೫೦ ರಾಜಾ ರಾಮಮೋಹನರಾಯರ ಜೀವಿತ ಚರಿತ್ರೆ, ವಿಚಾರವು ಯಾವಾಗ ಹೇಗೆ ಪ್ರಾರಂಭವಾಯಿತೆಂಬುದನ್ನು ತಿಳಿಯುವುದು ಕಷ್ಟವಾಗಿದೆ. ಆದರೆ ವೇದಗಳಲ್ಲಿ ಎಲ್ಲಿಯಾದರೂ ಇದನ್ನು ಕುರಿತು ಪ್ರಸ್ತಾಪವೇ ಇಲ್ಲದಿರುವುದಲ್ಲದೆ ವಿತಂ ತುಗಳ ವಿವಾಹವಾಗಲಿಕ್ಕೆ ಎಲ್ಲರಿಗೂ ಧಾರಾಳವಾಗಿ ಅಪ್ಪಣೆ ಕೊಡಲ್ಪಟ್ಟಿದೆ. ಮನುವು, ಯಾಜ್ಞವಲ್ಕನು ಮೊದಲಾದ ಸ್ಮತಿಕರ್ತರಿಗೆ ಸುದಾ ಈ ವಿಷಯವನ್ನು ಕುರಿತು ಏನೂ ತಿಳಿಯದು, ಇದರಿಂದ ಈ ದುರಾಚಾರವು ಪುರಾಣರಚನೆಯ ಕಾಲದಲ್ಲಿ ಆರಂಭವಾಗಿ ಕ್ರಮಕ್ರಮವಾಗಿ ದೇಶದಲ್ಲೆಲ್ಲಾ ವ್ಯಾಪಿಸಿ, ಮಹಮ್ಮದೀಯರು ಈ ದೇಶದ ಮೇಲೆ ದಂಡೆ ಮೈ ಒರುವವರೆಗೆ ಸಂಪೂರ್ಣವಾಗಿ ಅಭಿವೃದ್ಧಿಗೆ ಬಂದಿತ್ತೆಂದು ಸ್ಪಷ್ಟವಾಗಿ ತಿಳಿಯಬರು ವದು, ಘಷ್ಟೇ ಮಹಮ್ಮದನ ತರುವಾಯ ಈ ದೇಶಕ್ಕೆ ಬಂದಿದ್ದ ಆಲಭೂನೀ ಎಂಬಾತನು ಹೀಗೆ ಒರೆದಿರುವನು. « ಒಂದುವೇಳೆ ಯಾವ ಹೆಂಗಸಾದರೂ ತನ್ನ ಗಂಡನನ್ನು ಕಳೆದುಕೊಂಡರೆ ಎರಡನೆ ಯ ಮದುವೆಯನ್ನು ಮಾಡಿಕೊಳ್ಳಕೂಡದು, ಬದುಕಿರುವತನಕ ವಿಧವೆಯಾಗಿದ್ದು, ಬ್ರಹ್ಮಚರವನ್ನು ಅನುಸತಕ್ಕ ಷ್ಟು ; ಆದವಾ ಗಂಡನ ಶವದೊಂದಿಗೆ ಸುಡಲ್ಪಡತಕ್ಕದ್ದು: ಎಂಬವೆರಡರಲ್ಲಿ ಯಾವುದಾದರೊಂದನ್ನು ನಡಿಸ ತೇ ಕಾಗಿರುವುದು ಬದುಕಿರುವತನಕ ಅನೇಕ ನಿರ್ಬಂಧಗಳಿಗೆ ಒಳಪಟ್ಟಿರಬೇಕಾಗಿ ಇದ್ದುದರಿಂದ ಎರಡನೆಯದಾದ ಸಹಗಮನವೇ ಉತ್ತಮ ವೆಂದು ತಿಳಿದಿದ್ದಿತು.” ಮಹಮ್ಮದೀಯರ ಆಳಿಕೆಯಲ್ಲಿ ಯಾರಾದರೂ ಈ ಭಯಂಕರವಾದ ದುರಾಚಾರ ವನ್ನು ತೊಲಗಿಸುವುದಕ್ಕೆ ಪ್ರಯತ್ನಿಸದೆ ಹೋದರು, ಕೆಲವು ಪಾರಸಿ ಕವಿಗಳು ಈ ಆಚಾ ರವನ್ನನುಸರಿಸಿ, ಹಿಂದೂಸ್ತ್ರೀಯರ ಪಾತಿವ್ರತ್ಯವು ಶ್ಲಾಘನೀಯವೆಂತಲೂ, ಪತಿಗಳಲ್ಲಿ ಅವರಿ ಗಿರುವ ಪ್ರೇಮವು ಅಸಾಧಾರಣವೆಂತಲೂ, ವರ್ಣಿಸಿ ಹಲವು ಗ್ರಂಥಗಳನ್ನು ಬರೆದರು. ನ್ಯಾಯಮೂರ್ತಿಯಾದ ಅಕ್ಷರು ಚಕ್ರವರ್ತಿ ಮಾತ್ರ ಈ ನೀತಿಬಾಹ್ಯವಾದ ದುಸ್ಕಾರ ವನ್ನು ನಿಲ್ಲಿಸಲಿಕ್ಕೆ ಸ್ವಲ್ಪ ಮಟ್ಟಿಗೆ ಪ್ರಯತ್ನಿಸಿದನು. ಇಷ್ಟವಿಲ್ಲದೆ ಸ್ತ್ರೀಯನ್ನು ಬಲಾತ್ಕಾ ರವಾಗಿ ಸುಟ್ಟು ಹಾಕಬಾರದೆಂದು ಮಾತ್ರ ಆಜ್ಞಾಪಿಸಿ ಸುಮ್ಮನಿದ್ದನು. ಅಕ್ಟರನ ಮಗ ನಾದ ಜಿಹಾಂಗೀರನು ಹಿಂದೂಮತವನ್ನು ಬಿಟ್ಟು, ಮಹಮ್ಮದೀಯಮತವನ್ನವಲಂಬಿಸಿದವರು ಸುದಾ ಬಂಗಾಳದ ಕೆಲ ಕೆಲವು ಗ್ರಾಮಗಳಲ್ಲಿ ಸಹಗಮನ ಮಾಡುತ್ತಿರುವರೆಂಬುದನ್ನು ಕೇಳಿ ಆಶ್ವರದಲ್ಲಿ ಮಗ್ನನಾದನು, ಆತನು ಒಂದುವೇಳೆ ಕಾಶ್ಮೀರಕ್ಕೆ ಹೋಗಿ ರಾಜೇರಿ” ಎಂಬಲ್ಲಿ ಗುಡಾರದಲ್ಲಿದ್ದಾಗ ಆ ಗ್ರಾಮದಲ್ಲಿದ್ದ ಒಬ್ಬ ಮಹಮ್ಮದೀಯ ಸ್ತ್ರೀಯು ತನ್ನ ಪತಿಯ ಹೆಣದೊಂದಿಗೆ ಹೂಳಲ್ಪಡುತ್ತಿರುವುದನ್ನು ಕೇಳಿದನು, ಮತ್ತು ಅದೇ ದಿನಗಳಲ್ಲಿ ಯೇ 12 ವರ್ಷಗಳ ವಯಸ್ಸಿನ ಒಬ್ಬ ಮುಸಲ್ಮಾನರ ಹುಡುಗಿಯು ಅದೇರೀತಿಯಲ್ಲಿ ಹೂಳ ಲ್ಪಟ್ಟ ಳು ; ಮುಂದೆ ಇಂಗ್ಲಿಷರ ಪ್ರಭುತ್ವವು ಆರಂಭಿಸಿದಮೇಲೆ ಅವರು ಪರಿಪಾಲನಾದಿ ಕಾರಗಳಲ್ಲಿದ್ದುದರಿಂದ ಪ್ರಜಾಸಾಮಾನ್ಯಕ್ಕೆ ಅಹಿತವಾದ ಸಂಘ ಸಂಬಂಧಗಳಲ್ಲಿ ಬದಲಾವ ಣೆಗಳನ್ನು ಮಾಡಲು ಅನುಕೂಲವಿಲ್ಲದೆ ಇದ್ದಿತು. ಸಮನಾಗರಿಕರಿಗೆ ಇದಕ್ಕಿಂತ ವಿಷಾದ ಕರವಾಗಿಯ ಭಯಂಕರವಾಗಿಯೂ ಇರುವ ದುಷ್ಕಾರವು ಮತ್ತಾವುದೂ ಇಲ್ಲದಿದ್ದರೂ
ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೫೭
ಗೋಚರ