೬ ರಾಜಾ ರಾಮಮೋಹನರಾಯರ ಜೀವಿತ ಚರಿತ್ರ. 1852 ನೆಯ ವರುಷದಲ್ಲಿ ಫಾದರ್ ಲಿಂಗೌ ಎಂಬಾತನು ಬಂಗಾಳಿಭಾಷೆಯಲ್ಲಿಯ ಗ್ರಂಥಗ ಳನ್ನೆಲ್ಲಾ ತಿಳಿಸುವ ಪುಸ್ತಕ ಒಂದನ್ನು ಬರೆದನು, ಅದರಲ್ಲಿ ಅವನು 1826 ರಲ್ಲಿ ಸಂವಾ ದಕೌಮುದಿಯು ಪ್ರಾರಂಭಿಸಲ್ಪಟ್ಟಿತೆಂದು ಬರೆದಿರುವನು. ರಾಮಮೋಹನನಿಂದ ಬಂಗಾಳಿ ಭಾಷೆಗೆ ಮತ್ತೊಂದು ಸಹಾಯ ದೊರಕಿತು. ರಾಮಮೋಹನನು ಸಂಗೀತವಿದ್ಯೆ ಯಲ್ಲಿ ಸ್ವಲ್ಪ ಮಟ್ಟಿಗೆ ಪರಿಶ್ರಮವುಳ್ಳವನಾಗಿದ್ದು ದರಿಂದ ಬ್ರಹ್ಮ ಮಂದಿರದ ಪ್ರಾರ್ಥನೆಗಳಿಗೆ ಅನುಕೂಲವಾಗುವ ಹಾಗೆ ಅನೇಕ ಕೀರ್ತನೆಗಳು, ಕೃತಿ ಗಳು, ವರ್ಣಗಳು ಮುಂತಾದುವನ್ನು ರಚಿಸಿದನು, ಈತನು ಒಂದೊಂದುವೇಳೆ ತನ್ನ ಸ್ನೇಹಿತರನ್ನು ಸಂತೋಷಪಡಿಸಲಿಕ್ಕೋಸ್ಕರ ತಾನು ರಚಿಸಿದ ಕೀರ್ತನೆಗಳನ್ನು ಹಾಡುತ್ತಿ ದ್ದನಂತೆ ! ರಾಮಮೋಹನನ ಕಾಲದಲ್ಲಿ ಈ ಕೀರ್ತನೆಗಳೆಲ್ಲವೂ ಪುಸ್ತಕರೂಪವಾಗಿ ಎರ ಡು ಮೂರು ಆವೃತ್ತಿ ಪ್ರಚುರಪಡಿಸಲ್ಪಟ್ಟವು. ಆತನ ಕಾಲದಿಂದೀಚೆಗೂ ಹಲವುವೇಳೆ ಮುದ್ರಿಸಲ್ಪಟ್ಟವು. ಈಗ ಆ ಕೀರ್ತನೆಗಳೆಲ್ಲವೂ ಬಂಗಾಳೀರಾಜ್ಯದಲ್ಲಿ ಆಂಧ್ರದೇಶದಲ್ಲಿ ತ್ಯಾಗರಾಯಕೃತಿಗಳಂತೆ ಉತ್ತಮೋತ್ತಮವಾಗಿ ಪರಿಗಣಿಸಲ್ಪಡುತ್ತಿವೆ. ಅವು ಬ್ರಹ ಮತಾವಲಂಬಿಗಳಲ್ಲಿ ಮಾತ್ರವಲ್ಲ ; ಮಿಕ್ಕೆ ಹಿಂದೂ ಸಂಘಗಳಲ್ಲೆಲ್ಲಾ ಆದರಣೀಯವಾ ಗಿವೆ, ಭಗವಂತನ ಪ್ರಾರ್ಥನೆಗಳು, ಮರಣವಿಚಾರ, ಪ್ರಪಂಚದ ಅಬ್ಬರ, ಮುಂತಾದ ವಿಷಯಗಳನ್ನು ಕುರಿತು ರಚಿಸಿದ ಕೀರ್ತನೆಗಳಲ್ಲಿ ಈತನ ಅಭಿಪ್ರಾಯಗಳು ತುಂಬಾ ಶ್ಲಾ ಫ್ಯಗಳಾಗಿದೆ. ಬಂಗಾಳೀ ಭಾಷಾಭಿವೃದ್ಧಿಯನ್ನು