ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೪ ರಾಜಾರಾಮಮೋಹನರಾಯರ ಜೀವಿತ ಚರಿತ್ರ ಯೆರೆದನೆಂಬುದನ್ನೂ ಬಲ್ಲವರು ಕೆಲವರು ಮಾತ್ರವೇ ಇರುವರು, ನಮಗೋಸ್ಕರ ಇಷ್ಟು ಶ್ರಮೆಯನ್ನು ಹೊಂದಿದ ಈ ಮಹಾನುಭಾವನ ಋಣವನ್ನು ಎಷ್ಟು ಜನ್ಮಗಳಿಗಾದರೂ ನಾವು ತೀರಿಸಲಾರೆವಷ್ಟೆ ? ಆರನೆಯ ಪ್ರಕರಣ. ಕ ಸೆಪ್ಟಂಬರ್ ತಿಂಗಳ ಆರಂಭದಲ್ಲಿಯೇ ರಾಮಮೋಹವನು ಲಂಡನ್ನಿನಿಂದ ಸ್ವೀಪಲ್ ರ್ಟಗೋವಿಗೆ ಸೇರಿದನು, ಡೇವಿಡ್ ಹೇರನ ತಮ್ಮನ ಮಗಳಾದ ಮಿಸ್ ಹೇರ್ ಎಂಬು ವಳೂ ರಾಮರತ್ನ ಮುಕರ್ಜಿ, ರಾಮಹರಿಮುಕರ್ಣಿ ಎಂಬ ನೃತ್ಯ ಇಬ್ಬರೂ ಈತನ ಜತೆಯಲ್ಲಿ ದ್ದರು. ರಾಜಾರಾಂ ಎಂಬ ಹುಡುಗನನ್ನು ಇದುವರೆಗೆ ಒಂದುಸಾರಿ ಮಿಸ್‌' ಕೇಡಲ್ ಎಂಬ ಸಾದ್ವಿಯು ತನ್ನ ಬಳಿಯಲ್ಲಿಟ್ಟು ಕೊಂಡಿದ್ದಳು. ಸ್ಟಿಪಲ್‌ರ್ಟಗೋವ್ ಎಂಬುದು ಬ್ರಿಸ್ಟಲ್ ಪಟ್ಟಣಕ್ಕೆ ಹೊಂದಿಕೆಯಾಗಿ ಕಟ್ಟಿ ಲ್ಪಟ್ಟು, ವಿಹಾರಯೋಗ್ಯವಾಗಿಯೂ, ಅಂದವಾಗಿಯೂ ಇರುವ ದಿವ್ಯಭವನವು, ಬ್ರಿಸ್ಟ ೮ನಗರದಲ್ಲಿ ಒಂದಾನೊಂದು ಕಾಲದಲ್ಲಿ ತುಂಬಾ ಘನತೆ ನಡೆದ ಪ್ರಸಿದ್ಧ ವರ್ತಕನಾದ ಮಿಸ್ಟ್ ರ್ ಮೆಕಾಯಿಲೆ'ಕ್ಯಾಸಲ್ ಎಂಬಾತನು ಅದನ್ನು ಕಟ್ಟಿಸಿದನು, ಆದರೆ ಕ್ಯಾಸಲ್ಲಿನ ಮರಣಾ ನಂತರದಲ್ಲಿ ಈ ಭವನಗಳು ಆತನ ಮಗಳಾದ ಮಿಸ್ ಕ್ಯಾಸಲ್ ಎಂಬವಳ ಸ್ವಾಧೀನಕ್ಕೆ ಬಂದುವು. ಮಿಸ್ ಕೇಡಲ್ ಎಂಬಾಕೆಯು ಎಸ್ ಕ್ಯಾಸಲ್ ಎಂಬವಳ ದೊಡ್ಡಮ್ಮನ ದಾದಿಯು, ಈಕೆಯೇ ಮಿಸ್ ಕ್ಯಾಸಲ್ಲಳ ಪೋಷಕಳಾಗಿದ್ದಳು ಇವರಿಬ್ಬರೂ ಡಾಕ್ಟರ್ ಕಾರ್ಪೆಂಟರಿನ ರಕ್ಷಣೆಯಲ್ಲಿದ್ದರು. ರಾಜಾ ರಾಮಮೋಹನರಾಯನು ಲಂರ್ಡಪಟ್ಟಣಕ್ಕೆ ಬಂದ ಕೆಲವು ದಿವಸಗಳಲ್ಲಿಯೇ ಡಾಕ್ಟರ್: ಕಾರ್ಪೆಂಟರು, ಈತನು ಯಾವಾಗಲಾದರೂ ಬ್ರಿಸ್ಟಲ್ ಪಟ್ಟಣಕ್ಕೆ ಬಂದಲ್ಲಿ ತನ್ನ ಮನೆಯು ವಿಶಾಲವಾಗಿಯ, ಸೌಖ್ಯ ಪ್ರದವಾಗಿಯೂ ಇರಲಾರದೆಂದು ತಿಳಿದು ಮಿಸ್ ಕ್ಯಾಸಲ್ಲಳ ಭವನದಲ್ಲಿ ಇಳಿದುಕೊಳ್ಳುವುದಕ್ಕೆ ಏರ್ಪಾಡು ಮಾಡಿದ್ದನು ಲಂಡನ್ನಿನಲ್ಲಿ ಕಾರ್ಪೆಂಟರವರ ಮೂಲಕ ಪರಿಚಿತರಾದ ಮಿಸ್ ಕೇಡಲ್, ಮಿಸ್ ಕ್ಯಾಸಲ್ ಎಂಬುವರು ತಮ್ಮ ಮನೆಯಲ್ಲಿ ಈ ಮಹನೀಯನು ವಾಸಮಾಡುವುದರಿಂದ ತಮಗೆ ತುಂಬ ಸಂತೋಷ ವೂ, ಘನತೆಯೂ ಉಂಟಾಗುವುದೆಂದು ಯಾವಾಗಲೂ ಯೋಚಿಸುತ್ತಿದ್ದರು. ಇದಲ್ಲದೆ ಅವರಿಗೂ ರಾಮಮೋಹನಸಿಗೂ ಉತ್ತರಪ್ರತ್ಯುತ್ತರಗಳಮೂಲಕ ಅನ್ನೋನ್ಯ ಪರಿಚಯ ಹೆಚ್ಚಾಗಿತ್ತು, ರಾಮಮೋಹನನು ಬ್ರಿಸ್ಟಲ್ ನಗರಕ್ಕೆ ಬಂದುದು ತನ್ನ ಸ್ನೇಹಿತರ ಇಷ್ಟ ವನ್ನು ನೆರವೇರಿಸುವುದರ ಉದ್ದೇಶದಿಂದಲೇ ಆದರೂ, ಲಂರ್ಡ ಪಟ್ಟಣಗಲ್ಲಿ ಇದ್ದಷ್ಟು ದಿನಗಳು