೧ುಗಿ ರಾಜಾ ರಾಮಮೋಹನರಾಯರ ಜೀವಿತ ಚರಿತ್ರ. ಏಳನೆಯ ಪ್ರಕರಣ, ರಾಜಾ ರಾಮಮೋಹನರಾಯರ ಯೋಗ್ಯತೆಗಳು. ದೇಹಬಲವೂ ಆರೋಗ್ಯವೂ. ರಾಮಮೋಹನನ ದೇಹ, ಜ್ಞಾನ, ಮನಸ್ಸು, ಮತಾಭಿಪ್ರಾಯಗಳು, ಬುದ್ದಿ ಬಲ ಇವುಗಳನ್ನೆಲ್ಲ ಯೋಚಿಸಿನೋಡಿದರೆ ಆತನು ಅಸಾಧಾರಣನೆಂದು ಹೇಳಬಹುದು, ಆತನು ಆರು ಅಡಿಗಳ ಎತ್ತರವುಳ್ಳವನಾಗಿದ್ದನು, ಅವನ ಸ್ವರೂಪವು ಮನೋಹರವಾದುದು, ಶರೀರದಲ್ಲಿ ವಿಕಾರವಿಲ್ಲ, ಆತನು ತುಂಬಾ ಬಲಶಾಲಿ ; ದೇಹಬಲಕ್ಕೂ ಬುದ್ಧಿ ಬಲಕ್ಕೂ ಅನೇಕ ವಿಧಗಳಿಂದ ಸಂಬಂಧವು ಉಂಟೆಂದು ಪ್ರಾಚೀನಾಧ್ಯರಿಗೆ ಚೆನ್ನಾಗಿ ಗೊತ್ತುಂಟು, ಮೊಳಕಾಲಿ ನವರೆಗೆ ಉದ್ದವಾದ ಕೈಗಳಿರುವಿಕೆಯು (ಆಜಾನುಬಾಹುವು) ಘನತೆಯುಳ್ಳವರಿಗೆ ಲಕ್ಷಣ ವೆಂದು ಅವರು ಅದುವರಿಗೆನೆ ಕಂಡುಹಿಡಿದಿದ್ದರು. ಈಗಿನ ಅಮೆರಿಕಾ, ಯೂರೋಪ್ ಖಂಡಗಳಲ್ಲಿನ ವಿದ್ವಾಂಸರು ಸದಾ ದೇಹಬಲಕ್ಕೂ, ಬುದ್ಧಿ ಬಲಕ್ಕೂ, ಸವಿಾಪಸಂಬಂಧ ವಿರುವುದೆಂದು ತಿಳಿದುಕೊಂಡಿರುವರು. ಶಾರೀರಶಾಸ್ತ್ರವೇತ್ತರಲ್ಲಿ ಪ್ರಸಿದ್ದಿಯನ್ನು ಹೊಂದಿದ ಸ್ಪಿರ್ಜ೦” ಎಂಬ ಪಂಡಿತನಿಗೆ ಇಂಗ್ಲೆಂಡಿನಲ್ಲಿ ರಾಮಮೋಹನನು ಪರಿಚಿತನಾದಾಗ ಈತನ ಹಣೆಯ ಆಕಾರವನ್ನು ನೋಡಿ, ಈತನು ಸಾಮಾನ್ಯ ಪುರುಷನಲ್ಲವೆಂದು ತಿಳಿದುಕೊಂಡನು. ಮತ್ತು ಆ ದೇಶದ ಶಾರೀರಕಾಸ್ತ್ರ ಸಂಹಿತರೆಲ್ಲರೂ ರಾಮಮೋಹನನ ತಲೆಗೆ ಸರಿಯಾಗಿರು ವಂತೆ ಒಂದು ಕಲ್ಪಿತಶಿರಸ್ಸನ್ನು ಮಾಡಿಕೊಂಡರು, ಆತನ ಮೆದುಳು ಮಹಾಬುದ್ಧಿಶಾಲಿ ಗಳ ಮೆದುಳುಗಳಿಗಿಂತ ದೊಡ್ಡದಾಗಿತ್ತು, ಬ್ರಿಸ್ಟಲ್‌ನಗರದ ವೈದ್ಯರು ಈತನ ಶಿರೋವೇ ಹೃನ (ರುಮಾಲೆ) ವನ್ನು ಅರುವತ್ತು ವರುಷಗಳ ತನಕ ತಮ್ಮಲ್ಲಿ ಮರೆಮಾಡಿಟ್ಟಿದ್ದರು. ಪಂಡಿತ ಶಿವರಾಮಶಾಸ್ತ್ರಿ ಎಂಬ ನಮ್ಮ ದೇಶೀಯನು ಅಲ್ಲಿಗೆ ಹೋದಾಗ ಅದನ್ನು ಮರಳಿ ನಮ್ಮ ದೇಶಕ್ಕೆ ತಂದನು ಆದು ದೊಡ್ಡದೊಡ್ಡ ತಲೆಗಳಿಗೆ ಸುದಾ ಸಡಿಲವಾಗಿದ್ದಿತು, ಆತನು ಅಂದವಾದ ಸ್ವರೂಪವುಳ್ಳವನೆಂತಲೂ, ಇಂಗ್ಲೆಂಡಿನವರೆಲ್ಲರೂ ಈತನ ರೂಪವನ್ನು ನೋಡಿ ಸಂತೋಷಿಸಿ, ವರ್ಣಿಸುತ್ತಿದ್ದರಂತಲ, ಮಿಸ್ ಕಾಲ್ವೆಂಟರ್ ಬರೆದಿರುವಳು. - ಆತನ ದೇಹಾರೋಗ್ಯವು ಸುಧಾ ಚೆನ್ನಾಗಿಯೇ ಇದ್ದಿತು. ಆತನು ಉಣ್ಣುವ ಭೋ ಜನವನ್ನು ನೋಡಿ, ಆಗಿನಕಾಲದವರಲ್ಲಿ ಅನೇಕರು ಆಶ್ವರ ಹೊಂದಿರುವರು, ಆತನು ದಿನಂ ಪ್ರತಿ ಹನ್ನೆರಡು ಸೇದುಗಳ ಹಾಲನ್ನು ಕುಡಿಯುತ್ತಿದ್ದನಂತೆ ! ಒಂದುದಿನ ಪಂದಿತ ಶಿವರಾಮ ಶಾಸ್ತ್ರೀಯ ಸಂಗಡ, “ಈದಿನ ಐವತ್ತು ಮಾವಿನಹಣ್ಣುಗಳನ್ನು ತಿಂದೆನು ಎಂದು ಹೇಳಿ ದನೆಂತ ಆತನು ಬರೆದಿರುವನು. ಕೃಷ್ಣನಗರವಾಸಿಯಾದ ಗುರುದಾಸಬಿಶ್ವ ಎಂಬಾತನು ಹುಗ್ಗಿಯಲ್ಲಿ ಉದ್ಯೋಗದಲ್ಲಿದ್ದಾಗ ರಾಮಮೋಹನನನ್ನು ಗೌರವಾರ್ಥವಾಗಿ ಒಂದುದಿನ ತನ್ನ ಮನೆಗೆ ಔತನಕ್ಕಾಗಿ ಕರೆದುಕೊಂಡು ಹೋಗಿ, ಭೋಜನಾದಿಗಳಾದಮೇಲೆ ಸ್ವಲ್ಪಹೊ 16
ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೧೨೮
ಗೋಚರ