ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೮ ರಾಜಾರಾಮಮೋಹನರಾಯರ ಜೀವಿತ ಚರಿತ್ರ. ಕ್ರೋಸ್ಕರ ಹೊಡೆದಾಡುತ್ತಿದ್ದರು. ಆ ಸಂದರ್ಭದಲ್ಲಿ ಒಂದು ದಿನ ರಾಮಮೋಹನನು ಬ ಕಿಂಗ್ ಹ್ಯಾಂ ಎಂಬ ಸ್ನೇಹಿತನ ಬಳಿಗೆ ಹೋಗುತ್ತಿರುವಾಗ ಸ್ವಾತಂತ್ರ ಪಕ್ಷದವರಿಗೆ ಅಪ ಜಯವಾಯಿತೆಂಬ ವರ್ತಮಾನವು ತಿಳಿಯಿತು, ಅದಕ್ಕೆ ಆತನು ಬಹುಚಿಂತಿಸಿ ಈ ಸುದ್ದಿ ಯು ನನಗೆ ಬಹಳ ವ್ಯಸನಕರವಾಗಿದೆ' ಎಂದು ಒಂದು ಪತ್ರವನ್ನು ಬಕಿಂಗ್ಹಾಂರವರಿಗೆ ಬರೆದು ಕಳುಹಿ ವಿಚಾರಮಾಡುತ್ತಾ ಕುಳಿತನು. ಈ ಅಕ್ಷರಗಳನ್ನು ಬರೆಯುತ್ತಿದ್ದಾಗ ಆತನ ಮನಸ್ಸಿನಲ್ಲಿ ಎಂತಹ ಯೋಚನೆಗಳು ಸಮುದ್ರದ ಅಲೆಗಳಂತೆ ಹೊರಳಿ ಹೊರಳಿ ಪ್ರ ವಹಿಸುತ್ತಿದ್ದುವೋ ನಾವು ಹೇಳಲಾರೆವು. 1930 ರಲ್ಲಿ ಫ್ರಾನ್ಸ್‌ ರಾಜ್ಯದ ಪ್ರಭುತ್ವವು ಮಾ ರ್ಪಟ್ಟಾಗ ತುಂಬಾ ಸಂತೋಷಿಸಿದನು, ಆ ಸುದ್ದಿಯನ್ನು ಕೇಳುವಾಗ ಇವನು ಇಂಗ್ಲೆಂ ಡಿಗೆ ಹೊರಡುವ ಹೊಗೆಯ ಹಡಗಿನಲ್ಲಿದ್ದನು. ಹಡಗು ನಟಾಲ್ ಎಂಬ ರೇವಿನ ಬಳಿಗೆ ಸೇರಿದ ಕೂಡಲೆ ಅಲ್ಲಿದ್ದ ಪ್ರಾನ್ಸಿನ ಒಂದು ಹೊಗೆಯ ಹಡಗಿನ ಮೇಲೆ ಸ್ವಾತಂತ್ರವನ್ನು ತಿಳಿಸುವ ಗುರುತಿನ ಧ್ವಜಪಟವನ್ನು ನೋಡಿ ಅದರಲ್ಲಿದ್ದವರಿಗೆ ತನ್ನ ಸಂತೋಷವನ್ನು ತಿಳಿಸಿ ಶುಭವಾದನವನ್ನು ಹೇಳುವುದಕ್ಕಾಗಿ ಆ ಹಡಗಿನೊಳಕ್ಕೆ ಹೊರಡುವಾಗ ಅತನ ಕಾಲು ಒಂದು ಹಲಗೆಗೆ ತಗಲಿ ಬಲವಾದ ಗಾಯ ಆಯಿತು. ಆಕಾಲದಲ್ಲಿ ಇಂಗ್ಲೆಂಡಿ ನಲ್ಲಿ ರೋರ್ಮ ಕ್ಯಾಥೋಲಿಕ್ ಸಂಘದವರ ಮೇಲೆ ರಾಜಶಾಸನಗಳು ಬಹು ಕೂರಗಳಾ ಗಿದ್ದುವು, ಅವರನ್ನು ಸರ್ಕಾರದ ಉದ್ಯೋಗಗಳಲ್ಲಿ ಸೇರಿಸಿಕೊಳ್ಳುತ್ತಿರಲಿಲ್ಲ, ಪ್ರಜಾಪ ಕ್ಷದವರು ಪ್ರತಿನಿಧಿಗಳಾಗಿ ಸೇರಕೂಡದು, ಇಂತಹ ಇನ್ನೂ ಕೆಲವು ಇಕ್ಕಟ್ಟುಗಳಿ ದ್ದುವು. ರಾಮಮೋಹನನು ಇವುಗಳಿಗಾಗಿ ಬಹಳ ಚಿಂತಿಸುತ್ತಿದ್ದನ್ನು, ಕೆಲವು ದಿನ ಗಳಮೇಲೆ ಈ ಕಾನೂನು ರದ್ದು ಮಾಡಲ್ಪಟ್ಟ ಕೂಡಲೆ ಬಹು ಸಂತೋಷಗೊಂಡನು, ಹೀ ಗೆಯೇ ಇಂಗ್ಲೆಂಡಿನ ರಿಫಾರಂ ಬಿಲ್ಲನ್ನು ಕುರಿತು ತನ್ನ ಮನಃಪೂರ್ವಕವಾದ ಪ್ರೀತಿ ಯನ್ನು ತಿಳಿಸಿದನು, ಇವುಗಳನ್ನೆಲ್ಲ ಯೋಚಿಸಿ ನೋಡಿದರೆ ರಾಮಮೋಹನನಿಗೆ ರಾಜ ತಂತ್ರಜ್ಞಾನವು ಅಸಾಧಾರಣವಾಗಿತ್ತೆಂದು ಹೇಳಬೇಕು, 1817 ರಲ್ಲಿ ಅರಲ್ ಆಫ್ ಮಿನಿಸ್ಟರ್‌' ಎಂಬ ಬಿರುದನ್ನು ಹೊಂದಿದ ನಿಬ್ಮಾರ್ ಎಂಬ ಸೇನಾಪತಿಯೊಬ್ಬನು ಹಿಂದೂ ದೇಶವನ್ನು ನೋಡಬೇಕೆಂದು ಬಂದಾಗ ರಾಮಮೋ ಹನನ ಪರಿಚಯ ಪಡೆದನು. ಇದರಿಂದ ಈತನು ತನ್ನ ಪಯಣದ ಚರಿತ್ರೆಯಲ್ಲಿ ಹೀಗೆ ಬರೆದಿರುವನು, ಗಾಮಮೋಹನನು ನಮ್ಮ ಭಾಷೆಯಲ್ಲಿ ಬಹು ಸ್ಪಷ್ಟವಾಗಿ ಮಾತನಾ ಡಿದನು, ಮತ್ತು ತನಗೆ ಅರಬ್ಬಿ ಭಾಷೆಯಲ್ಲಿಯೂ ಫಾರಸಿಯಲ್ಲಿಯೂ ಕೂಡ ಒಳ್ಳೆ ಜ್ಞಾನ ಉಂಟೆಂದು ಹೇಳಿದನು. ಆತನಿಗೆ ಯೂರೋಪ್‌ ಖಂಡದ ಎಲ್ಲಾ ದೇಶಗಳ ವಿಷಯವಾದ ಮುಖ್ಯವಾಗಿ ಇಂಗ್ಲೆಂಡಿನ ವಿಷಯವಾದ ರಾಜತಂತ್ರಗಳು ಚೆನ್ನಾಗಿ ತಿಳಿದಿವೆ. ಸ್ವತಂತ್ರ ರಾಜ್ಯಗಳಲ್ಲಿ ಸೈನ್ಯವನ್ನಿರಿಸುವ ವಿಷಯಕ್ಕೆ ವಿರೋಧವಾಗಿ ಅಲ್ಲಿ ಪ್ರತಿಪಕ್ಷದವರು ” ಹೇಳಿ ದಂತೆಯೇ ಅನೇಕ ಕಾರಣಗಳನ್ನು ತೋರಿಸಿ ನನ್ನೊಂದಿಗೆ ವಾದಿಸಿದನು. ಇವುಗಳಿಂದ ಈ ತನು ಅಸಾಧಾರಣ ಪುರುಷನೆಂದು ನಾನು ಭಾವಿಸಿದೆನು.”