೪೦ ರಾಜಾ ರಾಮಮೋಹನರಾಯರ ಜೀವಿತ ಚರಿತ್ರೆ, ಗಳನ್ನು ಂಟುಮಾಡುವೆವೆಂದು ಆಶೆ ತೋರಿಸಿ ಇತರರಿಗೆ ನಂಬಿಕೆ ಹುಟ್ಟುವಂತೆ ಒಬ್ಬರಿಬ್ಬರಿಗೆ ಅಂತಹ ಸಹಾಯಗಳನ್ನು ಮಾಡುತ್ತಿದ್ದರೂ ಪ್ರತಿ ವರ್ಷವೂ ಅತ್ಯಲ್ಪ ಸಂಖ್ಯೆಯ ಜನರು ಮಾತ್ರ ಈ ಮತಕ್ಕೆ ಸೇರುತ್ತಿದ್ದಾರೆಂತಲೂ, ನಿಜವಾಗಿ ಮತ ತತ್ವಗಳನ್ನು ಗ್ರಹಿಸಬಲ್ಲ ಉತ್ತಮ ವರ್ಣಗಳವರಾರೂ ಸೇರುವುದಿಲ್ಲವೆಂತಲೂ, ಕೆಲವರು ಫಾದರಿಗಳು ತಾವು ತುಂಬ ಕೆಲಸಮಾಡುತ್ತಿದ್ದೇವೆಂತಲೂ ಈ ವರ್ಷ ದಲ್ಲಿ ಇಂತಿಷ್ಟು ಮಂದಿ ಹಿಂದೂ ಜನರನ್ನು ಕ್ರಿಸ್ತಿ ಯರಾಗಿ ಮಾಡಿದ್ದೇವೆಂತಲೂ ಬರೆದುಕಳುಹುತ್ತಿದ್ದರೂ ಕ್ರಿಸ್ತ ಮತವು ನಿಜವಾಗಿಯೂ ಅಭಿ ವೃದ್ಧಿ ಹೊಂದಲಿಲ್ಲವೆಂಬಂಶವನ್ನು ಬುದ್ದಿವಂತರಾದ ಕೆಲವರು ಒಪ್ಪುತ್ತಲೇ ಇರುವರೆಂತಲೂ, ನೂರು ವರ್ಷಗಳಲ್ಲಿ ಇಷ್ಟು ಸ್ವಲ್ಪ ವೃದ್ಧಿಯನ್ನು ಹೊಂದಿದ ಪ್ರಯತ್ನಗಳು ಹಿಂದೂ ಮತ ವನ್ನು ಬಾಧಿಸಲಿಕ್ಕೆ ಸಾಲವಾದುದರಿಂದ ಪಾಶ್ಚಾತ್ಯ ನಾಗರಿಕತೆಯನ್ನು ವ್ಯಾಪನೆಗೊಳಿಸಬೇ ಕೆಂಬ ಉದಾರಬುದ್ದಿಯಿದ್ದಲ್ಲಿ ವಿದ್ಯಾಶಾಲೆಗಳನ್ನೂ ಕರ್ಮ ಶಾಲೆಗಳನ್ನೂ ಸ್ಥಾಪಿಸಿ ಈ ದೇ ಶೀಯರನ್ನು ಜ್ಞಾನವಂತರನ್ನಾಗಿ ಮಾಡುವುದು ಅಗತ್ಯವೆಂತಲೂ ಬಹು ಯುಕ್ತಿಯುಕ್ತ ವಾಗಿ ಚರ್ಚಿಸಿ ಬರೆದನು. ಮತವಿಷಯ ಚರ್ಚೆಗಳನ್ನೇ ನಾವು ಪರಂಪರೆಯಾಗಿ ಬರೆಯುತ್ತಾ ಬಂದುದರಿಂದ ನಾವು ರಾಮಮೋಹನನಿಂದ ಮಾಡಲ್ಪಟ್ಟ ಸಾಂಘಿಕ, ರಾಜಕೀಯ, ವಿದ್ಯಾ ಸಂಬಂಧವಾದ ಕಾಕ್ಯಗಳನ್ನು ಬರೆಯದೆ ಬಿಟ್ಟುಬಿಟ್ಟೆವು. ಆದರೂ ಆ ವಿಷಯಗಳನ್ನು ಕುರಿತು ಸ್ವಲ್ಪಮ ಟ್ವಿಗೆ ವಿಚಾರಮಾಡಬೇಕಾಗಿದೆ, ಓದತಕ್ಕ ವರಿಗೆ ಅನುಕೂಲವಾಗಿರುವಂತೆ ರಾಮಮೋಹ ನನ ಇತರ ಕಾಕ್ಯಗಳನ್ನೆಲ್ಲ ಪ್ರತ್ಯೇಕವಾಗಿ ಒಂದು ಪ್ರಕರಣದಲ್ಲಿ ಬರೆಯಬೇಕೆಂದೇ ನಾವು ಯೋಚಿಸಿದ್ದರೂ ಆತನ ಜೀವಿತಕಾಲದ ಕಾವ್ಯಗಳಲ್ಲಿ ಬಹುಮುಖ್ಯವಾಗಿ ಭಾವಿಸಲ್ಪಡತಕ್ಕ ಒಂದು ಮಹಾಕಾವ್ಯವನ್ನು ಮಾತ್ರ ಈ ಪ್ರಕರಣದಲ್ಲಿ ಸಂಕ್ಷೇಪವಾಗಿ ಹೇಳುವೆವು. ಆ ವಿಷಯವು ಬ್ರಹ್ಮ ಸಮಾಜ ಮತ ಸ್ಥಾಪನೆಯೇ, ಕಲ್ಕತ್ತೆಗೆ ಪ್ರವೇಶಿಸಿದ (1816) ತರುವಾಯ ಮಾನಿಕತುಲಾದಲ್ಲಿನ ತನ್ನ ಮನೆಯಲ್ಲಿ ಆತ್ಮೀಯ ಸಭೆ ಎಂಬ ಹೆಸರಿ ನಿಂದ ಒಂದು ಸಮಾಜವನ್ನು ಸ್ಥಾಪಿಸಿ ಅದರಲ್ಲಿ ವಾರಕ್ಕೊಂದುಸಾರಿ ಉಪನ್ಯಾಸವನ್ನೂ ಭಜನೆಯನ್ನೂ ಶಿವಪ್ರಸಾದನಿಂದ ವೇದಪಾಠಗಳನ್ನೂ ಜರುಗಿಸುತ್ತಿದ್ದನು. ಈ ಸಭೆಯು ಸರ್ವಜನೋಪಯುಕ್ತವಾಗುವಂತೆ ಸ್ಥಾಪಿಸಲ್ಪಟ್ಟಿದ್ದರೂ ರಾಮಮೋಹನನಲ್ಲಿ ಮತದ್ವೇಷ ವನ್ನು ಬೆಳಸುತ್ತಿದ್ದವರು ಈತನ ಮೇಲಣ ಆಗ್ರಹದಿಂದ ಸಭೆಗೆ ಬಾರದೆ ಇರುತ್ತಿದ್ದರು. ಆದರೆ ಆತನಿಗೆ ಮನಃಪ್ರಾಣಗಳನ್ನು ಕೊಟ್ಟು ಸ್ನೇಹಿತರಾಗಿದ್ದವರೂ ರಾಮಮೋಹನನ ಮತವನ್ನು ಸ್ವೀಕರಿಸಿದೆವೆಂದು ಬಹಿರಂಗವಾಗಿ ತಿಳಿಯಪಡಿಸಿ ಅದರ ಅಭಿವೃದ್ಧಿಗಾಗಿ ಪ್ರಯ ತ್ನ ಪಡುತ್ತಿದ್ದವರೂ ಆದ ಕೆಲವರು ಮಾತ್ರವೇ ಈ ಸಭೆಗೆ ಬರುತ್ತಿದ್ದರು,
- ಪ್ರತಿ ಪಕ್ಷದವರು ಎಷ್ಟು ಮಟ್ಟಿಗೆ ನಿಮ್ಮ ಮಾಡಲಿಕ್ಕೆ ಪ್ರಯತ್ನಿಸಿದರೂ ರಾಮಮೋ ಹನನು ತನ್ನ ಕರ್ತವ್ಯವನ್ನು ಬಹುಶ್ರದ್ಧೆಯಿಂದಲೇ ನಡಿಸುತ್ತಿದ್ದನು. 1819 ನೇ ವರ್ಷ ದಲ್ಲಿ ಬಾರೀಲಾಸ್ ಜೋಬೆ ಎಂಬವನ ಮನೆಯಲ್ಲಿ ರಾಮಮೋಹನನಿಂದ ಸ್ಥಾಪಿಸಲ್ಪಟ್ಟ