ವಿಷಯಕ್ಕೆ ಹೋಗು

ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಜಾ ರಾಮಮೋಹನರಾಯರ ಜೀವಿತ ಚರಿತ್ರ ಇವುಗಳಲ್ಲದೆ ಸರಕಾರದವರು ರಾಮಮೋಹನರಾಯನು ತನ್ನ ದೇಶೀಯರ ಪಕ್ಷ ವಾಗಿ ಅವರ ಕ್ಷೇಮವಿಷಯದಲ್ಲಿ ಕೆಲವು ಸಂಗತಿಗಳನ್ನು ತಿಳಿಸಲು ಅವಕಾಶಕೊಟ್ಟರು. ಇದಕ್ಕೋಸ್ಕರವಾಗಿಯೇ ಅನೇಕ ಶ್ರಮಗಳನ್ನು ಸಹಿಸಿ ತಾನು ಇಷ್ಟು ದೂರ ಬಂದಿದ್ದ ನು, ಆದುದರಿಂದ ಇದು ತನ್ನಲ್ಲಿ ತೋರಿದ ಮರಾದೆಗಳೆಲ್ಲಕ್ಕಿಂತ ಹೆಚ್ಚಾದುದೆಂದು ಆತನು ಭಾವಿಸಿದನು. 1831 ರಲ್ಲಿ ಹಿಂದುದೇಶದ ಸ್ಥಿತಿಗಳನ್ನು ಕುರಿತು ಒಂದು ಶಾಸನ ವನ್ನು ಏರ್ಪಡಿಸುವುದಕ್ಕೆ ಹೌಸ್ ಆಫ್ ಕಾರ್ಮಸ್‌ ಎಂಬ ಪಾರ್ಲಿಮೆಂಟಿನ ಪ್ರಜಾ ಪ್ರತಿ ನಿಧಿಸಭೆಯವರು ಪ್ರಾರಂಭಿಸಿ, 1832 ನೆಯ ವರುಷದ ಕೊನೆಯತನಕ ಮಸೂದೆಗಳನ್ನು ಬರೆದು, ಪಾರ್ಲಿಮೆಂಟಿನಲ್ಲಿ ಹೌಸ್ ಆಫ್ ಲಾರ್ಡ್ಸ್ ಪ್ರಭುಗಳ ಸಭೆಯಲ್ಲಿ 1933 ನೆಯ ವರುಷದಲ್ಲಿ ಅಂಗೀಕಾರಕ್ಕೋಸ್ಕರ ಇಟ್ಟರು, ಶಾಸನದಲ್ಲಿನ ಚಿತ್ತುಗಳನ್ನು ಬರೆಯುವಾಗ ಅಗತ್ಯವಾದ ಸಾಕ್ಷಗಳನ್ನು ಆ ಸಭೆಯವರು ಹಿಂದೂದೇಶದ ಸ್ಥಿತಿಗತಿಗಳನ್ನು ಸ್ವಾನು ಭವದಿಂದ ತಿಳಿದಿದ್ದ ಮಂದ ತೆಗೆದು ತಿಳಿದುಕೊಳ್ಳಲಿದ್ದರು, ಅಂತವರಲ್ಲಿ ಹಿಂದೂದೇಶ ನಿವಾಸಿಯಾಗಿ ಸ್ವದೇಶವನ್ನು ಧ್ವಂಸಲಿಕ್ಕೆ ಒದ್ದ ಕಂಕಣನಾಗಿ ಆ ಕಾರವು ಮುಗಿಯುವ ತನಕ ಅದೇ ಕೆಲಸಕ್ಕೋಸ್ಕರ ಅಲ್ಲಿಯೇ ವಾಸಮಾಡಿಕೊಂಡಿದ್ದವನು ರಾಮಮೋಹನನೂ ಬೃನೇ ಆ ಕಾಲದಲ್ಲಿ ಆ ಶಾಸನ ನಿರಾಣಕ್ಕಾಗಿ ಚರ್ಚಿಸುತ್ತಿದ್ದ ಎಲ್ಲಾ ವಿಷಯಗಳಲ್ಲಿಯೂ ಈತನ ಸಂಗಡ ಆಲೋಚಿಸುತ್ತಿದ್ದರು, ಮತ್ತು ಆ ದಿನಗಳಲ್ಲಿ ಪಾರ್ಲಿಮೆಂಟಿನ ಎರಡು ಸಭೆಗಳಲ್ಲಿರುವ ಪ್ರಮುಖರಾದ ಸಭಿಕರೆಲ್ಲರೂ ಈತನನ್ನು ಯಾವಾಗಲೂ ನೋಡುತ್ತಲೇ ಇದ್ದರು. ನ್ಯಾಯಸ್ಥಾನಗಳ ಮಾಪಳ ಗಳನ್ನು , ಸ್ವದೇಶೀಯರಾದ ನ್ಯಾಯಾಧಿಕಾರಿಗಳಿಗೆ ಯೂರೋಪ್ ಖಂಡದವರ ಮೇಲಿರುವ ಅಧಿಕಾರವ್ಯಾಪ್ತಿ, ಜೂರೀಪದ್ದತಿ, ಎಕ್ಸಿಕ್ಯುಟಿವ್' ಮತ್ತು ಜುಡಿಷಿಯಲ್ ಕೆಲಸಗಳ ನಿಭಟನೆ, ಸತ್ಕಾರದವರ ಅಭೆಗಳನ್ನು ಗ್ರಂಧರೂಪವಾಗಿ ಪ್ರಕಟಿಸುವುದು, ಅಕ್ಕುಗಳನ್ನೇರ್ಪಡಿಸುವಾಗ ದೇಶೀಯರ ಅಭಿಪ್ರಾಯಗಳನ್ನು ಪಡೆಯುವುದು, ಸ್ವದೇಶಸೈನ್ಯಗಳನ್ನೇರ್ಪಡಿಸುವುದು, ದೇಶಿಯರಾದವರಿಗೆ ಸರ್ಕಾರದಲ್ಲಿ ದೊಡ್ಡ ದೊಡ್ಡ ಅಧಿಕಾರಗಳನ್ನು ಕೊಡುವುದು, ಸಿಎಲ್ ಸ್ವಸ್ಥಿಗೆ ಸೇರತಕ್ಕ ವರ ವಯಸ್ಸಿನ ಪರಿಮಾಣ, ಜ ರ್ಮಿದಾರರ ಸ್ಥಿತಿಯಲ್ಲಿ ಸುಧಾರಣೆ, ಅವರ ರಕ್ಷಣೆಗಾಗಿ ಒಂದು ಕಾನೂನನ್ನು ಏರ್ಪಡಿಸು ವುದು, ಭೂಮಿಯ ಕಂದಾಯವನ್ನು ಶಾಶ್ವತಗೊಳಿಸುವುದು, ಇವೇ ಮೊದಲಾದ ದೊಡ್ಡ ದೊಡ್ಡ ವಿಷಯಗಳಲ್ಲಿ ರಾಮಮೋಹನನು ಕೊಟ್ಟ ಅಭಿಪ್ರಾಯಗಳು ಅಮೋಘಗಳಾಗಿವೆ. ಈತನು ಎಷ್ಟು ದೂರ ಆಲೋಚಿಸಿ, ಎಂತಹ ರಾ ಒತಂತಾನುಭವವನ್ನು ಈ ಸಾಕ್ಷ್ಯಗಳಲ್ಲಿ ತೋರಿಸಿದನೋ ಅದನ್ನು ತಿಳಿದುಕೊಳ್ಳುವುದಕ್ಕೂ, ಅದರಲ್ಲಿನ ಪ್ರತಿಯೊಂದು ಶಬ್ದವೂ, ರಾ ಜ್ಞಾಂಗವಿಷಯದಲ್ಲಿ ಎಷ್ಟು ಮತಭೇದಗಳಿದ್ದರೂ ಎಲ್ಲರಿಂದಲೂ ನೋಡಲ್ಪಡತಕ್ಕದ್ದಾಗಿದೆ. ಆತನು ಭೂಮಿಯ ಕಂದಾಯದ ನಿರ್ಣಯವನ್ನು ಕುರಿತು ಬರೆದುಕೊಟ್ಟ ಸಾಕ್ಷ್ಯ ವು 1831 ನೆಯ ಇಸವಿ ಆಗಸ್ಸು 19 ರಲ್ಲಿ ಬರೆದನು, ಜುಡಿಷಿಯಲ್ ಏರ್ಪಾಡುಗಳ ಸಾ ಕ್ಷವು 1831 ನೆಯ ಸೆಪ್ಟಂಬರು 19 ರಲ್ಲಿ ಕೊಟ್ಟಿದ್ದು, ಈತನು 1831 ನೆಯ ಸೆಪ್ಟೆಂಬರ