ರಾಜಾ ರಾಮಮೋಹನರಾಯರ ಜೀವಿತ ಚರಿತ್ರ. 191 ಕಾಂಟಿರವರು ಲಂರ್ಡನಗರದಲ್ಲಿದ್ದುದರಿಂದ ರಾಮಮೋಹನನಿಗೆ ಪ್ರಾಣಾಪ್ತರಾದರೆಂದು ಮೊದಲೇ ತಿಳಿಸಿರುವೆವು. ಇದರಿಂದ ಡಾಕ್ಟರ್ ಕಾರ್ಪೆಂಟರನಿಗೂ ಬ್ರಿಸ್ಟಲಿನಲ್ಲಿರುವ ಇತರ ಸ್ನೇಹಿತರಿಗೂ ತಮ್ಮ ಪಟ್ಟಣದಲ್ಲಿ ರಾಮಮೋಹನನಿಗೆ ಸ್ವಾಗತವನ್ನಿ ತು ಗೌರವಿಸಬೇಕೆಂಬ ಕೋರಿಕೆಯು ಬಲವಾಗಿದ್ದುದರಿಂದ ಅವರು ಅನೇಕ ಸಾರಿ ತಾವು ನಮ್ಮ ಪಟ್ಟಣಕ್ಕೆ ದಯ ಮಾಡಿಸಬೇಕೆಂದು ಪ್ರಾರ್ಥಿಸುತ್ತಾ ಬಂದರು. ಅವರ ಅಭಿಪ್ರಾಯವನ್ನನುಸರಿಸಿ, ಅಲ್ಲಿಗೆ ಒಂದು ವೇಳೆ ಹೋಗಿ ಬರಲಿಕ್ಕೆ ಆತನ ಇಷ್ಟವೂ ಇತ್ತು. ಆದರೆ ತನ್ನ ದೇಶದ ಹಿತವನ್ನು ಕುರಿತ ಕಾರ್ ಗಳು ಮಿಕ್ಕ ಎಲ್ಲಾ ಕೆಲಸಗಳಿಗಿಂತಲೂ, ಬಹು ಮುಖ್ಯವಾಗಿಯ ಅಗತ್ಯ ವಾಗಿ ಮಾಡಬೇಕಾದುವುಗಳಾಗಿಯೂ, ಇದ್ದುದರಿಂದ ವಿಧಿ ಇಲ್ಲದೆ ಅವರ ಕೋರಿಕೆಗಳನ್ನು ಒಡನೆಯೇ ನೆರವೇರಿಸಲಾರದೆ ಹೋದನು. ಈ ಕಾರಣದಿಂದಲೇ ಅವರು ಸುದಾ ಈತನನ್ನು ಬಲವಂತಪಡಿಸಲಾರದೆ ಇದ್ದರು, ಆದುದರಿಂದ ತನ್ನ ಪ್ರಯತ್ನಗಳಿಗೆ ಜತೆಯಾದ ದೈವ ಸಹಾಯದಿಂದ ಆಗಬೇಕಾದ ಕಾಕ್ಯಗಳೆಲ್ಲವೂ ನೆರವೇರಿದ ಕೂಡಲೆ “ ನನಗೆ ಇಲ್ಲಿಯ ಕೆಲಸ ಗಳೆಲ್ಲವೂ ನೆರವೇರಿದುವು. ಆದುದರಿಂದ ತಪ್ಪದೆ ಈ ತಿಂಗಳ ಕೊನೆಯಲ್ಲಿ ನಿಮ್ಮೆಲ್ಲರ ಸಾನ್ನಿ ಧ್ಯಕ್ಕೆ ಬರುವೆನು, ನನ್ನ ದೇಶಕ್ಕೆ ಪತ್ರಗಳನ್ನು ಬರೆಯತಕ್ಕದ್ದೆಂಬ ಎರಡನೇ ಕೆಲಸವು ಇನ್ನೂ ಉಳಿದಿರುವುದು, ಅದರಿಂದ ಇಷ್ಟು ಸಂಕ್ಷೇಪವಾಗಿ ಬರೆದು ಮುಗಿಸಿದ್ದಕ್ಕೆ ನಿಮ್ಮ ಕ್ಷಮೆಯನ್ನು ಬೇಡುವೆನು ” ಎಂದು 1833 ನೆ ಆಗಸ್ಟ್ 1 ರಲ್ಲಿ ಬ್ರಿಸ್ಟಲ್ ನಗರವಾಸಿ ಗಳಿಗೆ ಒಂದು