ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೩ ರಾಜಾ ರಾಮಮೋಹನರಾಯರ ಜೀವಿತ ಚರಿತ್ರೆ, ಇುತ್ತಾ ತಮ್ಮ ಸ್ಥಳಗಳಿಗೆ ಹೋಗುತ್ತಿದ್ದರು, ಈ ವಿಷಯಗಳೆಲ್ಲವೂ ರಾಮಮೋಹನನ ಗ್ರಂಥಗಳಿಂದ ಮಾತ್ರವಲ್ಲದೆ ಆಗಾಗ್ಗೆ ಪ್ರತ್ಯಕ್ಷವಾಗಿ ನೋಡಿದ ಕೆಲವು ಆಂಗ್ಲಯರಿಂದ ಕೂಡ ದೃಢಪಡಿಸಲ್ಪಟ್ಟಿದೆ. ಜೇಮ್ಸ್ ಎಂಬಾತನು ಬರೆದ “ಸತ್ಜ್ ಕೈ ಟೂ ಬಿರ್ಟ? ಎಂಬ ಗ್ರಂಥದಲ್ಲಿ ಈವಿಷಯವಾಗಿ ಬಹು ವ್ಯಸನವುಂಟಾಗುವಂತೆ ಬರೆಯಲ್ಪಟ್ಟಿದೆ. ಅಕ್ಕಟಾ ಮರಣವೆಂಬುದು ಬಲು ಭಯಂಕರವಾದುದಲ್ಲವೆ ? ಅದರಿಂದ ಉಂಟಾ ಗುವ ಬಾಧೆಗೆ ಈ ಲೋಕದಲ್ಲಿ ಇತರ ಕಷ್ಟಗಳು ಯಾವುವೂ ಸಮವಾಗಲಾರವು. ಮನು ಷನು ಒಂದೊಂದುವೇಳೆ ಹೆಚ್ಚಾದ ಕೋಪಬಂದಾಗಲೂ, ತುಂಬಾ ಚಿಂತೆಯುಂಟಾದಾ ಗಲೂ, ಸಾಯುವದೇ ಲೇಸೆಂದು ಬಯಸುವುದು ನಮ್ಮಲ್ಲಿ ಸ್ವಾಭಾವಿಕವಾಗಿಯೇ ಇರು ವದು, ಆದರೆ ಹಾಗೆ ಬಯಸುವ ಮನುಷ್ಯನ ಇದಿರಿಗೆ ಮೃತ್ಯುವು ಪ್ರತ್ಯಕ್ಷವಾಗಿ ಬಂದು ನಿಂತರೆ ಅವನು ಅದರ ಕರಾಳ ಮುಖದಲ್ಲಿ ಪ್ರವೇಶಿಸಿ ಸಾಯಲಕ್ಕಿಂತಲೂ, ಬದುಕಿದ್ದು ಪ್ರಪಂಚದ ಸಕಲವಿಧ ಕಷ್ಟಗಳನ್ನೆಲ್ಲಾ ಸಹಿಸುವುದಕ್ಕೆ ಮನಃಪೂರ್ವಕವಾಗಿ ಒಪ್ಪಿಕೊ ಳ್ಳುವನು, ಅಯ್ಯೋ ! ಪಾಪ .ಕೆಲವರು ಅನಾಧಯುವತಿಯರು ಮೇಲೆಹೇಳಿದಂತೆ ಎಷ್ಟು ವಿಧವಾಗಿ ಬಿಗಿದು ಕಟ್ಟಲ್ಪಟ್ಟರೂ ಅಗ್ನಿ ಜ್ವಾಲೆಯ ಬಾಧೆಗಳಿಗೆ ತಡೆ ಬಲಾರದೆ, ಕಟ್ಟುಗ ಳನ್ನು ಹರಿದುಕೊಂಡು, ತಮ್ಮ ಪ್ರಾಣಗಳನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಚಿತೆಯಿಂದೆ ಹೊರಕ್ಕೆ ಧುಮುಕುತ್ತಿದ್ದರು, 1828 ನೆ ನವಂಬರ' ? ನೆಯ ತಾರೀಖಿನಲ್ಲಿ ರ್ಕಾಪುರದಲ್ಲಿ ಒಬ್ಬ ಮಾರವಾಡಿ ವತಃ ಕನು ಸತ್ತುಹೋದನು, ಆತನ ಹೆಂಡತಿಯು ಸತಿಯಾಗಬೇಕೆಂ ದು ಅಗತ್ಯವಾದ ವಸ್ತು ಸಾಧನಗಳನ್ನೆಲ್ಲಿ ಸಜ್ಜುಗೊಳಿಸಿಕೊಂಡು ತಾನಾಗಿಯೇ ಚಿತೆಯನ್ನು ಪೇರಿಸಿ ತುಂಬ ಧೈಯ್ಯದಿಂದ ಪತಿಯ ಶವವನ್ನು ತನ್ನ ತೊಡೆಯಮೇಲಿಟ್ಟು ಕೊಂಡು ಅಲ್ಲಿನ ಆಚಾರದಂತೆ ರಾಮನಾಮವೇ ಸತ್ಯವೆಂದು ಅರ್ಧಕೊಡುವ “ca ದ ನಾವು' ಸತ್ಯ ಹೈ ಎಂಬ ವಾಕ್ಯವನ್ನು ಚರಿಸುತ್ತ ಉರಿಗೊಳಿಸಿ ಚಿತೆಯಲ್ಲಿ ಕುಳಿತಳು. ಆದರೆ ಕ್ರಮಕ್ರಮ ವಾ.) ಅಗ್ನಿ ಜ್ವಾಲೆಗಳು ಬೆಳೆದು ದೇಹವನ್ನು ಸುಡತೊಡಗಿದ ಕೂಡಲೇ ಆ ಬಾಧೆಯನ್ನು ತಾಳಲಾರದೆ ಹೊರಕ್ಕೆ ಹೊರಟು, ಗಂಗಾ ನದಿಯಲ್ಲಿ ಬೀಳಲು ಯತ್ನಿಸಿದಳು. ಆವೇಳೆಗೆ. ಏನಾದರೂ ಬಲಾತ್ಕಾರವು ನಡೆದಿದೆ, ಎಂಬುದನ್ನು ಸಮ್ಮಾರದ ಅಪ್ಪಣೆಯಂತೆ ವಿಚಾರಿ ಸುವುದಕ್ಕಾಗಿ ಆಸ್ಥಳಕ್ಕೆ ಬಂದಿದ್ದ ಪಟ್ಟಣದ ನ್ಯಾಯಾಧಿಕಾರಿಯು ತಾನು ದೂರವಾಗಿ ದ್ದು ಕೊಂಡು ಚಿತೆಯ ಬಳಿಯಲ್ಲಿ ಒಬ್ಬ ಭಟನನ್ನು ಒರೆಹಿರಿದ ಕತ್ತಿಯೊಂದಿಗೆ ನಿಲ್ಲಿಸಿದ್ದನು. ಆ ಸಿ_ಯು ಜತೆಯಿಂದ ಹೊರಕ್ಕೆ ಬರಬೇಕೆಂದು ತಲೆಯೆತ್ತಿದಕೂಡಲೆ ನ್ಯಾಯಾಧಿಪ ತಿಯು ತನನ್ನು ಅಲ್ಲಿ ನಿಲ್ಲಿಸಿರುವುದು ಆ ಹೆಂಗಸನ್ನು ಹೊರಕ್ಕೆ ಉರಳದಂತೆ ಮಾಡಲಿಕ್ಕೆ ಎಂತಲೇ ಭ್ರಮಿಸಿ ಆಭಟನು ತನ್ನ ಕತ್ತಿಯನ್ನು ಝಳಪಿಸಿದನು. ಪಾಪ ! ಆ ಯುವ ತಿಯು ಭಯಪಟ್ಟು ಮರಳಿ ಚಿತೆಯಲ್ಲಿ ಪ್ರವೇಶಿಸಿದಳು, ಆದರೆ ಭಯಂಕರ ಜ್ವಾಲೆಗಳಿಗೆ ತಡೆಯಲಾರದೆ ಒಂದೇಸಾರಿಗೆ ಹಾರಿ ಹೊರಕ್ಕೆ ಧುಮುಕಿ ಗಂಗಾ ನದಿಯಲ್ಲಿ ಬಿದ್ದಳು. ಆ ವರ್ತಕನ ಬಂಧುಗಳೆಲ್ಲರೂ ಒಂದಾಗಿ ಬಂದು ಬಲವಂತವಾಗಿ ಸುಟ್ಟು ಬಿಡಬೇಕೆಂದು