೬೮ ರಾಜಾ ರಾಮಮೋಹನರಾಯರ ಜೀವಿತ ಚರಿತ್ರ. ಪ್ರಯತ್ನಗಳೇ 1816 ರಲ್ಲಿ ಕ್ರಿಯಾರೂಪವಾಗಿ ಮಾರ್ಪಟ್ಟವು. ಆ ವರುಷದಲ್ಲಿಯೇ ಹಿಂದೂಕಾಲೇಜ್ ಸ್ಥಾಪಿಸಲ್ಪಟ್ಟಿತು. - ಈ ಕಾಲೇಜನ್ನು ಸ್ಥಾಪಿಸುವುದಕ್ಕಾಗಿ ಮಾಡಿದ ಕೃಷಿಯೆಲ್ಲವೂ ಸುಪ್ರಿಂಕೋರ್ಟಿನ ಚೀಫ್ ಜಸ್ಟಿ ಸರಾಗಿದ್ದ : ಸರ್' ಹೈಡ್ ಈಸ್ಟ್ ” ಎಂಬವರದೆಂದು ಕೆಲವರು ಹೇಳು ವರು, ನಿಜವಾಗಿ ವಿಚಾರಮಾಡಿದರೆ ಈ ಪ್ರಯತ್ನಗಳೆಲ್ಲವೂ ರಾಮಮೋಹನ ಮತ್ತು ಡೇವಿಡ್ ಹೇರ್ ಎಂಬವರದೇ ಎಂದು ಹೇಳತಕ್ಕದ್ದು, ಚೀಫ್ ಜಸ್ಟಿಸ್ ಹೈಡಯವರ ಹೆಸರು ನಿಮಿತ್ತ ಮಾತ್ರಕ್ಕೆ ಪ್ರಕಟಿಸಲ್ಪಟ್ಟಿತ್ತು. ಇದಕ್ಕೆ ಎರಡು ಕಾರಣಗಳುಂಟು. ಅವು ಗಳಲ್ಲಿ ಮೊದಲನೆಯದು ಇದರಲ್ಲಿ ರಾಮಮೋಹನನ ಸಂಬಂಧ ಉಂಟೆಂದು ತಿಳಿದ ಕೂಡಲೇ ತಮಗೆ ವಿದ್ಯಾಲಾಭವಿಲ್ಲದಿದ್ದರೂ ಹೋಗಲಿ, ನಾವು ಆತನ ವಿಷಯದಲ್ಲಿ ಏಕೀಭವಿಸಲಾರೆ ವೆಂದು ಆ ಪಟ್ಟಣದ ಪೂರ್ವಾಚಾರಪರಾಯಣರಾದ ಪ್ರಮುಖರೆಲ್ಲರೂ ಒಡಂಬಡದೆ ಒಗ್ಗ. ಟ್ಯಾಗಿ ಪ್ರತಿಭಟಿಸುವರೆಂಬುದನ್ನು ರಾಮಮೋಹನನು ಮೊದಲೇ ತಿಳಿದು ತನ್ನ ಹೆಸರನ್ನು ಸಾಮಾಜಿಕರ ಪಟ್ಟಿಯಲ್ಲಿ ಸೇರಿಸದೆ ಗುಟ್ಟಾಗಿದ್ದನು. ಎರಡನೆಯದು, ಈಗಿನಂತೆಯೇ ಆ ಕಾಲದವರು ಸುದಾ ಕಾಲಸ್ಥಿತಿಯನ್ನರಿತು ಅದನ್ನನುಸರಿಸಿ ನಡೆಯತಕ್ಕ ವರೇ ಆದುದರಿಂದ ವಿಶೇಷ ದ್ರವ್ಯ ಸಹಾಯದಿಂದ ನೆರವೇರಿಸಬೇಕಾಗಿದ್ದ ಈ ಕೆಲಸಕ್ಕೆ ಜನವಶೀಕರಣವು ಅತ್ಯಾ ವಶ್ಯಕವಾಗಿರುವುದೆಂದು ರಾಮಮೋಹನನೂ ಡೇವಿಡ್ ಹೇರನೂ ಸೇರಿ ಆಲೋಚಿಸಿ ಸರ್ ಹೈಡ್ ಈಸ್ಸು ದೊರೆಯವರನ್ನಾಶ್ರಯಿಸಿ ಅವರ ಅಭಿಮಾನವನ್ನು ಸಂಪಾದಿಸಿ ತಮ್ಮ ಕಾರಕ್ಕೆ ಜಯ ಸಿಕ್ಕುವುದಕ್ಕಾಗಿ ಆತನ ಹೆಸರನ್ನು ಮುಂದಿಟ್ಟರು. 