ರಾಜಾ ರಾಮಮೋಹನರಾಯರ ಜೀವಿತ ಚರಿತ್ರೆ, ಹೀಗೆ ನಾಲ್ಕು ವರ್ಷಗಳ ತನಕ ದೇಶಸಂಚಾರ ಮಾಡಿ, ತನ್ನ ಇಪ್ಪತ್ತನೆಯ ವಯಸ್ಸಿನಲ್ಲಿ ಸ್ವ ದೇಶಕ್ಕೆ ಬಂದು ಸೇರಿದನು. ತನ್ನ ಅಭಿಪ್ರಾಯಕ್ಕೆ ವಿರೋಧವಾಗಿ ನಡೆದುದರಿಂದ ಮನೆ ಬಿಟ್ಟು ಹೊರಡಿಸಿದರೂ ಕ್ರಮೇಣ ರಾಮಕಾಂತನಿಗೂ ತಾರಣೀದೇವಿಗೂ ಪುತ್ರ ವಿಯೋಗ ದುಃಖವು ಹೆಚ್ಚುತ್ತ ಬಂದುದರಿಂದ ಅವರು ಅಹೋರಾತ್ರಿಗಳಲ್ಲಿಯೂ, ವಿಚಾರಗ್ರಸ್ತರಾಗಿ ತಮ್ಮ ಮಗನು ಎಲ್ಲಿರುವನು ? ಏನಾಗಿರುವನು ? ಎಂಬುದನ್ನು ತಿಳಿಯದೆ ದಿಕ್ಕು ದಿಕ್ಕಿಗೂ ಸೇವಕರನ್ನು ಕಳುಹಿ, ಹುಡುಕಿಸುತ್ತಿದ್ದರು. ಅವರಲ್ಲಿ ಪತ್ನಿ ಮದಕಡೆಗೆ ಹೋದವರು ಈತ ನನ್ನು ಕಂಡುಹಿಡಿದು, ಅವನ ತಂದೆಯ ಬಳಿಗೆ ಕರೆದು ತಂದರು. ಚಿರಕಾಲದಿಂದ ಅಗಲಿ ದುಃಖ ಸಮುದ್ರದಲ್ಲಿ ಮುಳುಗಿದ್ದ ತಾಯಿತಂದೆಗಳಿಗೆ ಈ ಪುತ್ರ ಸಂದರ್ಶನವು ಎಷ್ಟು ಸಂತೋಷವನ್ನಿತ್ತಿತೋ ಮತ್ತು ಆಗ ಅವರ ಮನಸ್ಸು ಹೇಗಿದ್ದಿತೋ ಅದು ಅನುಭವೈಕವೇ ದ್ಯವೇ ಹೊರತು ಬರೆದು ತಿಳಿಸಲಿಕ್ಕೆ ಬಾರದು, ಮಗನನ್ನು ನೋಡಿದಕೂಡಲೇ ಗಾಢಾ ಲಿಂಗನವನ್ನು ಮಾಡಿ, ಕಣ್ಣೀರು ಧಾರೆಯಾಗಿ ಹರಿಯಲು, ಅಪ್ಪಾ ! ರಾಮಚಂದ್ರನನ್ನ ಗ ಲಿದ ದಶರಥನು ಆ ದುಃಖದಿಂದಲೇ ಪ್ರಾಣಗಳನ್ನು ಬಿಟ್ಟನ್ನು ನಾನು ಮಾತ್ರ ಮರಳಿ ನಿನ್ನನ್ನು ನೋಡುವ ಭಾಗ್ಯವು ಲಭಿಸುವುದೆಂಬ ಆಶೆಯಿಂದ ಪ್ರಾಣಗಳನ್ನು ನಿನ್ನ ಮೇಲೆಯೇ ಇಟ್ಟುಕೊಂಡು ಇದುವರಿವಿಗೂ ಜೀವಿಸಿರುವೆನು ಎಂದು ರಾಮಕಾಂತನು ಹೇಳಿದನು. ರಾಮಮೋಹನನಿಗೆ ಬಾಲ್ಯದಲ್ಲಿಯೇ ಮದುವೆಯಾಯಿತು ; ಆದರೂ ಕೆಲವು ದಿನ ಗಳಲ್ಲಿಯೇ ಆತನ ಪ್ರಾಣಕಾಂತೆಯು ಲೋಕಾಂತರವನೆಯ್ದಿದಳು, ಮರಳಿ ಮನೆಗೆ ಬಂದ ಮೇಲೆ ಇವನಿಗೆ ಹೇಗಾದರೂ ಸಂಸಾರಸುಖಗಳಲ್ಲಿ ಆಸೆಯನ್ನು ಹುಟ್ಟಿಸಿದಲ್ಲಿ ಸ್ವಚ್ಚಾಚಾ ರವನ್ನು ಬಿಟ್ಟು ನೆಟ್ಟಗಾಗುವನೆಂಬ ನಂಬಿಕೆಯಿಂದ ರಾಮಕಾಂತನು ತನ್ನ ಮಗನಿಗೆ ಎರಡು ವಿವಾಹಗಳನ್ನು ಮಾಡಿಸಿದನು. ಬಾಲ್ಯದಿಂದಲೂ ಸಂಘಸಂಸ್ಕರಣದಲ್ಲಿಯೇ ಆಸಕ್ತನಾ ಗಿದ್ದ ರಾಮಮೋಹನನು ಹೀಗೆ ಇಬ್ಬರು ಪತ್ನಿಯರನ್ನು ಹೇಗೆ ಪರಿಗ್ರಹಿಸಿದನೋ ತಿಳಿಯ ಬಾರದೆ ಇದೆ : ಆದರೂ ಮನಃಪೂರ್ವಕವಾಗಿ ಒಂದು ಸಂಸ್ಕರಣವನ್ನವಲಂಬಿಸಬೇಕೆಂಬ ದೃಢತರವಾದ ಉದ್ದೇಶವುಳ್ಳವರಾದರೂ ಪೂರ್ವಾಚಾರ ಪರಾಯಣರಾದ ತಮ್ಮ ಹಿರಿಯರ, ಬಂಧುಗಳ, ಮತ್ತು ವಿದ್ಯಾ ವಿಹೀನೆಯಾಗಿದ್ದರೆ ಅಂತಹ ಹೆಂಡತಿಯ ನಿರ್ಬಂಧಗಳಿಂದ ಆ ಕಾರಗಳನ್ನು ಕೊನೆಮುಟ್ಟಿಸಲಾರದೆ, ಬರಿಯ ವಾಗಾಡಂಬರವನ್ನ ತೋರಿಸದೆ, ಈ ರಾವ ಮೋಹನನು ಬಹುಕಾಲಕ್ಕೆ ತಮ್ಮ ತಂದೆಯ ಅನುಗ್ರಹಕ್ಕೆ ಪಾತ್ರನಾಗಿ, ಮನೆಯೊಳಕ್ಕೆ ಸೇರಿದವನಾದುದರಿಂದ ಆತನ ಮನಸ್ಸಿಗೆ ವಿರೋಧವಾಗಿ ನಡೆದುಕೊಳ್ಳಲಾರದೆ, ತನಗೆ ಇಷ್ಟ ವಾಗಿಲ್ಲದಿದ್ದರೂ ತತ್ಕಾಲದ ಸ್ಥಿತಿಗತಿಗಳನ್ನಾಲೋಚಿಸಿ, ತಂದೆಯ ಉದ್ದೇಶವನ್ನೇ ಅನುಸರಿಸ ಬೇಕಾಗಿಬಂತೆಂತಲೂ, ಮಹಾತ್ಮರ ಜೀವಿತಗಳು ಸುದಾ ಕಾಲಾನುಗುಣವಾದ ಕೆಲವು ದುರಾ ಚಾರಗಳಿಗೆ ಒಳಗಾಗದಿದ್ದರೆ ತೀರದೆಂತಲೂ, ನಾವು ಒಪ್ಪಿಕೊಳ್ಳಬೇಕಾಗಿದೆ. ರಾಮಮೋಹನನು ಮನೆಗೆ ಬಂದು ಸೇರಿದ ಮೊದಲುಗೊಂಡು, ತನ್ನ ಕಾಲವನ್ನೆಲ್ಲ ಹಿಂದೂಶಾಸ್ತ್ರಗಳನ್ನೋದುವುದರಲ್ಲಿಯೇ ವಿನಿಯೋಗಿಸಿ, ವೇದಗಳು, ಸ್ಮೃತಿಗಳು, ಪುರಾಣ
ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೧೬
ಗೋಚರ