ಅ6 ರಾಜಾ ರಾಮಮೋಹನರಾಯರ ಜೀವಿತ ಚರಿತ್ರೆ, 89 ವರುಷಗಳು ಮಾರಿದ ಆ ಮುದುಕನಿಗೆ ಈ ವಾರ್ತೆಯು ಎಷ್ಟರ ಅನಂದವನ್ನುಂಟುಮಾ ಡಿತೋ ಅದನ್ನು ವಿವರಿಸುವುದು ಸುಲಭವಲ್ಲ, ರಾಮಮೋಹನನ ಸಂತೋಷವು ಸುಧಾ ಹೀಗೆಯೇ ಇದ್ದಿತು. ರಾಷ್ಟೊಯವರು ನೋಡಬಂದಾಗ ರಾಮಮೋಹನನು ಯೂರೋ ತಿನಲ್ಲಿ ಮಾತ್ರವಲ್ಲದೆ, ಪ್ರಪಂಚದಲ್ಲೆಲ್ಲಾ ಸ್ತೋತ್ರಪಾತ್ರರಾದ ನಿಮ್ಮನ್ನು ನೋಡಿದ್ದರಿಂದ ನನಗೆ ತುಂಬಾ ಸಂತೋಷವಾಯಿತೆಂದು ನುಡಿಯುತ್ತಾ ಸವಿನಯವಾಗಿ ವಂದನೆಯನ್ನು ಮಾಡಿದನು, ಈ ಮಾತಿಗೆ ರಾಸ್ಕೋವು ತುಂಬಾ ಸಂತೋಷಮಗ್ನ ಮಾನಸರಾಗಿ ಅವರ ದೇಶಾಚಾರದಂತೆ ವಂದನಾದಿಸತ್ಕಾರಗಳನ್ನಾಚರಿಸಿ, ಈ ಸುದಿನವನ್ನು ನೋಡಲಿಕ್ಕೆ ಇಂದಿನ ತನಕ ನನ್ನನ್ನು ಬದುಕಿಸಿರುವ ಈಶ್ವರನ ಪರಿಪೂರ್ಣಾನುಗ್ರಹಕ್ಕೆ ನಾನು ತುಂಬ ಕೃತಜ್ಞನಾ ಗಿರುವೆನೆಂದು ಹೇಳಿದನು. ಹೀಗೆ ಇವರಿಬ್ಬರೂ ಸೇರಿದ ತರುವಾಯ ರಾಮಮೋಹನನು ಯಾವ ರಾಜಕಾರಗಳ ನಿಮಿತ್ತವಾಗಿ ಇಂಗ್ಲೆಂಡಿಗೆ ಬಂದನೋ ಅವುಗಳನ್ನು ಕುರಿತು ಬಹಳ ಹೊತ್ತು ಮಾತನಾಡುತ್ತಿದ್ದರು, ಆ ಸಂಭಾಷಣೆ ಯಲ್ಲಿ ರಾಸ್ಕಿಯವರು ಈತನ ಅಸಾಧಾರ ಣವಾದ ರಾಜ್ಯ ತಂತ್ರ ನಿಪುಣತೆಗೆ ತುಂಬಾ ಸಂತೋಷಪಟ್ಟರು, ರಾಸ್ಕಿಯವರೂ ಅವರ ಹೆಂಡತಿಯ ರಾಮಮೋಹನನಲ್ಲಿ ತೋರಿದ ಗೌರವವು ಮಹತ್ತರವಾಗಿದ್ದಿತು, ಆತನ ಅತ್ಯ ದುತಬುದ್ದಿ ವಿಶೇಷಕ್ಕೆ ಆಶ್ಚರಗೊಂಡು, ಇತರ ಸ್ನೇಹಿತರೂ ಕೂಡ ಆತನಿಗೆ ಹೀಗೆಯೇ ಮ ರ್ಯಾದೆಮಾಡಿದರು. ಒಂದುದಿನ ರಾಮಮೋಹನನು ಆ ಪಟ್ಟಣದಲ್ಲಿನ ಯೂನಿಟೇರಿರ್ಯ ಮಂದಿರಕ್ಕೆ ಹೋಗಿ, ಅಲ್ಲಿ ತುಂಬ ಗೌರವವನ್ನು ಪಡೆದನು, ಮತ್ತು