1882 ನೇ ವರುಷದಲ್ಲಿ ಪೂನಾ, ಬೊಂಬೈ ನಗರಗಳಲ್ಲಿಯ ದೇಶಾಭಿಮಾನಿಗಳು ಕೆಲವರು ಸ್ತ್ರೀವೈದ್ಯಶಾಲೆಗಳನ್ನೇರ್ಪಡಿಸ ಲಿಕ್ಕೆ ಪ್ರಯತ್ನಿಸಿ ಎಷ್ಟು ಸಾಹಸಮಾಡಿದರೂ ಒಬ್ಬರಾಗಲಿ ಒಂದು ದಮ್ಮಡಿಯನ್ನಾ ದರೂ ಕೊಡದೆ ಹೋದರು, ಆದರೆ ಲೇಡಿ ಡಫರ್ರಿಯವರಿಗೆ ಅಗ್ರಾಸನಾಧಿಪತ್ಯವನ್ನು ಕೊಟ್ಟ ಕಡಲೆ ಬಹು ಸ್ವಲ್ಪಕಾಲದೊಳಗಾಗಿ ಲಕ್ಷಾಂತರ ರೂಪಾಯಿಗಳು ಶೇಖರವಾದುವು. ಲೋ ಕಸ್ವಭಾವವು ಹೀಗಿರುವುದರಿಂದ ರಾಮಮೋಹನನ ಹೆಸರು ಬಹಿರಂಗವಾಗಿಪ ಕಟಿಸ ಲ್ಪಡಲಿಲ್ಲ. - ಪ್ರಜಾಪಕ್ಷದಲ್ಲಿ ಹಿಂದೂ ಕಾಲೇಜ್ ಸ್ಥಾಪಿಸಲ್ಪಟ್ಟು ಬೋಧನೆಯ ಕೆಲಸಕ್ಕೆ ಆರಂಭ ವಾಯಿತು, ಇಂಗ್ಲಿಷ್ ಭಾವಾಭಿವೃದ್ಧಿಗಾಗಿ ಪ್ರಜೆಗಳೆಲ್ಲರೂ ತುಂಬಾ ಪ್ರೀತಿಯಿಂದ ಸಹಾಯಮಾಡಿದರು. ಕ್ರಮಕ್ರಮವಾಗಿ ವಿದ್ಯೆಯು ಅಭಿವೃದ್ಧಿಯಾಗುತ್ತಾ ಬಂದಹಾಗೆಲ್ಲಾ ವಿದ್ಯಾರ್ಥಿಗಳ ಅಭಿಪ್ರಾಯಗಳು ಸ್ವಮತವಿರುದ್ಧಗಳಾಗುತ್ತ ಬಂದುವು. ಹೀಗಾಗಬಾರ ದೆಂದು ಆ ಪಾಠಶಾಲೆಯ ಕಾರನಿರಾಹಕರು ಪ್ರಯತ್ನ ಮಾಡಿದರೂ ವ್ಯರ್ಥವಾಯಿತು. ಕೆಲವರು ಬಾಲಕರು ಕ್ರಿಸ್ತಮತವನ್ನವಲಂಬಿಸಿದರು, ಸಮಾಜಿಕರೆಲ್ಲರೂ ಇದನ್ನು ನೋಡಿ ಅಲ್ಲಿಯ ಮುಖ್ಯೋಪಾಧ್ಯಾಯನಾಗಿದ್ದ ಒಬ್ಬ ಯುರೇಷಿಯನಿನ ಮೇಲೆ ದೋಷಾರೋ ಸಣೆ ಮಾಡಿ ಅವನನ್ನು ಕೆಲಸದಿಂದ ತೊಲಗಿಸಿದರು, ಇದರಿಂದ ವಿದ್ಯಾರ್ಥಿಗಳ ಅಭಿಪ್ರಾ
ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೭೫
ಗೋಚರ