ರಾಜಾ ರಾಮಮೋಹನರಾಯರ ಜೀವಿತ ಚರಿತ್ರ. ೧೨೩ ದಲ್ಲಿಯೂ, ವಿನಯಾದಿಯೋಗ್ಯತೆಗಳಲ್ಲಿಯೂ, ಈ ಮಹಾತ್ಮನು ಪಡೆದಿದ್ದ ಅದ್ಭುತಸಾ ಮರ್ಥಗಳೆಲ್ಲವೂ ಹೀಗೆ ಒಬ್ಬ ಮನುಷ್ಯನಲ್ಲಿಯೇ ಇರುವುದನ್ನು ನಾವೆಲ್ಲಿಯೂ ನೋಡಿದ್ದಿ ಲ್ಲವೆಂದು ರಾಮಮೋಹನನ್ನು ಶ್ಲಾಘಿಸಿ ಬರೆದರು ಇಲ್ಲಿ ಪಂಡಿತರೊಡನೆ ವಾದವು ಜರುಗು ತಿದ್ದಾಗ ಆತನ ಜ್ಞಾನವನ್ನು ನೋಡಿ ಅವರೆಲ್ಲರೂ ಆಶ್ವರ ಮಗ್ನ ಮಾನಸರಾಗುತ್ತಿದ್ದರು. ವೇದವೇದಾಂತ ಚರ್ಚೆಗಳಲ್ಲಿ ಅತನ ವಾಕ್ಯವಾಹಕ್ಕೆ ಅಡ್ಡಿ ನಿಲ್ಲಲಾರದೆ, ವ್ಯಾಕರಣ ನ್ಯಾಯ ಶಾಸ್ತ್ರವೇತ್ತರು, ಶ್ರುತಿಸ್ಮೃತಿ ವಿಶಾರದರು, ಕ್ರಿಸ್ತರ ಮತಚರ್ಚೆಗಳಲ್ಲಿ ಮಾರಿಟೀಮ್ಯಾನ್ ಮೊ ದಲಾದವರೆಲ್ಲರೂ ತುಟಿಪಿಟಿಕಿಸದೆ ಇರುವಂತೆ ಆದಿಯಲ್ಲಿ ತನ್ನ ತಪ್ರಮಾಣಗ್ರಂಥಗಳು ಬರೆ ಯಲ್ಪಟ್ಟ ಭಾಷೆಗಳಲ್ಲಿರುವ ಮುಖ್ಯವಾಕ್ಯಗಳನ್ನು ಉದಾಹರಿಸಿ, ಚರ್ಚಿಸುತ್ತಿದ್ದುದನ್ನು ಕು ರಿತು ಇದುವರಗೇನೆ ತಿಳಿಸಲ್ಪಟ್ಟಿದೆಯಷ್ಟೆ. ಈ ಮತದ ಪೂರ್ವೋತ್ತರವಿಷಯಗಳೆಲ್ಲವೂ ಹೇಗೆ ಕರತಲಾಮಲಕಗಳಾಗಿದ್ದ ವೋ ಹಾಗೆಯೇ ಹಿಂದುಗಳ ಮತ್ತು ಮಹಮ್ಮದೀಯರ ಪವಿತ್ರಗ್ರಂಥಗಳೆಲ್ಲವೂ ಆತನಿಗೆ ಹೃದಯಸ್ಥಗಳಾಗಿದ್ದುವು, ರಾಮಮೋಹನರಾಯನನ್ನು ಪಂಡಿತರು ಘನಪಂಡಿತನೆಂತಲೂ ಶಾಸ್ತ್ರಿಗಳೆಲ್ಲರೂ ದೊಡ್ಡ ಶಾಸ್ತ್ರಿಯೆಂತಲೂ, ಎಷನೇರಿಗಳು ಪರಮಾರ್ಥ ವನ್ನು ತಿಳಿದ ಸುಜ್ಞಾನಿಯೆಂತಲೂ, ಮಹಮ್ಮದೀಯ ಪಂಡಿತರೆಲ್ಲರೂ ಮೌಲ್ವಿ ಎಂತಲೂ ಸಂಭಾವಿಸುತ್ತ ಆತನನ್ನು ಕುರಿತು ಹಾಗೆಯೇ ಸಂಬೋಧಿಸುತ್ತಿದ್ದರು, ಇಷ್ಟು ಮಾತ್ರವೇ ಅಲ್ಲ ; ಆತನು ಸುಪ್ರಸಿದ್ಧರಾದ ವಾಚಾಲಕರನ್ನು ಮಾರಿದೆ ವಕ್ಯವೆಂತಲೂ, ಭಾಷಾವಿಧಿಗಳನ್ನು