ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨& ರಾಜಾ ರಾಮಮೋಹನರಾಯರ ಜೀವಿತ ಚರಿತ್ರ. ಅವರನ್ನು ಕುಳ್ಳಿರಿಸಿಕೊಂಡಾಗಲಿ, ಅಥವಾ ತಾನೇ ನಿಂತುಕೊಂಡಾಗ ಮಾತನಾಡಿ ಕಳು ಹುತ್ತಿದ್ದನ: * ಟಿಬೆಟ್ಟಿನಲ್ಲಿಯ ಸ್ತ್ರೀಯರು ತನ್ನ ಪ್ರಾಣಗಳನ್ನು ಕಾಪಾಡಿದಂದಿನಿಂದಲೇ ಆತನ ಹೃದಯದಲ್ಲಿ ಈ ಅಭಿಪ್ರಾಯವು ಅಂಕುರಿಸಿತು. ಟಿಕೆಟ್', ಇಂಡಿಯಾ, ಇಂಗ್ಲೆಂಡ್, ದೇಶಗಳಲ್ಲೆಲ್ಲ ಈತನು ತನ್ನ ಬಾಲ್ಯ, ಯೌವನ, ವಾರ್ಧಕ್ಯಗಳಲ್ಲಿ ಯಾವಾಗಲೂ ಸ್ತ್ರೀ ಪಕ್ಷಾವಲಂಬಿಯಾಗಿಯೇ ಇದ್ದನು. ಸಹಗಮನವನ್ನು ಅಡ್ಡಿ ಮಾಡುವುದಕ್ಕೆ ಆತನು ಎಷ್ಟೆ ಸ್ಕೋ ಪ್ರಯತ್ನಗಳನ್ನು ಮಾಡಿದನು, ದೊಡ್ಡ ದೊಡ್ಡ ಗ್ರಂಥಗಳನ್ನು ಬರೆದುದು ಮಾತ್ರ ವಲ್ಲದೆ ಗಂಗಾತೀರಕ್ಕೆ ಹೋಗಿ, ಇತರರ ಬೈಗುಳುಗಳಿಗೂ ಗುರಿಯಾಗುತ್ತಿದ್ದನು. ತನ್ನ ನೃತ್ಯರು ಕೋಪಿಸಿಕೊಳ್ಳುತ್ತಿದ್ದರೂ ತಾನು ಶಾಂತಿಯುಳ್ಳವನಾಗಿ ಸಮಾಧಾನ ಹೇಳುತ್ತಿ ಧ್ವನು, ಒಬ್ಬ ಪುರುಷನು ಹಲವು ಸ್ತ್ರೀಯರನ್ನು ಮದುವೆಮಾಡಿಕೊಳ್ಳುವ ದುರಾಚಾರ ನಿವಾರಣೆಯ ವಿಷಯದಲ್ಲಿಯೂ, ಸ್ತ್ರೀಯರುಗಳಲ್ಲಿ ಆರೋಪಿಸುವ ದೋಷನಿವಾರಣೆಯ ವಿಷ ಯದಲ್ಲಿಯೂ ಆತನು ಬರೆದಿರುವ ವ್ಯಾಸಗಳು ಅನುಪಮಾನಗಳಾಗಿವೆ. ಯಾರಿಗಾದರೂ ಕಷ್ಟವುಂಟಾದರೆ ಅವರಲ್ಲಿ ಈತನಿಗೆ ತುಂಬ ಮರುಕ ಉಂಟಾಗು ತಿದ್ದಿ ತು, ಅಂತವರ ವಿಷಯದಲ್ಲಿ ಯಾರಾದರೂ ಕ್ರೂರವಾಗಿ ನಡೆದುಕೊಂಡರೆ ಈತನು ಸ್ವಲ್ಪವೂ ಸೈರಿಸುತ್ತಿರಲಿಲ್ಲ, ಬಾಬೂ ಅಕ್ಷಯಕುಮಾರದರು ಹೀಗೆ ಬರೆದಿರುವರು. ರಾಮಮೋಹನನಿದ್ದ ಊರಿನಲ್ಲಿ ಒಂದು ಸಂತೆ ಕೂಡುತ್ತಲಿದ್ದಿತು ಆ ಸಂತೆಗೆ ಸುತ್ತಮುತ್ತಲ ಗ್ರಾಮಗಳ ವರ್ತಕರು ಸರಕುಗಳನ್ನು ತಂದು ಮಾರುತ್ತಿದ್ದರು ರಾಮಮೋಹನನ ಹಿರಿಯ ಮಗನಾದ ರಾಧಾಪ್ರಸಾದನು ಅವರ ಕಡೆಯಿಂದ ಸುಂಕವನ್ನು ತೆಗೆದುಕೊಳ್ಳುತ್ತಿದ್ದನು. ಈ ವಾಡಿಕೆಯು ಎಲ್ಲಾ ಕಡೆಯಲ್ಲಿಯೂ ಇದ್ದುದರಿಂದ ಇದು ಒಂದು ಬಾಧಕವಾಗಿ ಎಣಿಸ ಲ್ಪಡುತ್ತಿರಲಿಲ್ಲ. ಆದರೂ ಅಲ್ಲಿಯ ವರ ಕರೆಲ್ಲರಿಗೂ, ಇದು ಹಿತವಾಗಿರಲಿಲ್ಲವಾದುದರಿಂದ ಅವರು ಈ ವಿಚಾರವನ್ನು ರಾಮಮೋಹನನಲ್ಲಿ ಹೇಳಿಕೊಂಡರು. ರಾಮಮೋಹನನು ಇದ ನ್ನೆಲ್ಲಾ ಕೇಳಿ ತನ್ನ ಮಗನಾದ ರಾಧಾಪ್ರಸಾದನನ್ನು ಕರೆದು “ಅಲ್ಪಸ್ವಲ್ಪ ಸರಕುಗಳನ್ನು ಮಾರಿಕೊಂಡು ಒಂದೊಂದು ದುಡ್ಡು ಸಂಪಾದಿಸಿ ಹೊಟ್ಟೆ ಹೊರೆದುಕೊಳ್ಳತಕ್ಕ ಈ ಬಡ ಜನರ ಮೇಲೆ ನಿನ್ನ ಕಾರವನ್ನು ತೋರಿಸದೆ ಪರ ಮೇಶ್ವರನಕಡೆ ನೋಡಿ ಜ್ಞಾನವನ್ನು ತಂದುಕೋ' ಎಂದು ಮೃದುವಾಗಿಯೇ ಮದಲಿಸಿದನು. ಅಂದಿನಿಂದ ಆ ಸುಂಕವನ್ನು ವಸೂಲಾಡುವುದು ನಿಂತುಹೋಯಿತು. ಒಂದಾನೊಂದುದಿನ ಶುಭ್ರವಾದ ಉಡುಪುಗಳನ್ನು ಧರಿಸಿ ಬೀದಿಯಲ್ಲಿ ಹೋಗುತ್ತಿ ರುವಾಗ ಅಲ್ಲಿ ಒಬ್ಬ ಬಡಮನುಷ್ಯನು ಭಾರವನ್ನೆತ್ತಿಕೊಳ್ಳಲಾರದೆ ಕಷ್ಟ ಪಡುತ್ತಾ ಆದಾರಿ ಯಲ್ಲಿ ಬಂದು ಹೋಗುವವರ ಮುಖನೋಡುತ್ತ ನಿಂತಿದ್ದನು, ಸರೋಪಕಾರ ಪರಾಯಣ ನಾದ ರಾಮಮೋಹನನು ಅವನ ಮುಖದ ಕಳೆಯನ್ನು ಹಿಡಿದು ಆ ವಿವರವನ್ನು ತಿಳಿದು ಆ ಹೊರೆಯನ್ನೆತ್ತಿ ಅವನ ತಲೆಯ ಮೇಲಿಟ್ಟನು. ಹರಿನಾಭಿಯೆಂಬ ಗ್ರಾಮವಾಸಿಯಾದ ಆನಂದ ಚಂದ್ರನು ರಾಮಮೋಹನನು ಹಲ