ಅಲ್ಲಿ ಸೃಜ೯೦ ಎಂಬ ಪಂಡಿತನೊಂದಿಗೆ ಸ್ವಲ್ಪ ಹೊತ್ತು ಸಂಭಾಷಿಸಿದನು. ಲಿವರ್ಪೂಲಿನಲ್ಲಿರುವ ಸ್ತ್ರೀ ಸಮಾಜದ ವರು ಜಾತಿಯ ಅಭಿಮಾನಿಯಾದ ಈತನನ್ನು ಗೌರವಿಸುವುದಕ್ಕೆ ಒಂದು ಸಭೆ ಕೂಡಿಸಿ, ಔತನಮಾಡಲೆಣಿಸಿ ಆ ವಿಷಯವನ್ನು ತಿಳಿಸಿದರು, ಅದರೆ ಈತನು ತಾನು ಲಂಡನ್ನಿಗೆ ಹೊರಡುವುದು ಬಹು ಅವಸರವಾಗಿರುವುದರಿಂದ ಕ್ಷಮಿಸಬೇಕೆಂದು ವಿನಯಪೂರ್ವಕ ಪ್ರಾರ್ಥಿಸಿದನು, ಹೀಗೆಯೇ ಲಿವರ್ಪೂಲಿನಲ್ಲಿ ಕೆಲವು ದಿನಗಳಿದ್ದು ರಾನ್ಶಿಯವರಿಂದ ಲಂರ್ಡನಲ್ಲಿರುವ ಲಾಡ*೯ ಬೂಹಂ ಎಂಬ ಪ್ರಮುಖನ ಹೆಸರಿಗೆ ತಾನು ಪಾರ್ಲಿಮೆಂಟು ಸಭೆ ನೆರೆದಿರುವಾಗ ಗ್ಯಾಲರಿ ಕೆಳಗೆ ಕುಳಿತುಕೊಳ್ಳಲಿಕ್ಕೆ ಏರ್ಪಾಡು ಮಾಡಲಿಕ್ಕೆ ಒಂದು ಪತ್ರವನ್ನು ಬರೆಯಿಸಿ ತೆಗೆದುಕೊಂಡು, ಎಲ್ಲಾ ಮಿತ್ರರಿಂದಲೂ ಅಪ್ಪಣೆ ತೆಗೆದುಕೊಂಡು ಪ್ರಯಾಣಸನ್ನದ್ಧನಾಗಿ ಹೊರಟನು. ರಾಮಮೋಹನನು ಲಿವರ್ಪೂಲಿನಿಂದ ಲಂರ್ಡ ಪಟ್ಟಣಕ್ಕೆ ಹೊರಡುವ ಹೊಗೇ ಬಂಡಿಯಲ್ಲಿದ್ದು ಅದರ ಉಭಯಪಾರ್ಶ್ವಗಳಲ್ಲಿ ಕಾಣಬರುವ ಇಂಗ್ಲೆಂಡಿನವರ ಎಶ್ವರಕ್ಕೂ ಅವರ ನಾಗರಿಕತೆಗೂ, ಜಾಣೆಗೂ, ಆಶ್ಚರ್ಯಭರಿತಮಾನಸನಾಗುತ್ತಿದ್ದನು, ಅನೇಕ ಅಂತಸ್ತುಗಳಿಂದ ಕಟ್ಟಲ್ಪಟ್ಟ ದಿವ್ಯ ಮಂದಿರಗಳನ್ನೂ ಅವುಗಳ ಇರ್ಕಡೆಗಳಲ್ಲಿಯ ಸುಂದರ ತರುಗಳಿಂದ ಅಲಂಕರಿಸಲ್ಪಟ್ಟ ಬೀದಿಗಳನ್ನೂ ದೊಡ್ಡ ದೊಡ್ಡ ಕಾಲೈಗಳನ್ನೂ ಕಣ್ಣುಗಳಿಗೆ ಹಬ್ಬವನ್ನುಂಟುಮಾಡುವಂತೆ ಚಿತ್ರವಿಚಿತ್ರವಾಗಿ ಕಟ್ಟಲ್ಪಟ್ಟಿರುವ ಸೇತುವೆಗಳನ್ನೂ ದೃಷ್ಟಿ.
ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೯೫
ಗೋಚರ