ವಿಷಯಕ್ಕೆ ಹೋಗು

ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೮ ರಾಜಾ ರಾಮಮೋಹನರಾಯರ ಜೀವಿತ ಚರಿತ್ರೆ, ಯತ್ನಿಸಿದರು, ನ್ಯಾಯಾಧಿಪತಿಯು ತನ್ನ ಶಕ್ತಿಯನ್ನೆಲ್ಲಾ ಉಪಯೋಗಿಸಿದುದರಿಂದ ಅವರ ಉದ್ದೇಶವು ನೆರವೇರದೆ ಹೋಯಿತು, ಒಬ್ಬ ಇಂಗ್ಲಿಷರ ಸ್ತ್ರೀಯು ಈ ಸಂಗತಿಯ ನ್ನೆಲ್ಲ ಪ್ರತ್ಯಕ್ಷವಾಗಿ ನೋಡಿ “ವಿನೋದಗಳೂ ವಾಡಿಕೆಗಳೂ' (Fun Farce) ಎಂಬ ಗ್ರಂಥ ದಲ್ಲಿ ಬರೆದಳೆಂದು ಬಂಗಾಳಿ ಜೀವಚರಿತ್ರಕಾರನು ಹೀಗೆ ಬರೆದಿರುವನು, 'ಕಾಶೀಪಟ್ಟಣ ದಲ್ಲಿ ಒಬ್ಬ ಸ್ತ್ರೀಯು ತನ್ನ ಪತಿಯು ಸತ್ತು ಹೋದ 12 ತಿಂಗಳ ತರುವಾಯ ಬಂಧುಗಳ ಪ್ರೊತ್ಸಾಹದಿಂದ ಸತಿಯಾಗುವುದಕ್ಕೆ ಯತ್ನಿಸಿದಳು, ಈಕೆಯ ಚಿತೆಯಿಂದ ಧುಮುಕಿ ಗಂಗೆಯಲ್ಲಿ ಬಿದ್ದಳು, ಪಟ್ಟಣದಲ್ಲಿನ ಮುಖಂಡರೆಲ್ಲರೂ ಅವಳನ್ನು ಬಲಾತ್ಕಾರದಿಂದ ಸುಡಬೇಕೆಂದು ನಿಶ್ಚಯಿಸಿಕೊಂಡು ಅಧಿಕಾರಿಗಳು ಅಡ್ಡಿ ಮಾಡಿದರೆ ಅವರನ್ನು ಇದಿರಿಸ ಬೇಕೆಂಬ ಸನು ಪವನ್ನು ಮಾಡುತ್ತಿದ್ದರು, ಆದರೆ ವಿವೇಕಿಯಾದ ಅಲ್ಲಿನ ಅಧಿಕಾರಿಯು ಆ ಪ್ರಯತ್ನಗಳನ್ನೆಲ್ಲಾ ನೋಡಿ ಉಪಾಯಗಿಂದ ಅವರನ್ನೆಲ್ಲಾ ಅಗಲಿಸಿ ಸಾಯಲಕ್ಕಿ ರುವ ದಿಕ್ಕಿಲ್ಲದ ಆ ಅನಾಧೆಯ ಪ್ರಾಣವನ್ನು ಕಾಪಾಡಿದನು, ಈ ವಿಷಯವನ್ನು ನಾನು ಸ್ವಂತವಾಗಿ ನೋಡಿದೆನೆಂದು ಲೆಫ್ಘನೆಂಟ' ಕರಲ್ *ರ್ಮೆ' ಎಂಬಾತನು ಬರೆದಿರುವನು. ' ಇನ್ನೂ ಇಂತಹ ಅನೇಕ ದೃಷ್ಟಾಂತಗಳಿರುವುವು. ರಾಮಮೋಹನನು ಈ ದುರಾಚಾರ ನಿರ್ಮೂಲನಕ್ಕಾಗಿ ಗ್ರಂಥಗಳನ್ನು ಬರೆಯು ವುದು, ವಾಸದಿಂದ ಚರ್ಚಿಸುವುದು ಇವುಗಳು ಮಾತ್ರವಲ್ಲದೆ ಆಗಾಗ್ಗೆ ಗಂಗಾ ತೀರಕ್ಕೆ ಸ್ವಂತವಾಗಿ ರೋಗಿ ಸಹಗಮನವು ಎಂತಹ ದುಃಖಕರವಾದ ಆಚಾರವೆಂಬುದನ್ನು ವಿವರಿಸುತ್ತಾ, ಕೇಳುವರ ಮನಸ್ಸಿನಲ್ಲಿ ನಾಟುವಂತೆ ಉಪನ್ಯಾಸಮಾಡುತ್ತಾ ಕೆಲವು ಸಹ ಗಮನಗಳನ್ನು ತಡೆಯುತ್ತಾ ಬಂದನು. ಒಂದಾನೊಂದುದಿ ದೊಡ್ಡ ಮನೆತನದ ಒಬ್ಬ ಹೆಂಗಸು ಸಹಗಮನ ಮಾಡಬೇಕೆಂಬುದನ್ನು ಕೇಳಿ ರಾಮಮೋಹನನು ಅಲ್ಲಿಗೆ ಹೋಗಿ ಆಕೆಯ ಬಂಧುಗಳೆಲ್ಲರಿಗೂ ಮರುಕಹುಟ್ಟುವಹಾಗೆ ಬೋಧಿಸುತ್ತಿರಲು ಅವರೆಲ್ಲರೂ ಕೋ ಪಿಸಿ ನೀನು ಮೇಛನೆಂದು ನಿಂದಿಸಿದರು, ಆ. ಮತ್ಸರವಿಲ್ಲದ ಈ ಮಹಾತ್ಮನು ಇದುಂದ ಕೋಪಿಸಿಕೊಳ್ಳುವನೋ ? ಇವನು ಯಥಾಪ್ರಕಾರವಾಗಿ ಬೋಧಿಸುತ್ತಿದ್ದನು. ಆದರೆ ಇವನ ಹಿಂದೆ ಇದ್ದ ನೃತ್ಯರು ತಮ್ಮ ಯಜಮಾನನನ್ನು ಬೈದುದಕ್ಕಾಗಿ ಬಹಳವಾಗಿ ಕೋಪಿಸಿಕೊಂಡರು, ರಾಮಮೋಹನನು ಅವರನ್ನು ಸಮಾಧಾನಗೊಳಿಸಿದನು. ಹೀಗೆ ತನ್ನಿಂದಮಾಡಲ್ಪಟ್ಟ ಪ್ರಯತ್ನಗಳಿಂದುಂಟಾದ ಸತ್ಸಲಗಳನ್ನು ತನ್ನ ಕಣ್ಣಿನಿಂದ ಲೇ ನೋಡತಕ್ಕ ಭಾಗ್ಯವು ರಾಮಮೋಹನನಿಗೆ ಲಭಿಸಿದುದಕ್ಕೆ ನಾವು ತುಂಬಾ ಸಂತೋಷಿಸ ಬೇಕಾಗಿದೆ, 1829 ನೇ ಇಸವಿಯ ಡಿಸೆಂಬರು 4ನೆಯ ದಿನವು ಹಿಂದೂ ಚರಿತ್ರೆಯಲ್ಲಿ ಜ್ಞಾಪಕದಲ್ಲಿ ಇಡಬೇಕಾದ ದಿವಸವಾಗಿದೆ, ಆ ದಿನ 'ಲಾರ್ಡ್ ವಿಲಿಯಂ ಬೆಂಟಿಂಕ್? ಎಂಬ ರಾಜಪ್ರತಿನಿಧಿಯ ಸಭಾಸ್ಥಾನದಲ್ಲಿ ಈ ದುರಾಚಾರವು ನಿಲ್ಲಿಸಲ್ಪಟ್ಟಿದೆ ಎಂಬ ಶಾಸ