೩೬ ರಾಜಾರಾಮಮೋಹನರಾಯರ ಜೀವಿತ ಚರಿತ್ರ, ಮತ್ತೊಂದು ಕಡೆ ದೇಶೀಯವರ್ತಕರೊಂದಿಗೂ, ಕೈಗೆಲಸದವರೊಂದಿಗೂ ವ್ಯವಹಾರಗ ಳನ್ನು ನಡೆಸಬೇಕಾಗಿ ಬಂದಿತು. ಇವೆರಡು ಕೆಲಸಗಳಿಗೂ ಅವರ ಭಾಷೆಯನ್ನೂ ದೇಶ ಭಾಷೆಯನ್ನೂ ಕಲಿತು ಮಧ್ಯೆ ರಾಯಭಾರ ಮಾಡತಕ್ಕಷ್ಟು ಯೋಗ್ಯತೆ ಪಡೆದ ಮನು ಪೈರು ಬೇಕಾಗಿದ್ದರು. ಆಕಾಲದಲ್ಲಿ ಇಂಥವರನ್ನು ದ್ವಿಭಾಷಿ ಅಥವಾ ದುಬಾಸಿಯೆಂದು ಕರೆಯುತ್ತಿದ್ದರು, ಮೊದಲು ಬ್ರಿಟಿಷ್ ವರ್ತಕರ ವ್ಯಾಪಾರ ಕಾರ್ಯಗಳನ್ನು ನೆರವೇರಿ ಸುವುದಕ್ಕಾಗಿ ನಮ್ಮ ದೇಶದಲ್ಲಿ ಇಂಗ್ಲಿಷ್ ಭಾಷೆಯನ್ನು ಕಲಿಯತೊಡಗಿದವರು ಸಾಧಾರ ಣವಾಗಿ ಕೆಲವು ಜಾತಿಯವರು ಮಾತ್ರವೇ ಇದ್ದರು. ಅವರು ಸುದಾ ತಮ್ಮ ಕೆಲಸಕ್ಕೆ ಸಾಕಾದಮಟ್ಟಿಗೆ ಸಂಬೋಧನೆಯ ವಾಕ್ಯಗಳನ್ನು ಗ್ರಹಿಸಿ ಅಷ್ಟು ಮಟ್ಟಿಗೆ ಸಾಕೆಂದು ತಿಳಿ ದಿದ್ದರು, ಮೊಟ್ಟಮೊದಲು ಇಂಗ್ಲಿಷು, ಬಂಗಾಳಿ ಭಾಷೆಗಳಿಗೆ ನಿಘಂಟುವನ್ನು ಬರೆದ * ರಾಂತಮುಲ್ ಸೇನೆ ' ಎಂಬಾತನು ತನ್ನ ಗ್ರಂಥದ ಉಪೋದ್ಘಾತದಲ್ಲಿ ಕಲ್ಕತ್ತಾಪಟ್ಟಿ ಣಕ್ಕೆ ಮೊದಲು ಇಂಗ್ಲಿಷ್ ಕರ್ಪ್ತಾ (ಕೇರ್ಷ್ಟ) ಬಂದಾಗ ದೇಶೀಯ ವರ್ತ ಕರೆಲ್ಲರೂ ತಮ್ಮ ವ್ಯಾಪಾರಸಾಪಾರಗಳನ್ನು ಕುರಿತು ಅವರ ಸಂಗಡ ಮಾತನಾಡಲಿಕ್ಕೆ ಹೋಗಲು ಹಡಗಿನ ಬಳಿಗೆ ಒಬ್ಬ ಅಗಸರವನನ್ನು ಕರೆದುಕೊಂಡು ಬರಲು ಅವನು ತನ್ನ ಇಂಗ್ಲಿಷ್ ಭಾಷಾಜ್ಞಾನದಿಂದ ಉಭಯದೇಶಸ್ಟರ ಕಡೆಯಿಂದಲೂ ಬಹಳ ಹಣವನ್ನು ಸಂಪಾದಿಸಿದನು. ಆದುದರಿಂದ ಅವನಿಗೆ ನಮ್ಮ ದೇಶದಲ್ಲೆಲ್ಲಾ ಮೊದಲನೆಯ ವಿದ್ವಾಂಸನೆಂಬ ಗೌರವನಾ ಮವನ್ನು ಕೊಡಬಹುದೆಂದು ಬರೆದಿರುವನು. ಸುಮಾರು