ರಾಜಾ ರಾಮಮೋಹನರಾಯರ ಜೀವಿತ ಚರಿತ್ರ. ಆr ಯಿಟ್ಟು ನೋಡುತ್ತಿದ್ದಷ್ಟೂ ಆತನಿಗೆ ಬೇಸರ ತೋರದೆ ಇತ್ತು, ಆಗ ಅವನ ಮನಸ್ಸಿಗೆ ಇಂಗ್ಲೆಂಡಿನವರ ಐಶ್ವರ್ಯವೂ, ಹಿಂದೂದೇಶೀಯರ ಬಡತನವೂ ಚೆನ್ನಾಗಿ ಗೊತ್ತಾದುವು.
- ಈತನು ಮಾರ್ಗ ಮಧ್ಯದಲ್ಲಿ ಮಾಂಚೆಸ್ಟರ್ ಪಟ್ಟಣದಲ್ಲಿಳಿದು ವಸ್ತ್ರನಿರ್ಮಾಣವೇ ಮೊದಲಾದ ಕೆಲಸಗಳನ್ನು ಮಾಡುವ ದೊಡ್ಡ ದೊಡ್ಡ ಯಂತ್ರಶಾಲೆಗಳನ್ನು ನೋಡಿದನು. ಅಲ್ಲಿನ ಅಧ್ಯಕ್ಷರು ಮರ್ಯಾದೆಯಿಂದ ರಾಮಮೋಹನನನ್ನು ಕರೆದುಕೊಂಡುಹೋಗಿ, ಪ್ರತಿ ಯೊಂದು ಯಂತ್ರವನ್ನೂ ತೋರಿಸಿ ಅವುಗಳ ಉಪಯೋಗವನ್ನು ವಿವರಿಸಿದರು, ಯಂತ್ರ ಶಾಲೆಗಳಲ್ಲಿಯೂ, ಕರ್ಮಶಾಲೆಯಲ್ಲಿಯೂ, ಕೆಲಸಮಾಡುವ ಸಾವಿರಾರು ಮಂದಿ ಕೆಲಸ ಗಾರರು ಹಿಂದೂದೇಶದಿಂದ ಒಬ್ಬ ರಾಜನು ಬಂದಿರುವನೆಂದು ಹೇಳಿಕೊಳ್ಳುತ್ತಾ ಗುಂಪು ಕೂಡಿ ನೋಡಲಿಕ್ಕೆ ಬಂದರು. ಅವರಲ್ಲಿ ಕೆಲವರಿಗೆ ಕೈ ಕೊಟ್ಟು (ಪಾಶ್ಚಾತ್ಯರಲ್ಲಿ ಇದೊಂದು ಮರ್ಯಾದೆ) ರಾಮಮೋಹನನು ತುಂಬಾ ಗೌರವಿಸಿದನು, ಈ ಪ್ರಕಾರ ಅಲ್ಲಿ ಒಂದು ದಿನವಿದ್ದು, ಮರುದಿನ ಲಂರ್ಡ ಪಟ್ಟಣವನ್ನು ಪ್ರವೇಶಿಸಿದನು,
ರಾಮಮೋಹನನು ಲಂರ್ಡ ಪಟ್ಟಣವನ್ನು ಪ್ರವೇಶಿಸುವ ವೇಳೆಗೆ ರಾತ್ರಿ ಬಹಳ ಹೊತ್ತಾದುದರಿಂದ ಆ ಪಟ್ಟಣದ ಒಂದು ಮೂಲೆಯಲ್ಲಿದ್ದ ಹೋಟೆಲ್‌ನಲ್ಲಿ ಇಳಿದನು. ಆದರೆ ಆ ಹೋಟಲ್ ನಲ್ಲಿನ ಕೋಣೆಗಳೆಲ್ಲವೂ ಬಹು ದುರ್ಗಂಧಮಯವಾಗಿದ್ದುದರಿಂದ ಅಲ್ಲಿ ಇರಲೊಪ್ಪದೆ, ಊಟಮಾಡುವುದಕ್ಕೆ ಮಾತ್ರ ಸ್ವಲ್ಪ ಹೊತ್ತು ತಂಗಿದ್ದು ಒಡನೆಯೇ ಒಂದು ಬಾಡಿಗೆ ಒಂಡಿಯಮೇಲೆ ಹತ್ತಿ ಎಡೆಲ್ಫಿ ಎಂಬ ಹೋಟೆಲಿಗೆ ಹೋಗಿ ಅಲ್ಲಿ ಬಿಡಾರ ಮಾ ಡಿದನು. ಹೀಗೆ ಮೊಟ್ಟಮೊದಲು ರಾಮಮೋಹನನು ಯಾವವಿಧವಾದ ಅಟ್ಟಹಾಸವೂ, ಆರ್ಭಟವೂ ಇಲ್ಲದೆ ದೇಶಸಂಚಾರಮಾಡುವ ಸಾಮಾನ್ಯ ಪುರುಷನಂತೆ ಲಂರ್ಡ ಪಟ್ಟಣವನ್ನು ಪ್ರವೇಶಿಸಿದನು, ಅಲ್ಲಿನ ಪ್ರಜೆಗಳು, ಸತ್ಕಾರದ ದೊಡ್ಡ ಅಧಿಕಾರಿ ಬಂದಾಗ ಮಾಡತಕ್ಕ ಮರ್ಯಾದೆಗಳನ್ನೆಲ್ಲಾ ಆತನಿಗೆ ಮಾಡಿ ಗೌರವಿಸಿದರು. ಈತನು ಲಂರ್ಡಿ ಸೇರಿದನೆಂಬ ಸುದ್ದಿ ಕೇಳಿದಕೂಡಲೆ ಪ್ರಜೆಗಳಲ್ಲಿ ಪ್ರಮುಖರಾದವರೂ ಸರ್ಕಾರದಲ್ಲಿ ದೊಡ್ಡ ದೊಡ್ಡ ಅಧಿಕಾರಗಳಲ್ಲಿದ್ದು ಈತನ ಹೆಸರನ್ನಿ ದುವರೆಗೆ ಕೇಳಿರುವವರೂ ಬಂದು ಈತನನ್ನು ನೋಡುತ್ತಿ ದ್ದರು, ಈತನು ತಂಗಿದ್ದ ರೀಜಂಟೆಂಬ ಬೀದಿಯೆಲ್ಲವೂ ಬೆಳಗ್ಗೆ 11 ಗಂಟೆಯಿಂದ ಸಾಯಂ ಕಾಲ 4 ಗಂಟೆಯತನಕ ಬಂಡಿಗಳಿಂದ ತುಂಬಿಹೋಗಿತ್ತು, ಇಂಗ್ಲಿಷರು ರಾಮಮೋಹನ ನೊಂದಿಗೆ ಸೇರಿ ಮತನಾಡುವುದೆಂಬುದೊಂದು ಗೌರವವಾಗಿ ಭಾವಿಸುತ್ತಿದ್ದರು. ಅಲ್ಲಿಗೆ ಬಂದವರೆಲ್ಲರೂ ಆತನ ಧೈರ್ಯವನ್ನೂ ಲೋಕಾನುಭವವನ್ನೂ, ಬುದ್ಧಿ ವಿಶೇಷವನ್ನೂ, ಪ್ರತಿ ಭಾಪ್ರಭಾವವನ್ನೂ, ಮೃದುಮಧುರ ಪದಗುಂಭನವನ್ನೂ ಕೊಂಡಾಡಿ ಹೋಗುತ್ತಿದ್ದರು. ದೊಡ್ಡ ತತ್ವಶಾಸ್ತ್ರಜ್ಞನೊಬ್ಬನು ಇವರೊಡನೆ ಬಹಳ ಹೊತ್ತಿನತನಕ ಮಾತನಾಡಿ (ನಿಮ್ಮಿ೦ದ ಬರೆಯಲ್ಪಟ್ಟ ಕೆಲವು ಗ್ರಂಥಗಳನ್ನು ಓದಿ ನೋಡಿದೆನು, ಅವುಗಳನ್ನು ಒಬ್ಬ ಹಿಂದುವು ಬರೆದನೆಂದು ಅವುಗಳ ಮೇಲೆ ಬರೆಯಲ್ಪಡದೆ ಹೋಗಿದ್ದರೆ ಅವು ಇಂಗ್ಲಿಷ್ ಭಾಷೆಯಲ್ಲಿ ಅಷ 12