ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

F೪ ರಾಜಾ ರಾಮಮೋಹನರಾಯರ ಜೀವಿತ ಚರಿತ್ರ. ತನಕ ನಿತ್ಯವೂ ಬಿಡದೆ ಪ್ರಾರ್ಥಿಸುತ್ತಿದ್ದರು. ಕೊನೆಗೆ ರಾಮಮೋಹನನು ಅವರ ಕೋರಿಕೆ ಯನ್ನು ತಿರಸ್ಕರಿಸಲಾರದೆ ತನ್ನ ನಿವಾಸವನ್ನು ಅಲ್ಲಿಗೆ ಬದಲಾಯಿಸಿದನು. ತರುವಾಯ ಈ ಸತ್ಪುರುಷರು ರಾಮಮೋಹನನಿಗೆ ಹಲವು ಬಗೆಗಳಲ್ಲಿ ಸಹಾಯಕರಾದರು, ಹೆತ್ತ ಮಕ್ಕ ತಂತೆ ಸೇವೆಮಾಡುತ್ತಿದ್ದರು. ಈತನು ಎಲ್ಲಿಗೆ ಹೊರರೂ ತಪ್ಪದೆ ಅವರಲ್ಲಿ ಒಬ್ಬನು ಅವನ ಹಿಂದೆ ಹೊರಡುತ್ತಿದ್ದು, ಕಡೆಗೆ ಮರಣವು ಸವಿಾಪಿಸಿದಾಗ ಸುದಾ ಇವರೇ ಎಲ್ಲರಿಗಿಂತ ಹೆಚ್ಚಾಗಿ ಸೇವೆಮಾಡುತ್ತಿದ್ದರು, ಸಾವಿರ ಮಾತುಗಳೇಕೆ ? ಯಾರಾದರೂ ತಮ್ಮ ಪ್ರಿಯ ಬಾಂಧವರಲ್ಲಿ ಸಹಿತ ಇವರು ರಾಮಮೋಹನನ ವಿಷಯದಲ್ಲಿ ಪಟ್ಟಷ್ಟು ಶ್ರಮವನ್ನು ಪಟ್ಟಿ ಲಾರರೆಂದು ಹೇಳಬಹುದು. ವಾಸ್ತವವಾಗಿ ಇಂತಹ ಸದಯಹೃದಯವೂ, ಸೌಮನಸ್ಯವೂ ಉಳ್ಳ ಜನರು ಯಾವ ಕುಲದಲ್ಲಿ ಹುಟ್ಟಿದರೋ ಅದೇ ಪವಿತ್ರವಾದ ಕುಲವು. ಇಂತಹ ಯೋಗ್ಯಪುರುಷರನ್ನು ಳ್ಳುದೇ ಪವಿತ್ರವಾದ ದೇಶವು, ರಾಮಮೋಹನರಾಯನು ಇಂಗ್ಲಿಷರ ಮಂಡಲಿಯಲ್ಲಿ ಹೇಗೆ ಮಿಳಿತವಾಗಿದ್ದನೆಂಬ ವಿವರವು ಆತನು ಅವರ ಸ್ವಂತ ಶುಭಕಾರಗಳಲ್ಲಿ ಸೇರುತ್ತಿದ್ದನೆಂಬುದರಿಂದಲೇ ವಿಶದವಾಗುವುದು, ಈತನಿಗೆ ವಿದಾರಗಳಲ್ಲಿ ಕೂಡ ಶ್ರದ್ಧೆ ದ್ವಿತೆಂಬುದು ಒಂದು ಪತ್ರದಿಂದ ತಿಳಿಯಬರುವುದು. ಆತನು ಈ ಪತ್ರದಲ್ಲಿ ಮಿಸ್ ಕೇಡಲ್ ಎಂಬಾಕೆಗೆ 'ನಾನು ಈ ಸಾಯಂಕಾಲ ಐದು ಘಂಟೆಗೆ ಈಸ್ಟ್ಲೇ ಎಂಬ ನಾಟಕ ಶಾಲೆಗೆ ಹೊರಡುವುದಕ್ಕೆ ನಿಮ್ಮ ನಿಮ್ಮ ಮಿತ್ರರನ್ನೂ ಕರೆಯುವುದಕ್ಕಾಗಿ ಬರುವೆನು' ಎಂದು ತಿಳಿಸಿದನು. ಇಂಗ್ಲಿಷ್ ಪ್ರಜೆಗಳು ರಾಮ ಮೋಹನನಲ್ಲಿ ತೋರಿದ ಮಾದೆಗಳನ್ನೂ ಗೌರವವನ್ನೂ ಕುರಿತು ಇರುವರಿಗೆ ಹೇಳಿದ ವಿಷಯಗಳೇ ಸಾಕೆಂದು ತಿಳಿಯುವೆವು, ಮುಂದೆಯೂ ಸಂ ದರ್ಭಾನುಸ•ರ ಆ ವಿಷಯವನ್ನು ಹೇಳುವೆವು. ಇನ್ನು ಸರಾ ರವವರು ಈತನನ್ನು ಗೌರ ವಿಸುವುದಕ್ಕೆ ಮಾಡಿದ ಕಾರಗನ್ನ ಕುರಿತು ನಾವು ತಿಳಿಸಬೇಕಾಗಿದೆ. ಈಸ್ಟಿಂಡಿಯಾ ಕಂಪೆನಿಯವರು ಮೊದಲು ರಾಮಮೋಹನನು 11 ರಾಜಾ' ಎಂಬ ಬಿರುದನ್ನು ಪಡೆಯುವು ದಕ್ಕೂ, ದೆಹಲಿಯ ರಾಜನಿಗೆ ಪ್ರತಿನಿಧಿಯಾಗಿ ಮಾತನಾಡುವುದಕ್ಕೂ ಅಭ್ಯಂತರವನ್ನು ತೋರಿಸಿದರೂ ಕೂಡ ಒಬ್ಬ ದೊಡ್ಡ ಮನುಷ್ಯನಲ್ಲಿ ತೋರಿಸಬೇಕಾದ ಮರಾದೆಗಳನ್ನೆಲ್ಲ ಈ ತನಲ್ಲಿ ಮಾಡಿ ತೋರಿಸಿದರು. ಆದರೆ ಇಂಗ್ಲೆಂಡ್ ಸರಕಾರದವರು ರಾಮಮೋಹನನು ಆ ಬಿರುದನ್ನು ಧರಿಸುವುದಕ್ಕೆ ಅಂಗೀಕರಿಸಿ ಬೋರ್ಡ್ ಆಫ್ ಕಂಟ್ರೋಲ್ ' ನಲ್ಲಿ ಪ್ರಸಿಡೆಂ ಟರಾಗಿದ್ದ ಸರ್. ಜಿ. ವಿ. ಹೌಡಾಯಿಸ್‌ ಎಂಬ ಪ್ರಮುಖನ ಮೂಲಕ ಇವನನ್ನು ತಮ್ಮ ಬಳಿಗೆ ಕರೆಯಿಸಿಕೊಂಡರು, ಮತ್ತು ರಾಜಕಿರೀಟಧಾರಣ ಮಹೋತ್ಸವದ ದಿನ ಇತರ ರಾ ಜ್ಯಗಳಿಂದ ಬಂದ ರಾಯಭಾರಿಗಳ ಸಂಗಡ ಸಮಾನವಾಗಿ ಆಸನವನ್ನಿತ್ತು ಈತನನ್ನ ಗೌರ ಐಸಿದರು, ಮರಳಿ ಬಂರ್ಡ ಪಟ್ಟಣದಲ್ಲಿ ಕಟ್ಟಿಸತೊಡಗಿದ ಸೇತುವೆಯ ಪ್ರಾರಂಭಮಹೋ ತ್ಸವದ ದಿನ ಕೂಡಿದ ಮಹಾಸಭೆಯಲ್ಲಿ ಪ್ರಭುಪಕ್ಷವಾಗಿ ಒಂದು ಪತ್ರದ ಮೂಲಕ ಇವ ನಿಗೆ ಆಮಂತ್ರಣ ಕೊಟ್ಟರು.