ರಾಜಾ ರಾಮಮೋಹನರಾಯರ ಜೀವಿತ ಕರಿತ್ರ. ೨೫ ಬಾಗುವಹಾಗೆ ವೇದಾಂತಗಳಿಂದ ಬ್ರಹ್ಮನೇ ಸತ್ಯವೆಂತಲೂ, ನಿರಾಕಾರನಾದ ಆ ಪರಮೇ ಶ್ವರನಲ್ಲಿ ಆಕಾರಸಹಿತವಾದ ಪ್ರಪಂಚದ ಸ್ವರೂಪವನ್ನು ನಿರೂಪಿಸುವುದಕ್ಕೆ ಕಾರಣವು ಭ್ರಮೆಯೇ ಎಂತಲೂ, ಹೀಗೆ ನಿಶ್ಚ ಯಜ್ಞಾನವಿಲ್ಲದೇ ಇರುವುದಕ್ಕೆ ಜೀವನ ಅಜ್ಞಾನವೇ ಕಾರಣವೆಂತಲೂ ಉತ್ತರಕೊಟ್ಟನು, ಭಟ್ಟಾಚಾಯ್ಯನೆಂಬವನು ಪರಮೇಶ್ವರನಿಗೆ ರೂಪಧಾರಣವೇ ಇಲ್ಲದೆ ಇದ್ದರೆ ರಾಮ ಕೃಷ್ಣಾ ದವತಾರಗಳು ಹೇಗೆ ನಡೆದುವೆಂತಲೂ, ಒಬ್ಬಾನೊಬ್ಬ ಅರಸನು ತನ್ನ ಪ್ರಜೆಗಳ ಕ್ಷೇಮವನ್ನು ವಿಚಾರಿಸುವುದಕ್ಕಾಗಿ ಬೇರೆ ವೇಷವನ್ನು ಧರಿಸಿ ತಿರುಗುವಂತೆ ಈಶ್ವರನು ಸುದಾ ಸಂದರ್ಭಾನುಸಾರ ಭೂಮಿಯಲ್ಲಿ ಅವತರಿಸುವನೆಂಬುದು ಆಕ್ಷೇಪಕರವಲ್ಲವಾದುದರಿಂದ ಅಂತಹ ಅವತಾರ ರೂಪಕಗಳಾದ ವಿಗ್ರಹಗಳನ್ನು ಆರಾಧಿಸುವುದು ದೋಷವಲ್ಲವೆಂತಲೂ ವಾದಿಸಿದನು. ಇದಕ್ಕೆ ರಾಮಮೋಹನನು ಸಮಸ್ತ ಪ್ರಾಣಿಗಳಲ್ಲಿಯೂ ತುಂಬಿ ತುಳುಕು ತಿರುವ ಸತ್ಯೇಶ್ವರನ ಅಂಶವು ಶುಭ್ರವಾದ ಕನ್ನಡಿಗಳ ಮಧ್ಯದಲ್ಲಿರಿಸಿದ ದೀಪದ ಕುಡಿಯಂತೆ ರಾಮಕೃಷ್ಣಾದಿಗಳಲ್ಲಿ ತುಂಬಾ ಕಾಂತಿಯಿಂದ ಪ್ರಕಾಶಿಸಿದುದೆಂದು ಒಪ್ಪಿಕೊಳ್ಳಬಹುದೇ ಹೊರತು ಇಷ್ಟು ಮಾತ್ರದಿಂದಲೇ ಸಾಕಾದ ನಿರ್ಣಯವಾಗಲಾರದೆಂತಲೂ, ಈಶ್ವರನು ಸರ್ವ ವ್ಯಾವಿಯಲ್ಲವೇ ? ಎಂದು ವಿಗ್ರಹಗಳನ್ನು ಪೂಜಿಸತೊಡಗಿದರೆ ಮೃಗಪಕ್ಷಿಗಳನ್ನು ಕೂಡ ಪೂಜಿಸುವುದು ಅಗತ್ಯವಾಗುವದೆಂತಲೂ, ಎಗ್ರಹರೂಪವಾಗಿ ಹೊರತು ಬೇರೆ ರೂಪಗಳಲ್ಲಿ ಈಶ್ವರನನ್ನು ಪೂಜಿಸುವುದು ಶಾಸ್ತ್ರಸಮ್ಮತವಲ್ಲವೆಂದು