ರಾಜಾ ರಾಮಮೋಹನರಾಯರ ಜೀವಿತ ಚರಿತ್ರ. ೭೩ 1829-183೦ ನೆಯ ವರ್ಷಗಳಲ್ಲಿ ಹಿಂದುಗಳ ದಾಯಭಾಗಕ್ಕೆ ಸಂಬಂಧಪಟ್ಟ ಧರ್ಮಶಾಸ್ತ್ರವನ್ನು ಕುರಿತ ವಿವಾದ ಒಂದುಂಟಾಯಿತು, ಅದು ಮಕ್ಕಳ ಮತ್ತು ಮೊ ಮಕ್ಕಳ ಸಂಮತವಿಲ್ಲದೆಯೇ ತಂದೆಯು ತನ್ನ ಆಸ್ತಿಯನ್ನು ಮತ್ತಾವ ವಿಧದಲ್ಲಿಯಾದರೂ ವಿನಿಯೋಗಿಸಬಹುದೇ ? ಕೂದದೆ ? ಎಂಬ ವಿಷಯವೂ 1816 ನೇ ವರ್ಷದ ತನಕ ಎಲ್ಲಾ ನ್ಯಾಯಸ್ಥಾನದವರೂ ತಂದೆಯ ಅಧಿಕಾರವನ್ನೇ ಒಪ್ಪಿಕೊಳ್ಳುತ್ತಿದ್ದರು. ಆದರೂ 18291830 ನೆಯ ವರ್ಷಗಳಲ್ಲಿ ಸೂಪ್ರಿಂ ಕೋರ್ಟಿಗೆ ಪ್ರಧಾನ ನ್ಯಾಯಾಧಿಕಾರಿಯಾಗಿದ್ದ 'ಸರ್ ಚಾರ್‌ಲೆಸ್ ಎಡ್ವಡ್೯ ಗ್ರೇ” ಎಂಬಾತನು ಪೂರ್ವದ ಸಿದ್ಧಾಂತಗಳನ್ನೆಲ್ಲಾ ಖಂಡಿಸಿ ತಂ ದೆಯ ಸ್ವಾತಂತ್ರಕ್ಕೆ ವಿರೋಧವಾಗಿ ಒಂದು ತೀರ್ಮಾನವನ್ನು ಬರೆದನು, ಅದರ ಮೇಲೆ ರಾಮಮೋಹನನನ್ನು ನಾಯಕನನ್ನಾಗಿಮಾಡಿಕೊಂಡು ಹಿಂದುಗಳೆಲ್ಲರೂ ಆ ತೀರ್ಮಾನವು ತುಂಬ ಅನ್ಯಾಯವಾದುದೆಂತಲೂ, ಹಿಂದೂ ಶಾಸ್ತ್ರಗಳಿಗೆ ವಿರೋಧವಾದುದೆಂತಲೂ, ವಾದಿ ಸತೊಡಗಿದರು, ರಾಮಮೋಹನರು ಇದರಿಂದ ಉಂಟಾಗುವ ಅನರ್ಧಗಳನ್ನು ವಿಶದಪಡಿಸಿ ಹಲವು ಗ್ರಂಥಗಳ ದೃಷ್ಟಾಂತಗಳಿಂದ ಒಂದು ಗ್ರಂಧವನ್ನು ಬರೆದು ಪ್ರಚುರಿಸಿದನು. ಆ ಕಲ್ಲೋಲವನ್ನು ನೋಡಿ ಸರ್ಕಾರದವರು ಮರಳಿ ಪೂರ್ವ ದ ವಿಧಿಯನ್ನೇ ಆಚರಣೆಗೆ ತಂದರು. ರಾಮಮೋಹನನು ಅದಕ್ಕೆ ಮುಂಚೆ ಮಾಡಿದ ದೇಶ ಸಕಾರ ಕಾರ್ಯಗಳಿಂದ ಲೂ, ಇನ್ನು ಮುಂದೆ ಇಂಗ್ಲೆಂಡಿನಲ್ಲಿ ಮಾಡುವ ಕಾರ್ಯಗಳಿಂದಲೂ ಆತನಿಗೆ ರಾಜಕೀಯ ವ್ಯವಹಾರಗಳಲ್ಲಿಯ, ದೇಶೋನ್ನತಿಗೆ ಸಂಬಂಧಿಸಿದ ವಿಷಯಗಳಲ್ಲಿಯೂ, ತುಂಬಾ ಅನು ಭವವಿತ್ತೆಂದು ಸ್ಪಷ್ಟವಾಗುವುದು. ಆದರೆ ಆ ಮಹಾತ್ಮನ ಬುದ್ಧಿಯನ್ನೂ ಲೌಕಿಕ ಜ್ಞಾನವನ್ನೂ, ರಾಜತಂತ್ರ ನೈಪುಣ್ಯವನ್ನೂ ಪೂರ್ತಿಯಾಗಿ ತೋರಿಸಲಿಕ್ಕೆ ಆ ಕಾಲದಲ್ಲಿ ಸಾಕಾದಷ್ಟು ಅವಕಾಶಗಳು ಇರಲಿಲ್ಲ, ಎಂತಹ ರಾಜತಂತ್ರ ಪ್ರವೀಣನಿಗಾ ದರೂ ತನ್ನ ಯೋಗ್ಯತೆಯನ್ನು ಪ್ರಕಾಶಪಡಿಸಲಿಕ್ಕೆ ಸ್ವಲ್ಪ ಮಟ್ಟಿಗೆ ಕಾಲದ ಸಹಾಯವು ಅಗತ್ಯವಾಗಿ ರುವುದು, ರಾಮಮೋಹನನಿಗೆ ಆಗ ಇಂತಹ ಅವಕಾಶವು ದೊರೆತಿದ್ದರೆ ಇನ್ನೂ ಎಂ ತಹ ಕಾರ್ಯಗಳನ್ನು ಮಾಡಿತೋರುತಿದ್ದನೋ ಊಹಿಸಲಾರೆವು, ರಾಮಮೋಹನನು ಒಳ್ಳೆ ರಾಜತಂತ್ರ ಪ್ರವೀಣನೆಂಬುದಕ್ಕೆ ಆ ಕಾಲದಲ್ಲಿ ಜರಗುತ್ತಿದ್ದ ವಿದೇಶರಾಜ್ಯ ತಂತ್ರಗ ಳಲ್ಲಿ ಆತನು ತೋರಿಸಿದ ಆಸಕ್ತಿಯೇ ದೃಷ್ಟಾಂತವಾಗಿದೆ. ರಾಮಮೋಹನನು 1821 ರಲ್ಲಿ ರ್ಸ್ಪೇ ದೇಶದಲ್ಲಿ ಪ್ರಜಾಪ್ರತಿನಿಧಿಸಭೆ ಸ್ಥಾಪಿಸಲ್ಪಟ್ಟ ಸುದ್ದಿಯನ್ನು ತಿಳಿದ ಕೂಡಲೆ ತುಂಬ ಸಂತೋಷಿಸಿ ಕಲ್ಕತ್ತೆಯ ರ್ಟೌಹಾಲಿನಲ್ಲಿ ತನ್ನ ಸ್ನೇಹಿತರಿಗೆಲ್ಲ ಒಂದು ಔತನವನ್ನು ಮಾಡಿಸಿದನು, ಪೋರ್ಚುಗಲ್ಲಿನಲ್ಲಿ ಪಾರ್ಲಿಮೆಂಟ್ ಏರ್ಪಟ್ಟಿತೆಂದು ಕೇಳಿದಾಗ ಸುದಾ ಹಾಗೆಯೇ ಮಾಡಿದನು. ತುರ್ಕಿಯವರಿಗೂ, ಗ್ರೀಕರಿಗೂ, ಯುದ್ಧವು ನಡೆಯುತ್ತಿರು ವಾಗ ಆ ಯುದ್ಧ ವರ್ತಮಾನಗಳನ್ನು ಆಗಾಗ್ಗೆ ತಿಳಿದುಕೊಳ್ಳುತ್ತಾ ಗ್ರೀಕರು ಸ್ವಾತಂ ತ್ರವನ್ನು ಪಡೆಯಲಿ'; ಎಂದು ಕೋರುತ್ತಿದ್ದನು. 1821 ರಲ್ಲಿ ನೇಪಲ್ಸಿನವರು ಸ್ವಾತಂತ್ರ,
ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೮೪
ಗೋಚರ