ರಾಜಾರಾಮಮೋಹನರಾಯರ ಜೀವಿತ ಚರಿತ್ರೆ, ಗಿಗೆ ಆಗಿನಿಂದಲೇ ಈತನಿಗೆ ಇಂಗ್ಲಿಷ್ ವಿದ್ಯಾಭ್ಯಾಸದಲ್ಲಿ ಆಸಕ್ತಿ ಹುಟ್ಟಿತು. ಇವನು ಒಂದು ಕಡೆ ಹೀಗೆ ಬರೆದಿರುವನು- ನಾನು ಟಿಬೆಟ್ಟಿಗೆ ಹೊರಟಾಗ ನನ್ನ ಮನಸ್ಸಿನಲ್ಲಿ ಈ ಪಾ ಶ್ಚಿಮಾತ್ಯರ ವಿಷಯದಲ್ಲಿಯೂ ಅವರ ಭಾಷೆಯ ವಿಷಯದಲ್ಲಿಯೂ ಅನಾದರಭಾವವುಂ ಟಾಗಿದ್ದಿತು ; ಆದರೆ ನಾನು ಹಿಂದಿರುಗಿಬಂದಮೇಲೆ ಅವರೊಡನೆ ಸ್ನೇಹಮಾಡಿ, ಆ ಮೂಲಕ ಅವರ ವಿಧಗಳನ್ನೂ, ಆಳಿಕೆಯ ಪದ್ಧತಿಗಳನ್ನೂ ನೋಡಿದೆನು. ಅವರು ಒಳ್ಳೆ ವೀರರೆಂತ ಲೂ, ಕಾಲ್ಯಾಚರಣೆಯಲ್ಲಿ ದೃಢಸಂಕಲ್ಪರೆಂತಲೂ ನನಗೆ ಚೆನ್ನಾಗಿ ತಿಳಿಯಿತು. ಆದುದರಿಂದ ಪರದೇಶೀಯರಾದರೂ ನಮ್ಮ ದೇಶದವರ ಹೀನಸ್ಥಿತಿಯನ್ನು ಕ್ರಮಪಡಿಸುವುದಕ್ಕೆ ಅವರೇ ಅಧಿ ಕವಾಗಿ ಸಹಾಯಕರಾಗುವರೆಂದು ದೃಢವಾಗಿ ನಂಬಿದೆನು ? ಈ ಅಭಿಪ್ರಾಯವೇ ರಾಮಮೋಹನನನ್ನು ಇಂಗ್ಲಿಷು ವಿದ್ಯಾಭಿವೃದ್ಧಿಗಾಗಿ ಹುರಿಗೊ ಳಿಸಿತು, ಆದರೂ ತನ್ನ ಇಪ್ಪತ್ತೆರಡನೆಯ ವರುಷದಲ್ಲಿ: ಇಂಗ್ಲೀಷುವಿದ್ಯೆಯನ್ನು ಕಲಿಯುವು ದಕ್ಕೆ ಪ್ರಾರಂಭಿಸಿ, 26-27 ವರುಷಗಳ ತನಕ ಸಾಮಾನ್ಯವಾಗಿ ಮಾತನಾಡತಕ್ಕ ಷ್ಟು ಶಕ್ತಿ ಯನ್ನು ಮಾತ್ರ ಸಂಪಾದಿಸಿ, ಬರೆಯಲಿಕ್ಕೆ ಅಶಕ್ತನಾಗಿಯೇ ಇದ್ದನು. ಇವನು ಯಾವ ಕಾರಣದಿಂದ ಶೀಘ್ರವಾಗಿ ವಿದ್ಯಾಭಿವೃದ್ಧಿಯನ್ನು ಪಡೆಯದೆ ಇದ್ದನೋ ಅದನ್ನು ತಿಳಿಯಲು ತಕ್ಕ ಸಾಧನಗಳು ಸಿಕ್ಕಲಿಲ್ಲ. ಮಹನೀಯರ್ದೃಢಚಿತ್ತದೆ | ಮಹಿಯೊಳಷ್ಟಗಳನೆಣಿಸದುದೆ ಧೀರತೆಯಿಂ |! ಸಹಿಸುತ್ತಂ ಸುಗುಣಂಗಳ ! ಗ್ರಹಿಸುತ್ತ೦ ನಡೆವರಂತರಾತ್ಮನೊಲಿವವೋಲ್ | ಎರಡನೆಯ ಪ್ರಕರಣ, [1801 ರಿಂದ 1818ರ ವರಿಗೆ] 1801 ನೇ ಸಂವತ್ಸರದಲ್ಲಿ ಇವನಿಗೆ ಉದ್ಯೋಗದಲ್ಲಿ ಸೇರಬೇಕೆಂಬ ಆಶೆ ಹುಟ್ಟಿತು. ಮನೆ ಬಿಟ್ಟು ಹೋದ ದಿನದಿಂದ ಇವನ ತಂದೆಯು ಸ್ವಲ್ಪಮಟ್ಟಿಗೆ ಧನಸಹಾಯಮಾಡುತ್ತಿದ್ದ ರೂ ಯಾವಾಗಲೂ ಸ್ವಾತಂತ್ರ್ಯವನ್ನಪೇಕ್ಷಿಸುವ ಅವನ ಅಂತರಾತ್ಮಕ್ಕೆ ಈ ವಿಧದ ಜೀವನವು ಹಿತವಾಗಿ ತೋರಲಿಲ್ಲ, ತನ್ನ ಮನಸ್ಸಿಗೆ ಯುಕ್ತವೆಂದು ತೋರಿದ ಅಂಶಗಳು ತನ್ನ ತಾಯಿ ತಂದೆಗಳಿಗೆ ಅಹಿತವಾಗಿ ತೋರಿದಲ್ಲಿ ಅಂತವರ ಸಂಬಂಧವನ್ನು ಸುದಾ ಬಿಟ್ಟು ಬಿಟ್ಟು, ತನ್ನ ಉದ್ದೇಶಗಳನ್ನು ಸ್ವಲ್ಪವಾದರೂ ಬದಲಾಯಿಸಲಿಕ್ಕೆ ಇಷ್ಟಪಡದ ರಾಮಮೋಹನನಿಗೆ ಈ ಪರಾನ್ನದಿಂದ ಜೀವಿಸುವಿಕೆಯು ಹೇಗೆತಾನೇ ಹಿತಕರವಾಗಿದ್ದೀತು ? ಆದುದರಿಂದ ಇವನು ಸರ್ಕಾರದಲ್ಲಿ ಸೇರಲಪೇಕ್ಷಿಸಿದುದಕ್ಕೆ ಇದೇ ಮುಖ್ಯ ಕಾರಣವೆನ್ನಬಹುದು.
ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೧೮
ಗೋಚರ