ನಂದುನೂರು ವರ್ಷಗಳ ತನಕ ಬಂಗಾಳಾದೇಶದಲ್ಲಿ ಇಂಗ್ಲಿಷ್ ಭಾಷಾಭಿವೃದ್ಧಿಯು ಸಾಮಾನ್ಯವಾಗಿಯೇ ಇದ್ದಿತು, ಆದರೆ 1774 ರಲ್ಲಿ ಸುಪ್ರಿಂಕೋರ್ಟು ಸ್ಥಾಪಿಸಲ್ಪಟ್ಟ ಮೇಲೆ ಮಾತ್ರ ಪ್ರಜೆಗಳಲ್ಲಿ ಕೆಲವರಿಗೆ ಈ ಭಾಷೆಯ ಜ್ಞಾನವನ್ನು ಸಂಪಾದಿಸುವುದರಲ್ಲಿ ಆಸಕ್ತಿ ಹುಟ್ಟಿತು. ಆದರೂ ಸರ್ಕಾರದ ವರು ಈ ವಿಷಯವನ್ನು ಕುರಿತು ಅದುವರಿಗೆ ಯಾವ ಶ್ರದ್ದೆಯನ್ನೂ ತೆಗೆದುಕೊಳ್ಳಲಿಲ್ಲ ವಾದುದರಿಂದ ಅಂತವರು ಉದ್ಯೋಗಸ್ಥರಲ್ಲಿನ ಇತರ ಆಂಗ್ಲೀಯರಲ್ಲಿ ಒಬ್ಬೊಬ್ಬರನ್ನು ಉಪಾಧ್ಯಾಯನನ್ನಾಗಿ ನಿಯಮಿಸಿ, ಸ್ವಂತವಾದ ಶಾಲೆಗಳನ್ನೇರ್ಪಡಿಸಿಕೊಂಡು ವಿದ್ಯೆ ಯನ್ನು ಕಲಿಯುತ್ತಿದ್ದರು. - ಮೊಟ್ಟಮೊದಲು 1780 ರಲ್ಲಿ ಸರ್ಕಾರದವರು ಪ್ರಜೆಗಳಿಗೆ ವಿದ್ಯೆಯನ್ನು ಕಲಿಸಬೇ ಕೆಂದು ತಿಳಿದುಕೊಂಡರು, ಆಗ ಮೊದಲನೆಯ ರಾಜಪ್ರತಿನಿಧಿಯಾಗಿದ್ದ ವಾರ್ರ ಹೇಸ್ಟಿಂ ಗೃನು ಮಹಮ್ಮದಿಯರಿಗೋಸ್ಕರ ಕಲ್ಕತ್ತೆಯಲ್ಲಿ ಕಲ್ಕತ್ತಾ ಮದ್ರಸಾ' ಎಂಬುದೊಂದು ಪಾಠಶಾಲೆಯನ್ನೇರ್ಪಡಿಸಿದನು, ನಾಲ್ಕು ವರ್ಷ ಗಳಾದಮೇಲೆ “ನಾರ್ಥ ಡಂರ್ಕ' ಎಂಬ ರೆಸಿಡೆಂಟನು ಕಾಶಿ ಪಟ್ಟಣದಲ್ಲಿ ಒಂದು ಸಂಸ್ಕೃತ ಕಾಲೇಜನ್ನು ಸ್ಥಾಪಿಸಿದನು. ಆ ದರೂ ಇವೆರಡು ಪಾಠಶಾಲೆಗಳನ್ನು ಏರ್ಪಡಿಸುವುದರ ಉದ್ದೇಶವು ಅವುಗಳ ಹೆಸರಿಗೆ ತಕ್ಕಂ ತೆ ಅರಬ್ಬಿ ಸಂಸ್ಕೃತಭಾಷೆಗಳನ್ನು ಕಲಿಸುವುದೇ ಆಗಿತ್ತು. ಲಾರ್ಡ ಮಿಂಟೋ ಎಂಬ ರಾಜಪ್ರತಿನಿಧಿಯು “ಹಿಂದೂ ದೇಶೀಯರ ಸ್ವಭಾಷೆಗಳೆಲ್ಲವೂ ದಿನೇದಿನೇ ಕ್ಷೀಣವಾಗಿ
ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೭೩
ಗೋಚರ