ವಿಷಯಕ್ಕೆ ಹೋಗು

ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಜಾ ರಾಮಮೋಹನರಾಯರ ಜೀವಿತ ಚರಿತ್ರ. ೬೫ ಮೇಲೆ ಯಾವರಾಜನಕಾಲದಲ್ಲಿಯಾದರೂ, ನಮ್ಮ ಬ್ರಿಟಿಷಿನವರ ಕಾಲದಲ್ಲಿ ಉಂಟಾ ದಷ್ಟು ವಿದ್ಯಾಭಿವೃದ್ಧಿಯು ನಡೆದಿರಲಿಲ್ಲ, ತಮ್ಮ ರಾಜ್ಯ ಪಾಲನೆಗೆ ವಿದ್ಯಾಭಿವೃದ್ಧಿಯೇ ಮುಖ್ಯವಾದುವಾಗಿದ್ದರೂ ಆಗಿನಕಾಲದ ರಾಜರು ಪ್ರಜೆಗಳನ್ನೆಲ್ಲಾ ವಿದ್ಯಾವಂತರನ್ನಾಗಿ ಮಾಡುವುದು ಅಗತ್ಯವೆಂದು ತಿಳಿಯದೆಹೋದರು, ಈ ಲೋಪವು ಹಿಂದೂರಾಜರ ಕಾಲ ದಲ್ಲಿ ಮಾತ್ರವಲ್ಲ ; ಮಹಮ್ಮದೀಯ ಪ್ರಭುಗಳ ಕಾಲದಲ್ಲಿ ಸುದಾ ಸ್ವಲ್ಪಮಟ್ಟಿಗೆ ಹೀಗೆ ಇದ್ದಿತು, ಅವರಾದರೂ, ಇವರಾದರೂ, ತಮ್ಮ ರಾಜಕೀಯ ವ್ಯವಹಾರವನ್ನು ನಡೆಸು ವುದಕ್ಕೆ ಬೇಕಾದಯೋಗ್ಯತೆಯನ್ನು ಸಂಪಾದಿಸುವುದಕ್ಕಾಗಿ ಪ್ರತ್ಯೇಕವಾದ ಕೆಲವು ಜಾತಿ ಯವರಿಗೆ ಮಾತ್ರ ಸ್ವಲ್ಪಮಟ್ಟಿಗೆ ವಿದ್ಯೆಯು ಅಗತ್ಯವೆಂದು ಭಾವಿಸಿದ್ದರು, ಪ್ರಕೃತ ದಲ್ಲಿ ನಮ್ಮ ದೇಶದ ಪ್ರಜೆಗಳಲ್ಲಿ ಕೆಲವರಾದರೂ ಇಷ್ಟು ಮಾತ್ರ ಓದುವುದಕ್ಕೂ ಬರೆಯು ವುದಕ್ಕೂ ಶಕ್ತಿಯುಳ್ಳವರಾಗಿರುವುದಕ್ಕೆ ನಿಜವಾಗಿಯು ಇಂಗ್ಲಿಷರ ಪಾಲನೆಯ ಮುಖ್ಯ ಕಾರಣವು, ಇತರದೇಶಗಳೊಂದಿಗೆ ಹೋಲಿಸಿ ನೋಡಿದರೆ ನಮ್ಮ ದೇಶದ ವಿದ್ಯಾಭಿವ್ಯ ದಿಯು, ಬಹು ಸ್ವಲ್ಪವಾಗಿಯೇ ಇದೆಯೆಂದು ಒಪ್ಪಿಕೊಳ್ಳದೆ ತೀರದು. ಆದರೂ ಪೂರೈ ಕಾಲಕ್ಕಿಂತಲೂ ಈಗ ವಿದ್ಯೆಯು ಎಷ್ಟು ಅಭಿವೃದ್ಧಿ ಹೊಂದಿರುವುದೆಂತಲೂ ಈಗಿನ ಜನರು ವಿದ್ಯಾವಂತರಾಗಿರುವಹಾಗೆ ಇನ್ನು ಮುಂದೆ ಇಪ್ಪತ್ತು ವರ್ಷಗಳ ತನಕ ನಡೆಯುತ್ತಾ ಬಂದಲ್ಲಿ ಹಿಂದೂ ದೇಶವು ಇತರ ದೇಶಗಳೊಂದಿಗೆ ಸತ್ಯಜ್ಞಾನ ಸಂಪತ್ತು ಗಳಲ್ಲಿ ಸರಿಹೋಲಿ ಸಲ್ಪಡಬಹುದೆಂತಲೂ ನಂಬುವೆವು, ಪಾಶ್ಚಾತ್ಯ ವಿದ್ಯಾಭಿವೃದ್ಧಿ ಯಿಂದುಂಟಾದ ಲಾಭ ವನ್ನು ಕಣ್ಣಾರೆ ನೋಡಿದಮೇಲೆಯೇ ನಾವು ಈ ಅಂಶವನ್ನು ಈಗ ತಿಳಿದುಕೊಳ್ಳಲು ಶಕ್ತ ರಾದೆವು, ಆದರೆ ಪ್ರಭುತ್ವದವರು ನಮಗೆ ಈ ಭಾಗ್ಯವನ್ನು ಅನುಗ್ರಹಿಸಲಿಕ್ಕೆ ಯತ್ನಿಸು ವುದಕ್ಕಿಂತ ಮುಂಚೆಯೇ, ಇದರಿಂದುಂಟಾಗುವ ಲಾಭವನ್ನು ದೂರದರ್ಶಿಯಾದ ರಾಮ ಮೋಹನನು ತಿಳಿದುಕೊಂಡು ಹಿಂದೂ ದೇಶವು ಯಾವಾಗಲಾದರೂ ಅಜ್ಞಾನಕಾರಣದಿಂ ದುಂಟಾದ ಮತಸಾಂಘಿಕಾದಿ ಬಂಧಗಳಿಂದ ಬಿಡುಗಡೆಯನ್ನು ಹೊಂದಬೇಕಾದರೆ ಪಾಶ್ಚಾತ್ಯ ವಿದ್ಯೆಯೇ ಅವುಗಳಿಗೆ ಸಾಧನವಾಗುವುದೆಂದು ನಿಶ್ಚಯವಾಗಿ ನಂಬಿದ್ದನು, ಈ ನಂಬಿಕೆ ಯಿಂದಲೇ ಇತರ ವಿಷಯಗಳಿಗೋಸ್ಕರ ಎಷ್ಟು ಮಟ್ಟಿಗೆ ಪ್ರಯತ್ನ ಮಾಡಿದನೋ ಅಷ್ಟರ ಪ್ರಯತ್ನ ವನ್ನು ಇದಕ್ಕಾಗಿ ಇವನು ಮಾಡಿದನು, ಬ್ರಿಟಿಷ್ ಸತ್ಕಾರದವರಿಂದ ಹಿಂದೂ ದೇಶೀಯರಿಗೆ ಅನುಗ್ರಹಿಸಲ್ಪಟ್ಟ ಪಾಶ್ಚಾತ್ಯ ವಿದ್ಯಾದಾನದ ಚರಿತ್ರೆಯು ತುಂಬ ವಿಚಿತ್ರ ವಾದುದು, ಆದರೂ ಈ ಚರಿತ್ರೆಯಲ್ಲಿನ ಬಹು ಭಾಗವು ರಾಮಮೋಹನನ ಈಚಿನಕಾಲ ದೊಂದಿಗೆ ಸಂಬಂಧವನ್ನುಳ್ಳುದಾಗಿರುವುದು, ಆದುದರಿಂದ ಇಲ್ಲಿ ರಾಮಮೋಹನನಿಗೆ ಸಂಬಂಧಿಸಿದ ವಿಷಯವನ್ನು ಮಾತ್ರದ ವಿಶದಪಡಿಸುವೆವು. ಇಂಡಿಯಾ ಕಂಪೆನಿಯವರು ಇಂಗ್ಲಿಷನ್ನು ಕಲಿತ ಹಿಂದೂ ದೇಶೀಯರ ಸಹಾ ಯವು ತುಂಬ ಅಗತ್ಯವಾಗಿರುವುದೆಂದು ಬಹುಕಾಲದ ಹಿಂದೆಯೇ ತಿಳಿದುಕೊಂಡಿದ್ದರು. ಅವರಿಗೆ ಒಂದು ಕಡೆ, ಮುರುಷದಾಬಾದ್‌ ರಾಜ್ಯದೊಂದಿಗೆ ಸಂಬಂಧವು ಹೆಚ್ಚಾಗಿದ್ದಿತು.