ಪತ್ರವನ್ನು ಬರೆದನು. ನನ್ನ ಕೆಲಸಗಳೆಲ್ಲವೂ ಸಂತೋಷವಾಗಿ ನೆರವೇರಿದುವೆಂದು ಗಾಮಮೋಹನನು ಯಾವ ದಿನದಲ್ಲಿ ಬರೆದನೋ ಆ ದಿನದಲ್ಲಿಯೇ ಹಿಂದೂದೇಶವನ್ನು ಕುರಿತು ಬರೆದ ನೂತನ ತೀರಾ ನವು ಹೌಸ್ ಆಫ್ ಲಾರ್ಡ ಸಭೆಯವರ ಅಂಗೀಕಾರವನ್ನು ಹೊಂದಿ, ತರುವಾಯ ಆಗಸ್ಟ್ 23ನೆ ತಾರೀಖಿನಲ್ಲಿ ರಾಜನ ಅನುಮತಿಯನ್ನು ಪಡೆದು ಕಾನೂನಿನ ರೂಪವಾಗಿ ಪ್ರಕಟಿಸಲ್ಪಟ್ಟಿತು. ಆ ಕಾಲದ ಹಿಂದೂದೇಶದ ಇತಿಹಾಸವನ್ನೋದಿದವರಿಗೆ 1833 ರಲ್ಲಿ ಪ್ರಕಟಿಸ ಲ್ಪಟ್ಟ ಕಾನೂನಿನಿಂದ ಹಿಂದೂದೇಶದ ರಾಜ್ಯಾಂಗವಿಷಯದಲ್ಲಿ ಎಷ್ಟು ಘನವಾದ ಮಾ ರ್ಪಾಡುಗಳು ಉಂಟಾದುವಂದು ಪ್ರತ್ಯೇಕವಾಗಿ ಹೇಳಬೇಕಾದ ಅಗತ್ಯವಿರುವು ದಿಲ್ಲ. ಆ ಸಂವತ್ಸರದಲ್ಲಿಯೇ ಈಸ್ಟಿಂಡಿಯಾ ಕಂಪೆನಿಯವರ ವರ್ತಕ ಸಂಬಂಧವ ತೊಲಗಿತು, ಹಿಂದು ಸ್ಥಾನ, ಚೀನಾ, ಮೊದಲಾದ ಪ್ರದೇಶಗಳೊಂದಿಗೆ ವ್ಯಾಪಾರಮಾಡಲಿಕ್ಕೆ ಎಲ್ಲರಿಗೂ ಸ್ವಾತಂ ತ್ರವು ಕೊಡಲ್ಪಟ್ಟಿತು, ದೇಶೀಯರಿಗೆ ದೊಡ್ಡ ದೊಡ್ಡ ಅಧಿಕಾರಗಳನ್ನು ಕೊಡಬಹುದೆಂದು ಪಾರ್ಲಿಮೆಂಟಿನವರು ಅಂಗೀಕುಸಿದರು, ಸಾವಿರ ಹೇಳಲೇಕೆ? ಅಂದಿನಿಂದಲೇ ಹಿಂದೂದೇಶದ ಇತಿಹಾಸದಲ್ಲಿ ಬ್ರಿಟಿಷರ ಪ್ರಭುತ್ವ ಭಾಗಕ್ಕೆ ಒಂದು ಹೊಸ ಶಕೆ ಏರ್ಪಟ್ಟಿತು, ಆದರೆ ಈ ನೂತನ ಶಕಾರಂಭಕ್ಕೆಲ್ಲವೂ ರಾಮಮೋಹನರಾಯನ ಪ್ರಬಲವಾದ ಪ್ರಯತ್ನವೇ ಕಾರಣವೆಂ ತಲೂ, ಇದಕ್ಕಾಗಿ ಆತನು ತನ್ನ ಭಾಗ್ಯವನ್ನೂ, ತನ್ನ ಜೀವಿತವನ್ನೂ, ಪ್ರಪಂಚದಲ್ಲೆಲ್ಲಾ ತನಗೆ ತುಂಬಾ ಪ್ರಿಯವಾದ ಪದಾರ್ಥ ಯಾವುದೋ ಅದನ್ನೂ (ದೇಹವನ್ನು) ಕೂಡ ಧಾರೆ
ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೧೧೦
ಗೋಚರ