಂದರೆಯುಂಟಾಗುವು ದೆಂದು ತಿಳಿದು ಆತನು ಒಡಂಬಡದೆ ಇದ್ದನು. ಆದುದರಿಂದಲೇ ತಾನು ರೀಚಿಂಟ್ ಬೀದಿ ಯಲ್ಲಿ ಪ್ರತ್ಯೇಕವಾಗಿ ಕೆಲವು ತಿಂಗಳ ತನಕ ವಾಸಮಾಡುತ್ತಿದ್ದನು, ಆದರೆ ಬುದ್ಧಿಶಾಲಿಗ ಳಾದ ಡೇವಿಡ್ ಹೇರನ ಸಹೋದರರು ಆತನನ್ನು ತಮ್ಮ ಮನೆಯಲ್ಲಿ ವಾಸಮಾಡಲಿಕ್ಕೆ ಬರುವ