೧೧೮ ರಾಜ ರಾಮಮೋಹನರಾಯರ ಜೀವಿತ ಚರಿತ್ರ. ವರು, ನೀನು ಈ ಹಿಂದೂದೇಶವೊಂದಕ್ಕೆ ಮಾತ್ರವಲ್ಲ; ಈ ಪ್ರಪಂಚಕ್ಕೆ ಪ್ರಾಣ ಮಿತ್ರನಾಗಿದ್ದೀಯೇ,' - 'ಒಂದು ಕಡೆ ಸದ್ವಿದ್ಯಾ ಮೃತಗಳೆಂಬ ಭೂಷಣಗಳಿಂದ ದೇಶಮೂತೆಯನ್ನು ಅಲಂ ಕರಿಸಿ, ಮತ್ತೊಂದುಕಡೆ ಹಲವು ಕಷ್ಟಗಳನ್ನು ಸಹಿಸಿ ಅಪಾರವಾದ ಸಮುದ್ರವನ್ನು ದಾಟಿ ಅಂಗ್ಲೆಯ ಪ್ರಭುತ್ವದ ಮಲಸ್ಥಾನಕ್ಕೆ ಹೋಗಿ, ವಿವಿಧಗಳಾದ ರಾಜ್ಯಾಂಗ ಸಂಸ್ಕರಣಗ ಳಲ್ಲಿ ಅಲ್ಲಿನ ವಿದ್ಯಾವಂತರೆಲ್ಲರಿಗೂ ಆಶ್ಚರ್ಯಜನಕವಾದ ವಿದ್ಯಾ ಚಾತುರವನ್ನು ತೋರ್ಪ ಡಿಸಿ ಅವರಿಗೆ ನ್ಯೂರ್ಟ, ಸಾಕ್ರೆಟೀಸ್, ಪ್ಲೇಬೆ ಎಂಬ ಮಹಾತ್ಮರು ಮರಳಿ ಭೂಮಿ ಯಲ್ಲಿ ಅವತರಿಸಿರಬಹುದೆಂಬ ಭ್ರಾಂತಿಯುಂಟಾಗುವಂತೆ ಮಾಡಿದ ನಿನ್ನ ಪವಿತ್ರ ಸ್ವರೂಪವು ಆಕಾಲಕ್ಕೆ ಒಂದು ಅಪರೂಪಪದಾರ್ಥವಾಗಿದ್ದಿತು, ಆಕಾಲಕ್ಕೆ ಮಾತ್ರವಲ್ಲ, ಈಗಲೂ ಈ ದೇಶದಲ್ಲಿ ನಿನ್ನಂತಹ ಮಹಾಶಕ್ತಿವಂತನನ್ನು ಕಾಣುವುದು ದುರ್ಲಭವಾಗಿದೆ.' 'ಸಹಗಮನ ನಿಷೇಧ, ಬ್ರಹ್ಮಧರ್ಮಪ್ರಚಾರ, ಸ್ವದೇಶೀಯರಿಗೆ ದೊಡ್ಡ ಅಧಿಕಾರಗ ಳನ್ನು ಕೊಡುವುವಕ್ಕೆ ಪ್ರಯತ್ನ ಮುಂತಾದ ಅನೇಕ ಕಾಠ್ಯಗಳು ನಿನ್ನನ್ನು ಶಾಶ್ವತವಾಗಿ ಸ್ಮರಿಸುವಂತೆ ಮಾಡುತ್ತಲಿವೆ. ಈ ಪೂರ್ವಾರ್ಧಗೋಳಕ್ಕೆ ನೀನು ಇಷ್ಟರ ಉಪಕರವನ್ನು ಮಾಡಿದ್ದನ್ನು ನೋಡಿಯೇ ಪಶ್ಚಿಮಾರ್ಧಗೋಳದವರೆಲ್ಲರೂ ನಿನ್ನ ಗೌರವವನ್ನು ಶಿರಸಾವಹಿ ಸುತಲಿದ್ದರು. ನಿನ್ನ ಪವಿತ್ರ ಹೃದಯವು ಇನ್ನೆಷ್ಟು ಮಹೋಪಕಾರಗಳನ್ನು ಮಾಡಬೇಕೆಂ ದು ಆಲೋಚಿಸಿದ್ದಿ ತೋ ಆದರೆ ನಮ್ಮ ದುರದೃಷ್ಟವಶದಿಂದ ಅವುಗಳೆಲ್ಲವೂ ವ್ಯರ್ಥವಾಗಿ ಹೋದವು, ಬ್ರಿಸ್ಟಲ್ ನಗರವೇ ! ನೀನು ಎಷ್ಟರ ಘೋರಕಾರವನ್ನು ಮಾಡಿದೆ ! ಅಮೃತ ತುಲ್ಯವಾದ ಫಲಗಳನ್ನು ಕೊಡುತ್ತಿರುವ ನಮ್ಮ ಪಾಲಿನ ಕಲ್ಪವೃಕ್ಷವನ್ನು ಬುಡಸಹಿತವಾಗಿ ಕಡಿದುಹಾಕಿದೆಯಲ್ಲವೆ !' “ಅಕ್ಕಟಾ ! 1833 ನೆಯ ಸಂವತ್ಸರದ ಸೆಪ್ಟಂಬರ' 27 ನೆಯ ದಿನವು ಎಂತಹ ದು ರ್ದಿನವೋ ! ತನ್ನ ಜೀವಿತವನ್ನೆಲ್ಲ ದೇಶೋದ್ಧರಣಕ್ಕಾಗಿ ಧಾರೆಯನ್ನೆರದ ಮಹಾತ್ಮನನ್ನು ಕೊಂಡುಹೋದ ಆ ದಿನವು ದೇಶಕ್ಕೆಲ್ಲವೂ ದುರ್ದಿನವೆನಿಸದೆ ಇರುವುದೆ ? ಸಿಕ್' ಜನರಿಗೆ ಮಹಾರಾಜಾ ರಣಜಿತಸಿಂಗನು ಮರಣಹೊಂದಿದಾಗ ಉಂಟಾದ ದುಃಖವೇ ನಮಗೆ ಈದಿನ ದಲ್ಲಿ ಉಂಟಾಯಿತು, ಎಲೈ ಬೇಸಾಯಗಾರರಿ! ಯಾವನು ನಿಮಗೋಸ್ಕರ ಪರದೇಶಗ ಳಿಗೆ ನೀವು ಹೇಳಿಕೊಳ್ಳದಿದ್ದರೂ ಹೋಗಿ, ನಿಮ್ಮ ಯೋಗಕ್ಷೇವುಗಳನ್ನು ಕುರಿತು ಪ್ರಯತ್ನ ಪಟ್ಟನೋ ಅಂತಹ ಮಹಾತ್ಮನಾದ ರಾಜಾರಾಮಮೋಹನರಾಯನನ್ನು ಈ ದಿನದಲ್ಲಿಯೇ ಕೂರ ಮೃತ್ಯುವು ತನ್ನ ಬಾಯಲ್ಲಿ ಹಾಕಿಕೊಂಡಿತಲ್ಲವೆ ! ಎಲ್ ಅನಾಧ ಯುವತಿಯರಿರ ! ದುರಂತಗಳಾದ ನಿಮ್ಮ ಕಷ್ಟಗಳನ್ನು ತೊಲಗಿಸಿ ನಿಮ್ಮ ಚಾ ತಿಯನ್ನೆಲ್ಲ ಅಧಿವೃದ್ಧಿಗೆ ತರಬೇ ಕೆಂಬ ಬಯಕೆಯು ಯಾವನ ಹೃದಯದಲ್ಲಿ ಪುಂಖಾನುಪುಂಖವಾಗಿ ಉದ್ಭವಿಸುತ್ತಲಿದ್ದಿ ತೋ, ಕೇಳಿದಕೂಡಲೇ ಎದೆಯ ಗುಂಡಿಗೆಯನ್ನು ನಡುಗಿಸುವ ಸಹಗಮನ ಘೋರ ದುರಾಚಾರ ಮೃತ್ಯು ಕರಾಳಾಸ್ಯಗಹ್ವರದಲ್ಲಿ ಪ್ರವೇಶಿಸದಂತೆ ನಿಮ್ಮನ್ನು ಯಾವನು ಕಾಪಾಡಿದನೋ
ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೧೨೫
ಗೋಚರ