ಹೇಳುವ ಪಕ್ಷದಲ್ಲಿ, ಅವೂ ಕೂಡ ಬ್ರಹ್ಮಜ್ಞಾನಿಗಳಿಗೆ ಈ ಅರ್ಚನೆ ಅನಾವಶ್ಯಕವೆಂದು ಹೇಳುತ್ತಿರುವುವೆಂತಲೂ, ವಾದಿಸುತ್ತಾ, ವಾಜಸನೇಯ ಸಂಹಿತಾದಿಗ್ರಂಥಪ್ರಮಾಣಗಳು ಹಲವನ್ನು ತೋರಿಸಿ, ಆ ವಾದವನ್ನು ಖಂಡಿ ಸಿದನು. ಭಟ್ಟಾಚಾರನ ತರುವಾಯ ಗೋಸ್ವಾಮಿಯೆಂಬುವನೂ, ಕೋತಾಕಾರನೆಂಬುವನೂ, ರಾಮಮೋಹನನು ವೇದಗಳಿಗೆ ಅಪಾರ್ಥವನ್ನು ಮಾಡುತ್ತಾ, ವ್ಯಾಸಾದಿ ಮಹರ್ಷಿಗಳಿಂದ ಮಾಡಲ್ಪಟ್ಟ ಗ್ರಂಧಗಳನ್ನು ಆಕ್ಷೇಪಿಸುತ್ತಾ, ಬ್ರಹ್ಮ ಬ್ರಹ್ಮ' ಎಂದು ಅರಚುತಿರುವನೆಂದು ಮನಸ್ಸು ಬಂದಂತೆ ಬರೆದು ಅವನನ್ನು ಅವಮಾನಪಡಿಸತೊಡಗಿದರು. ಆದರೆ 1821 ರಲ್ಲಿ ಇವುಗಳಿಗೆ ಕೊಡಲ್ಪಟ್ಟ ಪ್ರತ್ಯುತ್ತರಗಳು ಗ್ರಂಧರೂಪವಾಗಿ ಪ್ರಚುರಿಸಲ್ಪಟ್ಟು ದರಿಂದ ಅವರು ತಲೆಯೆತ್ತಲಿಕ್ಕೆ ಅವಕಾಶವಿಲ್ಲದೆ ಹೋಯಿತು. ತರುವಾಯ ಸುಬ್ರಹ್ಮಣ್ಯ ಶಾಸ್ತ್ರಿ ಎಂಬ ಪಂಡಿತನು ರಾಮಮೋಹನನಿಗೆ ಪ್ರತಿಕಕ್ಷಿಯಾಗಿ ಚರ್ಚಿಸುವುದಕ್ಕಾರಂಭಿಸಿದನು, ಇವನ ಪ್ರಶ್ನೆಗಳಿಗೆ ಬಂಗಾಳಿಭಾಷೆಯಲ್ಲಿ ಪ್ರತ್ಯುತ್ತರಗಳು ಕೊಡಲ್ಪಟ್ಟುವು. ಈ ಪ್ರತ್ಯುತ್ತರಗಳೇ ಗ್ರಂಥರೂಪವಾಗಿ ಸಕಲಜನರಿಗೂ ತಿಳಿಯುವಂತೆ ಸಂಸ್ಕೃತದಲ್ಲಿಯೂ, ಹಿಂದೀಭಾಷೆಯಲ್ಲಿ ಯೂ ಪ್ರಕಟಿಸಲ್ಪಟ್ಟುವು, ವೇದಾಧ್ಯಯನ ಮಾಡದೆ ಇದ್ದರೂ, ವರ್ಣಾಶ್ರಮಾಚಾರಗಳ ನಿರ್ಬಂಧವಿಲ್ಲದೆಯೇ ಯಾವ ಮನುಷ್ಯನಾದರೂ ಬ್ರಹ್ಮ ಮತಾವಲಂಬಿಯಾಗಿ, ಉನ್ನ ತಸ್ಸಾ ನವನ್ನು ಹೊಂದಬಹುದೆಂಬ ಸಿದ್ಧಾಂತವನ್ನು ಬಲಪಡಿಸಿದನು.
ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೩೨
ಗೋಚರ