ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಜಾ ರಾಮಮೋಹನರಾಯರ ಜೀವಿತ ಚರಿತ್ರ. ೧೩ ತರಹೆಯನ್ನೂ ನೋಡಿ, ನಿನಗೆ ಒಂದು ಉದ್ಯೋಗವನ್ನು ಕೊಡುವೆನೆಂದು ಹೇಳಿದನು ; ಕೂಡಲೆ, ರಾಮಮೋಹನನು, ನಾನು ತಮ್ಮ ಬಳಿಗೆ ಬಂದಾಗಲೆಲ್ಲ ಕೂತುಕೊಳ್ಳಲಿಕ್ಕೆ ಸ್ಥಳವನ್ನು ಕೊಡುವುದು, ಮರಾದೆಯಿಂದ ನೋಡುವುದು, ಇವೆರಡು ವಿಷಯಗಳಿಗೆ ಸಮ್ಮತಿಸುವುದಾ ದರೆ ತಮ್ಮ ಅಪ್ಪಣೆಯಂತೆ ಉದ್ಯೋಗವನ್ನು ಒಪ್ಪಿಕೊಳ್ಳುವೆನೆಂದು ಮತ್ತೊಂದು ಬಿನ್ನವತ್ತಳೆ ಯನ್ನು ಬರೆದುಕೊಟ್ಟನು. ಆ ಅಧಿಕಾರಿಯು ದಯಾಳುವಾಗಿಯೂ, ಶಾಂತನಾಗಿಯ ಇದ್ದುದರಿಂದ ಈತನ ಪ್ರಾರ್ಥನೆಗೆ ಸ್ವಲ್ಪವೂ ಕೋಪಿಸಿಕೊಳ್ಳದೆ, ಆಶ್ಚರದಿಂದಲೂ ಸಂತೋಷ ದಿಂದಲೂ ಒಪ್ಪಿಕೊಂಡುದಲ್ಲದೆ ಅದರಂತೆ ಬರೆದು ಕೊಟ್ಟನು. ರಾಮಮೋಹನನು ಉದ್ಯೋ ಗದಲ್ಲಿ ಪ್ರವೇಶಿಸಿ, ತನ್ನ ಚಾತುರವನ್ನೆಲ್ಲ ತೋರಿಸಿ, ಬಹು ಶ್ರದ್ಧೆಯಿಂದ ಕೆಲಸಮಾಡುತ್ತಾ ಬಂದುದರಿಂದ ಡಿಗ್ನಿಯವರಿಗೆ ಈತನಲ್ಲಿ ವಿಶ್ವಾಸವು ಹೆಚ್ಚುತ್ತ ಬಂದಿತು. ಬರುತ್ತಾ ಬರುತ್ತಾ ತಾನು ಕಲಿತ ವಿದ್ಯಾಬಲದಿಂದ ಆ ಕಾರ್ಯಸ್ಥಾನದಲ್ಲಿ ಯಾವ ಕೆಲಸವನ್ನಾ ದರೂ ನಿರ್ವಹಿ ಸುವ ಸಾಮರ್ಥ್ಯವನ್ನು ಪಡೆದುದರಿಂದ ಕಲೆಕ್ಟರಿಗೆ ಇವನಲ್ಲಿ ಹೆಚ್ಚಾದ ಗೌರವ ದೊರೆತು, ಸಲ್ಪ ದಿನಗಳಲ್ಲಿಯೇ ಆ ಅಧಿಕಾರಿಯಬಳಿ ದೊಡ್ಡ ಉದ್ಯೋಗವಾದ ದಿವಾನನೆಂಬ ಶಿರಸ್ತೆ ದಾರನ ಪದವಿಯು ಇವನಿಗೆ ಸಿಕ್ಕಿತು. ತರುವಾಯ ಸ್ವಭಾವವಾಗಿ ಗುಣವಂತನಾದ ಡಿಗ್ನಿ ದೊರೆಗೂ, ರಾಮಮೋಹನನಿಗೂ ಪರಸ್ಪರ ಪರಿಚಯವು ಹೆಚ್ಚಿ, ಅದೇ ದೃಢತರವಾದ ಸ್ನೇ ಹವಾಗಿ ಬದಲಾಯಿಸಿ, ಸಾಯುವ ತನಕ ಒಂದೇಸಮವಾಗಿತ್ತು. ಇವರಿಬ್ಬರೂ ವಿಶೇಷ ವಾಗಿ ಹಿಂದೂದೇಶದ ವಿದ್ಯಾ ವಿಷಯವನ್ನು ಕುರಿತು ಯೋಚಿಸುತ್ತಾ, ಒಬ್ಬರಿಗೊಬ್ಬರು ಸಹಕಾರಿಗಳಾಗಿದ್ದರು. ಡಿಗ್ನಿಯ ಸ್ನೇಹಾನುಬಂಧದಿಂದ ರಾಮಮೋಹನಸಿಗೆ ಸಿಕ್ಕಿದ ಲಾಭಗಳಲ್ಲಿ ಇಂಗ್ಲಿಷ್ ಭಾಷಾಜ್ಞಾನಾಭಿವೃದ್ಧಿಯೇ ಮುಖ್ಯವಾದುದು. ಈತನು ಮೊದಲು ಇಂಗ್ಲಿಷ್ ಭಾ ಷೆಯಲ್ಲಿ ವೇದಾಂತಸಾರವೆಂಬ ಗ್ರಂಥವನ್ನು ಬರೆದು, ಅದನ್ನು 1816 ರಲ್ಲಿ ಮುದ್ರಿಸಿ ದನು. ಈ ಪುಸ್ತಕದ ಆದಿಯಲ್ಲಿ ಡಿಗ್ನಿಯವರೇ ಒಂದು ಉಪೋದ್ಘಾತವನ್ನು ಬರೆದು ಕೊಟ್ಟಿರುವರು. ರಾಮಮೋಹನನು ಇಂಗ್ಲಿಷ್ ವಿದ್ಯೆಯಲ್ಲಿ ಹೇಗೆ ಅಭಿವೃದ್ಧಿ ಪಡೆದನೆಂಬು ದನ್ನು ಅದರಿಂದ ತಿಳಿಯಬಹುದಾದುದರಿಂದ ಅದರ ಸಾರಾಂಶವನ್ನಿಲ್ಲಿ ತಿಳಿಸುವೆವು, “ ಈತನು ಇಪ್ಪತ್ತೆರಡನೆಯ ವಯಸ್ಸಿನಲ್ಲಿ ಇಂಗ್ಲಿಷ್ ಓದಲು ಪ್ರಾರಂಭಿಸಿದನಂತೆ; ಅದರಲ್ಲವನಿಗೆ ವಿಶೇಷ ಶ್ರದ್ದೆ ಇಲ್ಲದುದರಿಂದಲೇ ಆಮೇಲೆ ಐದುವರುಷಗಳಾದರೂ ಸಾಮಾನ್ಯವಾಗಿ ಮಾತನಾಡತ ಕಷ್ಟು ಯೋಗ್ಯತೆಯನ್ನು ಮಾತ್ರ ಪಡೆದಿದ್ದರೂ ತಪ್ಪಿಲ್ಲದೆ ಬರೆಯಲಾರದವನಾಗಿದ್ದನು. ಇಂಡಿಯಾ ಕಂಪೆನಿಯವರಕಡೆ ನಾನು ಜಂಗ್‌ಪುರದ ಕಲೆಕ್ಟರಾಗಿದ್ದ ಐದುವರುಷಗಳ ಕ್ಲಿಯೇ ಈತನು ನನ್ನ ಒಳಿಯ ದಿವಾನಕೆಲಸದಲ್ಲಿದ್ದು, ನನ್ನ ರಾಜಕೀಯ ವ್ಯವಹಾರಗಳನ್ನೂ ಸ್ವಂತ ವ್ಯವಹಾರಗಳನ್ನೂ ಬಹುಮಟ್ಟಿಗೆ ಸ್ವತಂತ್ರವಾಗಿಯೇ ನೆರವೇರಿಸುತ್ತಾ ಬುದ್ಧಿವಂತಿಕೆ ಯಿಂದ ಕೆಲಸಮಾಡುತ್ತಾ ಯೂರೋಪಿಯನರಿಂದ ನಮ್ಮ ದೇಶದವರೊಂದಿಗೆ ನಡಿಸುವ