೧೪. ರಾಜಾ ರಾಮಮೋಹನರಾಯರ ಜೀವಿತ ಚರಿತ್ರ, ಗಳು ಮೊದಲಾದುವುಗಳಲ್ಲಿರುವ ವಿಷಯಗಳನ್ನೆಲ್ಲ ಗ್ರಹಿಸಿ, ಅವುಗಳಲ್ಲಿ ಅದ್ಭುತಪ್ರಜ್ಞೆಯನ್ನು ಸಂಪಾದಿಸಿದನು, ಆತನಿಗೆ ಗ್ರಂಥಗಳನ್ನೋದುವುದರಲ್ಲಿ ಇರುವ ಆಶೆಯನ್ನು ನೋಡಿ ಆ ಊರಿನವರೆಲ್ಲರೂ ಆಶ್ಚರ ಪಡುತ್ತಿದ್ದರು. ಒಂದುದಿನ ಪ್ರಾತಃಕಾಲ ತನ್ನ ಕೊಠಡಿಯಲ್ಲಿ ಏಕಾಂತವಾಗಿ ಕುಳಿತು, ತಾನು ಅದುವರೆಗೆ ಎಂದೂ ಓದದೆ ಇದ್ದ ವಾಲ್ಮೀಕಿ ರಾಮಾಯಣ ವನ್ನು ತುಂಬ ಅಕ್ಕರೆಯಿಂದ ಓದುತ್ತ ಅಪರಾಹ್ಮವು ಅತಿಕ್ರಮಿಸಿದ್ದನ್ನು ಸುದಾ ತಿಳಿಯದೆ ಇದ್ದನು, ತಾಯಿಯು ಊಟಕ್ಕೆ ಬಾರೆಂದು ಒಂದೆರಡು ಸಲ ಕರೆದರೂ ಗ್ರಂಥವನ್ನು ಬಿಟ್ಟು ಬರಲು ಇಷ್ಟವಿಲ್ಲದೆ ಸ್ವಲ್ಪ ತಾಳಿ ; ಬರುವೆನೆಂದು ಹೇಳಿ, ಮತ್ತೆ ಓದುತ್ತಲೇ ಇದ್ದನು. ಮನೆಯವರೆಲ್ಲರೂ ಭೋಜನಮಾಡಿದರು ; ಇವನ ತಾಯಿ ಮಾತ್ರ ಇವನಿಗಾಗಿ ಕಾದಿದ್ದು ಬೇಸತ್ತು 16ರಾಮ ಮೋಹನಾ ! ಆ ಗ್ರಂಧವನ್ನು ಅಮೂಲಾಗ್ರವಾಗಿ ಓದುವತನಕ ಆಹಾರ ನನ್ನೊಲ್ಲೆನೆಂದು ದೀಕ್ಷೆಯನ್ನು ವಹಿಸಿರುವೆಯಾ ? ನನ್ನ ಹಸಿವನ್ನಾ ದರೂ ತೀರಿಸು, ಏಳ” ಎಂದು ಹೇಳಿದಮೇಲೆ ಆತನು ಊಟಮಾಡಲಿಕ್ಕೆ ಹೊರಟನು, ಹೀಗೆ ಬಲು ಆಸಕ್ತಿಯಿಂದ ಗ್ರಂಥರೂಪದಲ್ಲಿರುವ ಪುರಾತನ ಸಂಪ್ರದಾಯ ಸ್ಥಿತಿಗಳನ್ನು ಕಡೆದು ಕಡೆದು ನೋಡಿದ್ದರಿಂದ ದೇವಾಸುರರಿಗೆ ಸಮುದ್ರಮಥನದಿಂದ ಅವತವು ಲಭಿಸಿದಂತೆ ರಾಮಮೋಹನರಾಯನಿಗೆ ಬ್ರಹ್ಮಜ್ಞಾನವೆಂಬ ಅಮೃತವು ಸಿಕ್ಕುವಂತೆ ಮಾಡಿದ್ದಕ್ಕೂ, ಆ ಮೂಲಕವಾಗಿಯೇ ಈತನು ತನ್ನ ಮನಸ್ಸಿನ ಉದ್ದೇಶಗಳನ್ನು ದೃಢಪಡಿಸಿಕೊಳ್ಳುವುದಕ್ಕೂ ಅದೇ ಬಲವಾದ ಕಾರಣ ವಾಯಿತು. ಈ ಮಧ್ಯಕಾಲದಲ್ಲಿ ತಂದೆ ಮಕ್ಕಳಿಗೆ ಆಗಾಗ್ಗೆ ವಾದವು ಜರುಗುತ್ತಲೇ ಇದ್ದಿತು, ರಾಮಕಾಂತರಾಯರು ಮಗನ ಮನಸ್ಸಿನ ಸಂಕಲ್ಪವನ್ನು ತಿಳಿದು, ತುಂಬ ವಿಚಾರಪಡುತ್ತ, ತನ್ನ ಚಿಂತೆಯನ್ನು ಹೊರಪಡಿಸದೆ, ತನ್ನ ಅಸಮ್ಮತಿಯನ್ನು ಸೂಚನೆಗಳಿಂದ ತೋರುತ್ತಾ, ತನ್ನ ಮಗನು ಪೂರೈಾಚಾರಬದ್ಧನಾಗಿ, ಸಂಸಾರವನ್ನು ನಿರ್ವಹಿಸುತ್ತಾ, ಮನೆಯಲ್ಲಿರುವ ನೆಂದು ತಾನು ತಿಳಿದಿದ್ದುದು ವ್ಯರ್ಥವಾಯಿತೆಂದು ದುಃಖಿಸತಿದ್ದನು, ಹೀಗೆ ಕೆಲವು ದಿನಗಳು ಕಳೆದಮೇಲೆ ಪೂಲ್ಯಾಚಾರವು ಒಳ್ಳೆಯದಾಗಲಿ, ಕೆಟ್ಟುದಾಗಲಿ, ಆಮೇಲು ಬೀಳು ಗಳೆರಡನ್ನೂ ನಾವು ಅವಲಂಬಿಸದೆ ತೀರದೆಂಬ ರಾಮಕಾಂತನ ವಾದಕ್ಕೂ, ನಮ್ಮ ಅಂತರಾ ತ್ಯವು ಯುಕ್ತವೆಂದು ಬೋಧಿಸಿದವುಗಳನ್ನೇ ಸ್ವೀಕರಿಸಿ, ಅಯುಕ್ತವಾದುದೆಂದು ಹೇಳತಕ್ಕ ವುಗಳನ್ನು ಪರಿತ್ಯಜಿಸೋಣವೆಂಬ ರಾಮಮೋಹನನ ವಾದಕ್ಕೂ ಇರುವ ಭೇದಗಳೇ ಇವರ ಪುನಃಕಲಹಕ್ಕೆ ಕಾರಣಗಳಾದುವು. ಇವುಗಳನ್ನು ನೋಡಿದ ಬಂಧುಜನರೆಲ್ಲರೂ ಅವನಲ್ಲಿ ಹಗೆತನವನ್ನು ತೋರುತ್ತ ಬಂದರೂ, ತರುವಾಯ ಒಂದು ದಿನ ರಾಮಕಾಂತನು ತನ್ನ ಮಗನನ್ನು ನೋಡಿ, “ ಮತದ್ವೇಷಿಯಾದ ನಿನ್ನನ್ನು ನನ್ನ ಮನೆಯಲ್ಲಿಟ್ಟು ಕೊಂಡಿರಲು ಅನೇಕ ಕಾರಣಗಳಿಂದ ಯೋಗ್ಯವಲ್ಲದೆ ಇದೆ ; ಆದಕಾರಣ ಇಂದಿನಿಂದ ನೀನು ಬೇರೆಯಾ ಗಿರು ?” ಎಂದು ಅವನನ್ನು ಮನೆಯಿಂದ ಹೊರಡಿಸಿ, ಅವನ ಜೀವನಕ್ಕಾಗಿ ಸ್ವಲ್ಪ ಹಣವನ್ನು ಕೊಡುತ್ತಿದ್ದನು.
ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೧೭
ಗೋಚರ