ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ. ರಾಜಾರಾಮ ಮೋಹನ ರಾ ಯ ರ ಜಿ ವಿ ತ ಚ ರಿ ತೆ: ಸಕಲಲೋಕಂಗಳೊಳ್ಳೆಗಳ್ಳಿರ್ಪ ನಾಶವಿಲ್ಲಿ ನಿರ್ಜಿವದಿಂ ನಿಲ್ಲಲೇಕೆ ? ನಿಖಿಲಕಾಮಪ್ರದನೆನಿಸಿರ್ಪ ನಮ್ಮಿಾಶನೇಕೆ ನೈವೇದ್ಯದಿಂ ಪೊರೆವನೊಡಲಂ ? ಜೀವರಕ್ಷಕನೆಂಬ ಬಿರುದಾಂತ ನಮ್ಮಿಾಶ ಭಕ್ತರ ರಕ್ಷಿತನಾಗಿ ಬದುಕಲೇಕೆ ? ಪಲವು ಕಂಗಳೊಳ್ಳರಿಸುತಿಹ ದೇವ ನೀ ಒತನದ ಗುಡಿಗಳೊಡಗಲೇಕೆ ? ಪ್ರಾಣಿಗಳಿಗೆಲ್ಲಮಾಧಾರನಾದಸಾಮಿ ಭಿಕ್ಷವೆತ್ತಿ ಮನೆಮನೆ ತಿರುಗಲೇಕೆ ? ಎಂದು ನಿಂದಿಸುತ ಜ್ಞಾನಗಳನ್ನು ಕಳೆದುತೊಳೆದನಾ ರಾಮಮೋಹನರಾಯನಿಂದು || (ಮೊದಲನೆಯ ಪರಿಚ್ಛೇದ) [1774 ರಿಂದ 1800ರ ವರಿಗೆ] ಕಿ - ಕ್ರಿ. ಶ. 1774 ನೆಯ ಸಂವತ್ಸರವು ಹಲವು ಕಾರಣಗಳಿಂದ ನಮ್ಮ ಹಿಂದೂದೇಶದ ಚರಿತ್ರೆಯಲ್ಲಿ ಒಂದು ಪ್ರಸಿದ್ಧವಾದ ವರುಷವೆಂದು ಹೇಳಬಹುದು, ಇಂಗ್ಲಿಷರು ಈ ವರು ಷದಲ್ಲಿಯೇ ಬಂಗಾಳದ ರಾಜ್ಯವನ್ನು ಸಂಪಾದಿಸಿ, ಅದರಲ್ಲಿ ಸ್ಥಿರಪ್ರಭುತ್ವವನ್ನು ಸ್ಥಾಪಿಸುವ ಪ್ರಯತ್ನ ಮಾಡಿದರು, ಅವರ ಹೊಸಕಾನೂನಿನಂತೆ ಮೊದಲನೆಯ ರಾಜಪ್ರತಿನಿಧಿಯ, ಆತನ ಮಂತ್ರಾಲೋಚನ ಸಮಾಜವೂ ಇದೇ ವರ್ಷದಲ್ಲಿ ಏರ್ಪಾಡಾಗಿ ಸುಪ್ರೀಂ ಕೋರ್ಟಿಂಬ ಪ್ರಧಾನನ್ಯಾಯಸ್ಥಾನವು ಕಲ್ಕತ್ತೆಯಲ್ಲಿ ಸ್ಥಾಪಿಸಲ್ಪಟ್ಟಿತು, ದೇಶಾಭಿವೃದ್ಧಿಯೇ ಮು ಖ್ಯೋದ್ದೇಶವಾಗಿವುಳ್ಳ ಬುದ್ಧಿಶಾಲಿಗಳಿಗೆ ಮೇಲಿನ ಕಾರಣಗಳೇ ಅಷ್ಟು ಪ್ರಾಮುಖ್ಯವಲ್ಲ ದಿದ್ದರೂ ಅಜ್ಞಾನವೆಂಬ ಕಗ್ಗತ್ತಲೆಯಲ್ಲಿ ಮುಳುಗಿ, ನಾಗರಿಕ ಪ್ರಕಾಶವು ಸ್ವಲ್ಪವಾದರೂ ಇಲ್ಲದೆ, ಮಹಮ್ಮದೀಯರ ಬಾಹುಮೂಲದಲ್ಲಿ ಸಿಲುಕಿ, ಪರಿತಾಪಗೊಳ್ಳುತ್ತಿದ್ದಂತೆ ಇತಿಹಾಸ