పిత్రి ಕನ್ನಡದಲ್ಲಿ ಮಹಾತ್ಮರ ಜೀವನ ಚರಿತ್ರೆಗಳು ಬಹಳ ಕಡಿಮೆ. ಇಂಡಿಯಾದ ಇತರ ದೇಶಗಳಲ್ಲಿ ಪಂಡಿತರು ಇಂತಹ ಗ್ರಂಥಗಳನ್ನು ದೇಶಭಾಷೆಯಲ್ಲಿ ಪ್ರಕಟಿಸಿ ಜನರ ಸಂಶಯ ಗಳನ್ನು ಪರಿಹರಿಸುತ್ತಿರುವರು, ನಾನು ಆಂಧ್ರಭಾಷೆಯಿಂದ ಕೆಲವರ ಮಹಾತ್ಮರ ಜೀವನ ಚರಿತ್ರೆಗಳನ್ನು ಕನ್ನಡಿಸಿ ಇದ್ದೇನೆ, ಅವು ಗಳಲ್ಲಿ ಈ ರಾಜಾರಾಮಮೋಹನರಾಯರ ಜೀವನ ಚರಿತ್ರೆಯು ಒಂದಾಗಿದೆ. ಈತನು ಮಾಡಿದ ಸಾಹಸ ಪ್ರಯತ್ನಗಳಿಂದ ಸಂಘಕ್ಕೂ ದೇಶಕ್ಕೂ ಎಷ್ಟೆಷ್ಟು ಉಪಕಾರಗಳಾದುವೆಂಬುದನ್ನು ಈ ಪುಸ್ತಕದಿಂದ ತಿಳಿಯಬಹುದು, ಧಾರಾ ಡದ ಕರ್ನಾಟಕ ವಿದ್ಯಾವರ್ಧಕ ಸಂಘದವರ ಬಹುಮತಿಯನ್ನು ಪಡೆದು ಈ ಗ್ರಂಧವು ಕರ್ನಾಟಕ ಗ್ರಂಥಮಾಲೆಯಲ್ಲಿ ಮುದ್ರಿಸಲ್ಪಟ್ಟಿತ್ತು, ಮೈಸೂರು ಯೂನಿವರ್ಸಿಟಿಯೆಂಬ. ಪ್ರವೇಶಪರೀಕ್ಷೆಗೆ ಪಠನೀಯ ಗ್ರಂಥವನ್ನಾಗಿ ಇದನ್ನು ನಿಯಮಿಸಿದ್ದರಿಂದ ಎರಡನೆಯ ಸಾರಿ ಮುದ್ರಿಸಿದೆ. ಸಾಧ್ಯವಾದ ಮಟ್ಟಿಗೆ ಮೊದಲಿನ ಪ್ರತಿಯಲ್ಲಿದ್ದ ದೊ-ಷಗಳನ್ನು ಪರಿಷ್ಕರಿಸಿ ಮತ ವಿಷಯದಲ್ಲಿ ಬರೆದಿದ್ದ ಉಪೋದ ಸ್ಥಿತವನ್ನು ಮಾತ್ರ ಬಿಟ್ಟುಬಿಟ್ಟಿದೆ. ಪ್ರಮಾದ ಬನಿತ ದೋಷಗಳನ್ನು ಕ್ಷಮಿಸಲು ಗುಣಜ್ಞರು ಪ್ರಾರ್ಥಿತರು, Checked 1969 1ನೇ ಜುಲೈ 1918 ). ಬಸವನಗುಡಿ ಬೆಂಗಳೂರು ಕ, ರಾಮಸ್ವಾಮಯಂಗಾರ್
ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೭
ಗೋಚರ