ರಾಜಾ ರಾಮಮೋಹನರಾಯರ ಜೀವಿತ ಚರಿತ್ರೆ, ಟಿಬೆಟ್ಟಿಗೆ ಹೋಗಿ, ಅಲ್ಲಿಯ ಜನರ ಸ್ನೇಹವನ್ನು ಸಂಪಾದಿಸಿ, ಆ ಭಾಷೆಯನ್ನು ಮಾ ತನಾಡಲಿಕ್ಕೆ ಕಲ್ಲು, ಅಲ್ಲಿ ಕೆಲವು ದಿನಗಳು ಇದ್ದ ಮೇಲೆ ಇವನಿಗೆ ಮತ್ತೊಂದು ಕಷ್ಟ ಸಂಭವಿಸಿತು. ಅಲ್ಲಿಯ ಜನರು ಲಾಮಾ ' ಎಂಬ ಪರಂಪರೆಯ ಹೆಸರಿನ ಮತಗುರುವನ್ನೇ ತಮ್ಮ ಆತ್ಮಗಳಿಗೆ ಮುಕ್ತಿಯನ್ನು ಕೊಡತಕ್ಕವನೆಂದು ನಂಬಿ, ಅವನನ್ನು ಯಾವಾಗಲೂ ಎಡೆಬಿಡದೆ ಸೇವಿಸುತ್ತಿದ್ದರು. ವಿಗ್ರಹಾರಾಧನೆಯು ಕೂಡದೆಂಬ ಮಾತಿಗಾಗಿಯೇ ಮನೆ ಯಿಂದ ಹೊರಡಿಸಲ್ಪಟ್ಟ ರಾಮಮೋಹನನು ಈ ಮನುಷ್ಯಾರಾಧನೆಯನ್ನು ನೋಡಿ ನೋಡಿ ಸೈರಿಸಿಕೊಂಡು ಹೇಗೆ ಮೌನವಾಗಿರಬಲ್ಲನು ? ತನ್ನ ಮನಸ್ಸಾಕ್ಷಿಗೆ ಯುಕ್ತವಾದುದೆಂದು ತೋರಿದ ಅಭಿಪ್ರಾಯಗಳನ್ನು ಒಳೊಳಗೇನೇ ನುಂಗದೆ, ಇದು ಪರರಾಷ್ಟ್ರವೆಂಬ ಸಂಶಯ ವನ್ನು ಬಿಟ್ಟು, ನಿರ್ಭಯವಾಗಿ, “ನೀವು ಈ ಪದ್ಧತಿಯನ್ನು ಬಿಟ್ಟುಬಿಡಿರಿ, ಈಶ್ವರೋಪಾಸ ನೆಯೇ ಸತ್ಯಷ್ಟವಾದುದು' ಎಂದು ಆತನು ಬೋಧಿಸತೊಡಗಿದನು. ಇದನ್ನು ಕೇಳಿ , ಅಲ್ಲಿ ರಾಮನ ಪಕ್ಷದವರಾದ ಕಿರಾ ತಸ್ವಭಾವದ ಕೆಲವು ಜನರು ಇವನು ಒಂಟಿಗನಾ ಗಿದ್ದಾಗ ಇವನನ್ನು ಕೊಲ್ಲಬೇಕೆಂದು ಪ್ರಯತ್ನಿಸಿದರು, ಆದರೆ ಅದೃಷ್ಟವಶದಿಂದ ಆ ಕಿರಾ ತಸ್ತ್ರೀಯರೇ ದಯಾ ದ್ರ್ರ ಚಿಯರಾಗಿ, ಈ ಘೋರವಾರ್ತೆಯನ್ನು ಮುಂಚಿತವಾಗಿಯೇ ರಾಮಮೋಹನನಿಗೆ ತಿಳಿಸಿ, ನೀನು ಎಲ್ಲಿಗಾದರೂ ಹೋಗಿ ಬದುಕಿಕೋ ಎಂದು ಹೇಳಿದರು. ಅವರಲ್ಲಿ ಕೆಲವರು ಇವನಲ್ಲಿ ಕರುಣಿಸಿ, ಆ ದುಷ್ಟಂಗೆ ಕಾಣದಂತೆ ಈತನನ್ನು ಮರೆಯಲ್ಲಿ ಅಡಗಿಸಿ ಅಪಾಯದಿಂದ ರಕ್ಷಿಸಿದರು, ಆದುದರಿಂದ ಸ್ತ್ರೀಚಾತಿಯಲ್ಲಿ ಹೆಚ್ಚಾದ ಅಭಿಮಾ ನವೂ, ಮರಾದೆಯೂ ಈತನಿಗೆ ಹುಟ್ಟುವುದಕ್ಕೆ ಇದೇ ಮುಖ್ಯ ಹೇತುವಾಯಿತು, ಡಾಕ್ಷ ಈ ಕಾರ್ಪೆಂಟರಮಗಳು ಹೀಗೆ ಬರೆದಿರುವಳು, ನಾಲ್ವತ್ತು ವರ್ಷಗಳು ಕಳೆದುಹೋದರೂ ರಾಮಮೋಹನನು ಇಂಗ್ಲೆಂಡಿನಲ್ಲಿ ಆಗಾಗ್ಗೆ ತಾನು ಸ್ತ್ರೀಚಾತಿಯಲ್ಲಿ ಅಭಿಮಾನವಿಡುವ ಮಾ ರ್ಗವನ್ನು ಟಿಬೆಟ'ದೇಶದ ಸ್ತ್ರೀಯರಿಂದ ಕಲ್ಲು ಕೊಂಡೆನೆಂದು ಆಗಾಗ್ಗೆ ಬಹು ಸಂತೋಷ ದಿಂದ ಹೇಳಿಕೊಳ್ಳುತ್ತಿದ್ದನ್ನು ಹಿಂದೂದೇಶದ ಸ್ತ್ರೀಯರ ವಿಷಯವಾಗಿ ಈತನು ಪಟ್ಟಿ ಶ್ರಮೆಗಳಿಗೆ ಪ್ರಬಲಕಾರಣವು ಇದೇ.' * ಟಿಬೆಟ ದೇಶ ಒಂದಕ್ಕೆ ಮಾತ್ರವಲ್ಲ ; ರಾಮಮೋಹನನು ಹಿಮಾಲಯ ಪರ್ವತದ ಉತ್ತರಭಾಗದಲ್ಲಿರುವ ಇನ್ನೂ ಕೆಲವು ದೇಶಗಳಿಗೆ ಸುವಣ ಹೋಗಿದ್ದನೆಂಬ ಪ್ರತೀತಿ ಯಿರು ವದು ; ಆದರೂ ನಂಬಿಕೆಗೆ ಅರ್ಹವಾದ ಸಾಧನಗಳು ದೊರೆಯದ್ದರಿಂದ ಆ ವಿಷಯವನ್ನು ಕುರಿತು ವಿವರಿಸಲು ಅವಕಾಶವಿಲ್ಲವೆಂದು ಚಿಂತಿಸುವೆವು, ಈತನು ತನ್ನ ಯಾತ್ರೆಗಳನ್ನು ವರ್ಣಿಸುವ ಗ್ರಂಧವನ್ನು ಬರೆದಿಟ್ಟಿದ್ದಲ್ಲಿ ಈಗ ಎಷ್ಟೋ ಉಪಯೋಗವಾಗಿರುತ್ತಿದ್ದಿತು. ಬ್ರಹ್ಮ ಸಮಾಜವನ್ನು ಸ್ಥಾಪಿಸಿದಮೇಲೆ • ಸಂವಾದಕೌಮುದಿ ಎಂಬ ಹೆಸರಿನಿಂದ ಈತನು ಒಂದು ಪತ್ರಿಕೆಯನ್ನು ಹೊರಡಿಸಿ, ಅದರಲ್ಲಿ ತನ್ನ ಯಾತ್ರೆಗಳನ್ನು ಸಂಗ್ರಹವಾಗಿ ಬರೆದಿರುವ ನೆಂಬುದನ್ನು ಕೇಳಿ, ನಾವು ಆ ಪತ್ರಿಕೆಯನ್ನು ಸಂಪಾದಿಸಲು ಎಷ್ಟು ಪ್ರಯತ್ನ ಪಟ್ಟರೂ ಅದು ನಮಗೆ ದೊರೆಯದೆ ಹೋಯಿತು. ಮನೆಯಿಂದ ಹೊರಟಮೇಲೆ ರಾಮಮೋಹನನು
ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೧೫
ಗೋಚರ