೨೮ ೨೮ ರಾಜಾ ರಾಮಮೋಹನರಾಯರ ಜೀವಿತ ಚರಿತ್ರೆ, ರಚಿಸಿದ ಗ್ರಂಥದಲ್ಲಿ ಹೀಗೆ ಹೇಳಿರುವನು. ' ರಾಮಮೋಹನನಿಂದ ರಚಿಸಲ್ಪಟ್ಟವುಗಳೂ ಭಾಷಾಂತರಿಸಲ್ಪಟ್ಟವಗಳೂ ಆದ ಗ್ರಂಥಗಳಿಂದಲೂ, ಆತನ ಪ್ರತಿಪಕ್ಷದವರಿಂದ ಬರೆಯ ಲ್ಪಟ್ಟ ಗ್ರಂಧಗಳಿಂದಲೂ ಮೊಟ್ಟ ಮೊದಲು ಈ ಭಾಷೆಯಲ್ಲಿ ವಚನ ಗ್ರಂಥಗಳು ಅಭಿವೃದ್ಧಿಗೆ ಬಂದುವು, ಮತ್ತು ಈ ಮೂಲಕವಾಗಿಯೇ ಭವಿಷ್ಯ ತಂತತಿಯವರಿಗೆ ಉತ್ತಮರೀತಿಯಿಂದ ಗ್ರಂಧಗಳನ್ನು ಬರೆಯುವ ಮಾರ್ಗವು ಗೊತ್ತಾಯಿತು. ' ಬ್ರಹ್ಮಜ್ಞಾನಪ್ರಚಾರಕ್ಕಾಗಿ ರಾಮಮೋಹನನು ಅನೇಕ ಶಾಸ್ತ್ರಗಳನ್ನು ಪರಿಶೋಧಿಸಿ ದನು. ಆತನು ಒರೆದ ಗ್ರಂಧಗಳು ಅಷ್ಟು ಹೆಚ್ಚಾಗಿಲ್ಲದಿದ್ದರೂ ಪ್ರತಿ ಒಂದು ವಿಷಯದಲ್ಲಿ ಯೂ ವಿಶೇಷವಾಗಿ ವೇದಶಾಸ್ಕೂಕ್ತಗಳಾದ ಉದಾಹರಣೆಗಳನ್ನೇ ಕೊಡುತ್ತಾ ಬಂದಿರು ವನು, ಇವನು ಎಷ್ಟು ಕಷ್ಟಗಳನ್ನಾ ದರೂ ಸೈರಿಸಿ, ತನ್ನ ಉದ್ದೇಶಗಳನ್ನು ನೆರವೇರಿಸಿಕೊ ಳ್ಳುತ್ತಿದ್ದನು. ಇದಕ್ಕೊಂದು ನಿದರ್ಶನವಂಟ, ಒಂದು ದಿನ ಈತನ ಬಳಿಗೆ ಒಬ್ಬ ಸಂ ಡಿತನು ಬಂದು, ತಂತ್ರಶಾಸ್ತ್ರವನ್ನು ಕುರಿತು ಚರ್ಚಿಸಬೇಕೆಂದು ಅಪೇಕ್ಷಿಸಿದನು, ಆದರೆ ಅದಕ್ಕೆ ಮುಂಚೆ ಈತನು ಆ ಸಂಬಂಧದ ವಿಷಯಗಳನ್ನು ತಿಳಿದುಕೊಳ್ಳದೆ ಇದ್ದುದರಿಂದ “ ನಾಳೆ ಇದೇ ಹೊತ್ತಿಗೆ ದಯಮಾಡಿಸಿದಲ್ಲಿ ಸ್ವಲ್ಪಮಟ್ಟಿಗೆ ಮಾತನಾಡುವೆನು ' ಎಂದು ಆ ಪಂಡಿತನಿಗೆ ಹೇಳಿ ಕಳುಹಿಸಿ, ಕೂಡಲೇ ಶೋಭಾ ಎಂಬ ಬೀದಿಗೆ ಹೋಗಿ, ಅಲ್ಲಿನ ಸರಸ್ವತೀ ಭಂಡಾರದಲ್ಲಿ ಆ ವಿಷಯದ ಗ್ರಂಥವನ್ನು ತೆಗೆದುಕೊಂಡು ಬಂದು, ಆ ದಿನವೆಲ್ಲ ಅದನ್ನು ಬಹು ಆಸಕ್ತಿಯಿಂದ ಓದಿ, ತನ್ನ ಕುಶಾಗ್ರ ಬುದ್ಧಿಯಿಂದ ಅ ಗ್ರಂಧದಲ್ಲಿನ ಅಂಶಗಳನ್ನೆಲ್ಲ ತಿಳಿದುಕೊಂಡು, ಮರುದಿನ ಕಾಲಕ್ಕೆ ಸರಿಯಾಗಿ ಬಂದ ಆ ಪಂಡಿತನ ಸಂಗಡ ಒಳ್ಳೆಯ ಅನು ಭವಸ್ಸನಂತೆ ಆ ವಿಷಯವನ್ನು ವಾದಿಸಿ ಜಯಶೀಲನಾದನು. ಇದನ್ನು ಕಂಡ ಆ ಪಂಡಿ ತನು ಈತನ ವಿದ್ಯೆಗೂ, ಯೋಗ್ಯತೆಗೂ ತುಂಬ ಸಂತೋಷಿಸಿ, ಹೊಗಳುತ್ತ ಹೊರಟು ಹೋದನು. ಈತನು ಯಾರ ಸಂಗಡ ಮಾತನಾಡಿದರೂ, ಯಾರೊಂದಿಗೆ ಚರ್ಚಿಸಿದರೂ ವಿನಯ ವಾಗಿಯೇ ಪ್ರಶಂಸಿಸುತ್ತಿದ್ದುದಲ್ಲದೆ – ದುಪದಗಳನ್ನೇ ಉಪಯೋಗಿಸುತ್ತಾ ಕೊಟ್ಟ ಕೊನೆಗೆ ಎಂತಹ ಅಲ್ಪ ವಿಷಯದಲ್ಲಿಯಾದರೂ ಬಹು ಸುಲಭವಾಗಿ ಎದುರಾಳಿಯನ್ನು ತನ್ನ ಮಾರ್ಗ ಕ್ಕೆ ತಿರುಗುವಂತೆ ಮಾಡುತ್ತಿದ್ದನು. ಒಬ್ಬ ಬ್ರಾಹ್ಮಣನು ಇವನ ಮನೆಯ ಎದುರಿಗೆ ಅಲಂ ಕಾರಕ್ಕಾಗಿ ಬೆಳೆಸಿದ್ದ ಹೂವಿನ ತೋಟಕ್ಕೆ ನಿತ್ಯವೂ ಬಂದು, ಹೂಗಳನ್ನು ಬಿಡಿಸಿಕೊಂಡು ಹೋಗುತ್ತಿದ್ದನು. ಒಂದು ದಿನ ತಾನು ಮೈಮೇಲೆ ಹಾಕಿಕೊಂಡಿದ್ದ ಸಣ್ಣ ಅಂಗವಸ್ತ್ರ ವನ್ನು ಒಂದು ಗಿಡದಬಳಿ ಇಟ್ಟು, ತಾನು ಮತ್ತೊಂದು ಕಡೆ ಒಂದುಗಿಡದ ಹೂಗಳನ್ನು ಕುಯ್ಯತ್ತಿದ್ದನು, ಆ ತೋಟದ ಆಳು: ಹಾಸ್ಯಕ್ಕಾಗಿ ಆ ಅಂಗವಸ್ತ್ರವನ್ನು ಬೇರೊಂದು ಕಡೆ ಮುಚ್ಚಿಟ್ಟನು. ಅಷ್ಟರಲ್ಲಿ ರಾಮಮೋಹನನೂ ಅಲ್ಲಿಗೆ ಬಂದನು, ಬ್ರಾಹ್ಮಣನು ಹೂಗಳನ್ನು ಬಿಡಿಸಿಕೊಂಡು ಬಂದು ನೋಡುವಲ್ಲಿ ತನ್ನ ಅಂಗವಸ್ತ್ರ ಕಾಣಿಸಲಿಲ್ಲ, ಇದಕ್ಕೆ ಆತನು ಕೋಷಿಸಿ, ಗಟ್ಟಿಯಾಗಿ ಅಳುತ್ತಿದ್ದುದನ್ನು ನೋಡಿ ರಾಮಮೋಹನನು ಈ ವರ್ತ
ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೩೫
ಗೋಚರ