ಪ್ರಬೋಧಿಸಬಲ್ಲ ಭಾಷಾನಿಧಿಯೆಂತಲೂ, ರಾಜ್ಯಾಂಗ ನೀತಿವಿದರಿಗೆ ದೊಡ್ಡ ರಾಜತಂತ್ರಗಳನ್ನು ಕಲಿಸಬಲ್ಲ ರಾಜಕೀಯಾರ್ಧ ವಿಶಾರದನೆಂ ಕೆಲೂ ಈತನನ್ನು ವಿದ್ವಾಂಸರೆಲ್ಲರೂ ಹೊಗಳುತ್ತಿದ್ದರು. ಆತನ ಬುದ್ದಿಯು ಕುಶಾಗ್ರಬುದ್ದಿಯೆನಿಸಿದ್ದಿತು, ದಕ್ಷಿಣದೇಶದವನೊಬ್ಬನು ಆತ ನಿಗೆ ತಿಳಿಯದ ಭಾಷೆಯಲ್ಲಿ ಒಂದು ಪತ್ರವನ್ನು ಬರೆದು ಕಳುಹಿಸಿದನು ಆ ಭಾಷೆಯನ್ನು ಬಲ್ಲವರಿಂದ ಆ ಪತ್ರವನ್ನು ಓದಿಸಿ ತಿಳಿದುಕೊಂಡು, ಮೂರುತಿಂಗಳ ಕಾಲ ಶ್ರದ್ಧೆಯಿಂದ ಓದಿ ಆ ಭಾಷೆಯನ್ನು ಕಲಿತು, ಮರಳಿ ಆದೇ ಭಾಷೆ ಯಲ್ಲಿಯೇ ರಾಮಮೋಹನನು ಪ್ರತ್ಯುತ್ತರ ವನ್ನು ತಾನೇ ಬರೆದು ಕಳುಹಿಸಿದನು. ಇನ್ನು ಅಂಗೈಯಭಾಷೆಯಲ್ಲಿ ಈತನು ಪಡೆದಿದ್ದ ಪಾಂಡಿತ್ಯವನ್ನು ಇಂಗ್ಲಿಷರೇ ಅಧಿಕ ಕುತೂಹಲದಿಂದ ಹೊಗಳುತ್ತಿದ್ದರು. ಈತನು ಯಾ ವಾಗ ಏನು ಬರೆದರೂ ಒಂದಕ್ಷರವನ್ನಾದರೂ ತಪ್ಪು ಮಾಡದೆ ಬರೆಯುತ್ತಿದ್ದನೆಂದು ಮಿಸ್ ಕಾರ್ಪೆಂಟರ್ ಬರೆದಿರುವ ಗ್ರಂಥದಿಂದ ವಿಶದವಾಗುವುದು, ರಾಮಮೋಹನನು ತತ್ವಶಾಸ್ತ್ರ ದಲ್ಲಿ ಅಪರಿಮಿತ ಪ್ರಜ್ಞಾವಂತನು. ಆತನು ಯೂರೋಪಿಯನರ ತತ್ವಶಾಸ್ತ್ರವು ಚೆನ್ನಾಗಿಲ್ಲವೆಂತ ಲೂ, ಪ್ರಾಚೀನ ಹಿಂದುಗಳು ತತ್ವಶಾಸ್ತ್ರದಲ್ಲಿ ಎಲ್ಲರನ್ನೂ ಮಾರಿದ್ದರೆಂತಲೂ ಹಲವುಕಾರಣ ಗಳನ್ನು ತೋರಿಸಿ ಇಂಗ್ಲೆಂಡಿನ ವಿದ್ವಾಂಸರನ್ನೆಲ್ಲ ಒಪ್ಪುವಂತೆ ಮಾಡಿದನು. ಈತನಿಗೆ ಸರಕಾರದವರ ಕಾನೂನುಗಳೆಲ್ಲವೂ ನ್ಯಾಯವಾದಿ (ಬ್ಯಾರಿಸ್ಟರ್) ಗಳಿಗಿಂತ ಚೆನ್ನಾಗಿ ತಿಳಿದಿತ್ತು, ರಾಮಮೋಹನನ ಬಳಿಯಲ್ಲಿ ಆ ಕಾಲದಲ್ಲಿ ಪ್ರಚಾರದಲ್ಲಿದ್ದ ಶಾಸನ
ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೧೩೦
ಗೋಚರ