ಕುರಿತು ಒಂದು ಗ್ರಂಥವನ್ನು ಬರೆದು ರಾಮಗತನ್ಯಾಯರತ್ನನೆಂಬ ಪಂಡಿತನು ತನ್ನ ಪುಸ್ತಕದಲ್ಲಿ ರಾಮಮೋಹನರಾಯನು ಸಂ ಗೀತದಲ್ಲಿ ಘನವಿದ್ವಾಂಸನಾಗಿದ್ದುದು ಮಾತ್ರವಲ್ಲದೆ ಪ್ರಸಿದ್ಧಗಳಾಗಿ ಉತ್ತಮಗಳಾದ ಕೃತಿ ಗಳನ್ನೂ ಕೂಡ ರಚಿಸಿದನು, ಆತನ ಬ್ರಹ್ಮ ಪ್ರಾರ್ಥನೆಯೇ ಮೊದಲಾದ ಗೀತಗಳು ಕಲ್ಲು ಗಳನ್ನಾ ದರೂ ಕರಗಿಸತಕ್ಕವುಗಳಾಗಿಯೂ ನಾಸ್ತಿಕರನ್ನು ಆಸ್ತಿಕರನ್ನಾಗಿ ಮಾಡಬಲ್ಲವುಗ ಳಾಗಿಯೂ ಇವೆ. ದೇಹಾವಸಾನದ ದಿನವನ್ನು ನೆನಪಿಗೆ ತಂದುಕೊ, ಎಂಬ ಅರ್ಥವನ್ನು ಕೊಡುವ ಪಲ್ಲವಿಯೊಂದಿಗೆ ರಚಿಸಿದ ಮನನಬೋಧೆಯ ಗೀತೆಯನ್ನು ಓದುವಾಗಲೆಲ್ಲ ನನಗೆ ಮೃತ್ಯುಸ್ವರೂಪವು ಕಣ್ಣುಗಳ ಮುಂದೆ ನಿಂತಂತೆಯೇ ಕಾಣುವುದು, ಒಳ್ಳೇ ರಾಗ ತಾಳ ಗಳಿಂದ ಕೂಡಿದ ಈ ಗೀತೆಗಳು ಒಂಗಾಳದೊಳಗಿನ ಸಂಗೀತ ವಿದ್ವಾಂಸರಿಗೆ ಈಗ ಮಲಧನ ವಾಗಿವೆ, ಎಂದು ಬರೆದಿರುವನು. ರಾಮಮೋಹನನ ಕಾಲದಲ್ಲಿ ಕಲ್ಕತ್ತೆಯಲ್ಲಿ ದೇಶಭಾಷೆಯಲ್ಲಿ ಪ್ರಕಟಿಸಲ್ಪಡತಕ್ಕ ವೃತ್ತಾಂತಪತ್ರಗಳು ನಾಲ್ಕು ಮಾತ್ರವೇ ಇದ್ದುವು, ಅವುಗಳಲ್ಲೆರಡು ಫಾರಸಿಯಲ್ಲಿಯೂ, ಎರಡು ಬಂಗಾಳಿಭಾಷೆಯಲ್ಲಿಯೂ ಹೊರಡುತ್ತಿದ್ದುವು. ಇಂಗ್ಲಿಷ್ ಪತ್ರಿಕೆಗಳೊಂದೆರಡಿ ದ್ದರೂ ಅವಕ್ಕೆ ಆಂಗ್ಲೀಯರೇ ಅಧಿಪತಿಗಳಾಗಿದ್ದರು. ರಾಮಮೋಹನನು ಬೆಂಗಾಲ್ ಹೆರ "” ಎಂಬ ಇಂಗ್ಲಿಷ್ ಮಾರ್ತಾ ಪತ್ರಿಕೆಗೆ ಅಧಿಪತಿಯಾಗಿದ್ದನೆಂದು (ರ್ಎಸೈಕ್ಲೋಪೀ ಡಿಯಾ' ಎಂಬ ಪ್ರಸಿದ್ಧ ನಿಘಂಟುವಿನ ಎರಡನೆಯ ಸಂಪುಟದಲ್ಲಿ ಒರೆಯಲ್ಪಟ್ಟಿದೆ. 10
ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೮೦
ಗೋಚರ