ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಜಾ ರಾಮಮೋಹನರಾಯರ ಜೀವಿತ ಚರಿತ್ರೆ, ಆದರೆ ಆ ಕಾಲದಲ್ಲಿ ಹಿಂದೂದೇಶೀಯರಿಗೆ ಇಂಗ್ಲೀಷರಬಳಿಯಲ್ಲಿ ಉದ್ಯೋಗಮಾ ಡುವುದು ಈಗಿನಷ್ಟು ಸಂತೋಷಕರವಾಗಿರಲಿಲ್ಲ. ಮುಸಲ್ಮಾನರ ಅಳಿಕೆಯಲ್ಲಿ ಪ್ರಜೆಗಳಿಗೆ ಎಷ್ಟು ತೊಂದರೆಗಳು ಸಂಭವಿಸುತ್ತಿದ್ದರೂ ಅವರು ತಮ್ಮ ತಮ್ಮ ರಾಜ್ಯಾಂಶಗಳಲ್ಲಿ ಜಾತಿ ಮತ ವಿಪಕ್ಷ ತೆಗಳನ್ನು ಸ್ವಲ್ಪವಾದರೂ ಗಣಿಸದೆ, ತಕ್ಕ ಯೋಗ್ಯತೆಯನ್ನು ಮಾತ್ರ ಪರಿಶೀ ಲಿಸಿ, ತಮ್ಮ ಜಾತಿಯ ಮಹಮ್ಮದೀಯರಿಗೂ, ದೇಶೀಯರಾದ ಹಿಂದೂಜನರಿಗೂ ಸಮವಾಗಿ ಉನ್ನತಾಧಿಕಾರಗಳನ್ನು ಕೊಡುತ್ತ ಬಂದರು, ಮಹಾ ಯೋಧನಾದ ಔರಂಗಜೇಬನು ಸದಾ ತನ್ನ ರಾಜ್ಯದ ನಾಲ್ಕು ಮೂಲೆಗಳಲ್ಲಿರುವ ದೊಡ್ಡ ಸೇನೆಗೆಲ್ಲ ರಾಜಪುತ್ರನಾದ ಜಸ್ವಂತ ಸಿಂಗನನ್ನು ಸೇನಾನಾಯಕನನ್ನಾಗಿರಿಸಿ, ತನ್ನ ರಾಜ್ಯ ರಕ್ಷಣಭಾರವನ್ನು ಅವನ ಭುಜ ಪೀಠದಲ್ಲಿಯೇ ನಿಲ್ಲಿಸಿದನು, ಆದರೆ ಇಂಗ್ಲಿಷರ ಆಗಿನ ರಾಜ್ಯಭಾರದ ಕಾಲದಲ್ಲಿ ಮಾತ್ರ ಈ ಪದ್ಧತಿ ನಶಿಸಿತು, ಮುಖ್ಯವಾಗಿ ನಾವು ಈಗ ಹೇಳುತ್ತಿರುವ ರಾಮಮೋಹನನ ಕಾಲದಲ್ಲಿ ಕಲೆಕ್ಟರ ಬಳಿಯಲ್ಲಿಯಾಗಲಿ, ಜಡ್ಡಿಯ ಬಳಿಯಲ್ಲಿಯಾಗಲಿ ನೂರುರೂಪಾಯಿ ಸಂಬಳದ ಶಿರಸ್ತೆಯ ಉದ್ಯೋಗವೇ ಹಿಂದುಗಳಿಗೆ ಉನ್ನತಾಧಿಕರವೆಂದು ಎಣಿಸಲ್ಪಟ್ಟಿದ್ದಿತು. ಅದೂ ಕೂಡ ಒಂದೇ ಸಾರಿ ಸಿಕ್ಕುತ್ತಿರಲಿಲ್ಲ ; ಹತ್ತು ಹದಿನೈದು ರೂಪಾಯಿಗಳ ಸಣ್ಣ ಉದ್ಯೋ ಗದಿಂದ ಅಭಿವೃದ್ಧಿಗೆ ಬಂದವನಿಗೇನೆ ಆ ದೊಡ್ಡ ಅಧಿಕಾರವು ಕೊಡಲ್ಪಡುತ್ತಿದ್ದಿತು. ಉದ್ಯೋಗಸಿಕ್ಕುವ ಮಾತು ಹಾಗಿರಲಿ; ಈ ಉದ್ಯೋಗಸ್ಥರಲ್ಲಿ ಮೇಲಿನ ಅಧಿಕಾರಗಳು ತೋರುತ್ತಿದ್ದ ಅನಾದರವೂ ಚಿಂತಿಸತಕ್ಕುದಾಗಿಯೇ ಇದ್ದಿತು, ಒಂದೊಂದುವೇಳೆ ಇವರನ್ನು ತಿರಗಂತುಗಳಿಗಿಂತ ಹೀನವಾಗಿ ಕಾಣುತ್ತಿದ್ದರು, ಜನರು ವಿದ್ಯಾವಂತರಾಗಲಿಕ್ಕೆ ಬೇಕಾದ ಪಾಠಶಾಲೆಗಳು ಗಗನಕುಸುಮಗಳೆನಿಸಿದ್ದುವು. ನಮ್ಮ ವರಲ್ಲಿ ಪೌರುಷವೆಂಬುದು ಶನ್ವಾ ಯಿತು ; ಆದುದರಿಂದ ಅಧಿಕಾರಿಗಳು ಅವರನ್ನು ನೈಜ್ಯಭಾವದಿಂದ ತಿಳಿಯುತಿದ್ದರು, ಅಧಿ ಕಾರಿಗಳು ತಕ್ಕ ಕಾರಣಗಳಿಂದಲಾಗಲಿ, ಕಾರಣವಿಲ್ಲದೆ ಆಗಲಿ ತಮ್ಮ ಮೇಲೆ ಅಸಮಾಧಾನ ಗೊಂಡಂತೆ ಮುಖಲಕ್ಷಣಗಳಿಂದ ತಿಳಿಯಬಂದ ಕೂಡಲೇ ನಮ್ಮವರು ಅವರಿಗೆ ಕೈ ಮುಗಿದು, ಬಹಳವಾಗಿ ಹೊಗಳಿ ಅವರ ಅನುಗ್ರಹವನ್ನು ಸಂಪಾದಿಸುವುದನ್ನು ಮಾತ್ರ ಚೆನ್ನಾಗಿ ಕಲಿತಿ ದರು. ಸ್ವಾತಂತ್ರಾ ಭಿಲಾಷಿಯಾದ ರಾಮಮೋಹನನಿಗೆ ಈ ವಿಷಯಗಳೆಲ್ಲವೂ ಚೆನ್ನಾಗಿ ತಿಳಿದಿದ್ದರೂ ತಮ್ಮ ಯೋಗ್ಯತೆಯಲ್ಲಿ ಸ್ವಲ್ಪಮಟ್ಟಿಗೆ ತನಗೆ ನಂಬಿಕೆಯಿದ್ದುದರಿಂದಲೂ, ಜೀವ ನಕ್ಕೆ ಬೇರೆ ಮಾರ್ಗವಿಲ್ಲದುದರಿಂದ ಸ್ವತಂತ್ರ ಜೀವನಕ್ಕೆ ಉದ್ಯೋಗವನ್ನು ಸಂಪಾದಿಸುವುದೇ ಉತ್ತಮವೆಂದು ತೋರಿದುದರಿಂದಲೂ, ಮೊದಲಲ್ಲಿ ಸಣ್ಣ ನೌಕರಿಯಲ್ಲಿಯಾದರೂ ಸೇರಲಕ್ಕೆ ಇಷ್ಟಗೊಂಡು, ಅಧಿಕಾರಗಳು ತನ್ನನ್ನು ಅಗೌರಪಡಿಸಿದರೆ ಆ ಕೆಲಸವನ್ನು ಬಿಟ್ಟು ಬಿಡು ನೆನೆಂದು ನಿಶ್ಚಯಿಸಿ, ಜಂಗ್‌ಪುರದ ಮಂಡಲಾಧಿಪತಿ (ಕಲೆಕ್ಟರ) ಯಾದ ಡಿಗ್ನಿಸಾಹೇ ಬ `ನ ಬಳಿಗೆ ಹೋಗಿ ತನಗೊಂದು ಉದ್ಯೋಗವನ್ನು ಕೊಡಿಸಬೇಕೆಂದು ಮನವೆಯನ್ನು ಬರೆ ಮಕೊಟ್ಟನು. ಆ ಸಾಹೇಬನು ಆತನ ಮುಖಲಕ್ಷಣವನ್ನೂ, ವಾಕ್ಚಾತುಯ್ಯವನ್ನೂ, ಬರಹದ