ವಿಷಯಕ್ಕೆ ಹೋಗು

ಪುಟ:ರಾಣಾ ರಾಜಾಸಿಂಹ.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರ್ರಾಣ ಕಜಸಿಂಹ ೧೧dAnon «mnon ೧೧ ೧೧೧ ೧೧• A 1 ೧೧ [ಪ್ರಕರಣ ರುವಿರಿ, ಇಂಧ ಕಾಲದಲ್ಲಿ ಕೃತಜ್ಞನಾದ ಸೇವಕನು ಸುಮ್ಮನೆ ಕೂಡು ವದು ನೆಟ್ಟಗಲ್ಲ, ಸ್ವಲ್ಪಾದರೂ ಉಪಯೋಗಕ್ಕೆ ನಾನೂ ಬೀಳಬಹು ದೆಂದು ಇಲ್ಲಿಗೆ ಬಂದಿರುತ್ತೇನೆ, ಮೊಗಲರ ಸೇನೆಯು ಎರಡು ಸಾವಿರ ಉಂಟು. ತಮ್ಮಲ್ಲಿ ಒಂದುನೂರ ಜನರು ಮಾತ್ರ ಇರುವರು ಇದನ್ನು ನೋಡಿ ನಾನು ಸುಮ್ಮನೆ ಹ್ಯಾಗೆ ಕೂಡಲಿ? ತಾವು ಜೀವದಾನ ಕೊಟ್ಟ ದ್ದನ್ನು ಹ್ಯಾಗೆ ಮರೆಯಲಿ? ” ಎಂದನು. ಅದಕ್ಕೆ ರಾಣಾನು-16 ನಾವಿಲ್ಲಿ ಮರೆಯಾಗಿರುತ್ತೇವೆಂದು ನಿನಗೆ ಯಾರು ಹೇಳಿದರು? ?? ಜಯಸಿಂಹನು ತನ್ನ ಮನಸ್ಸಿನಲ್ಲಿ ಬಂದ ತರ್ಕಗಳನ್ನು ರಾಣಾನಿಗೆ ಹೇಳಿದನು. ಅದನ್ನು ಕೇಳಿ ರಾಣಾನಿಗೆ ಬಹಳ ಅನಂದವಾಯಿತು. “ಶಾಬಾಸ್, ನಿನ್ನಂಧ ಜಾಣರ ಆವಶ್ಯಕತೆಯು ನನಗೆ ವಿಶೇಷವಾಗಿತ್ತು. ನಾನು ಹೇಳಿದಂತೆ ಮಾಡುವಿಯಾ? ' ಜಯಸಿಂಹ ಅಪ್ಪಣೆಯಾಗುವದೇ ತಡ ಕೆಲಸಕ್ಕೆ ಹತ್ತಲು ಸಿದ್ಧನಿರುವೆನು. ' ರಾಜಸಿಂಹ_ ನಮ್ಮಲ್ಲಿ ನೂರುಜನ ಸವಾರರು ಮಾತ್ರ ಇರುವರು, ಮೊಗಲರ ಸೇನೆಯು ೨೦ ಸಾವಿರವದೆ, ರಣರಂ ಗದಲ್ಲಿ ಪ್ರಾಣ ಹೋಗುವವರೆಗೂ ಯುದ್ಧ ಮಾಡುವದು ನಮ್ಮ ಕರ್ತ ವ್ಯವು, ಯಶಸ್ಸು ದೊರಿದೀತೆಂಬ ಆಶೆಯಿಲ್ಲ ಆದ್ದರಿಂದ ಮೊದಲು ರಾಜಕನ್ನಿಕೆಯನ್ನು ಬಿಡಿಸಿಕೊಂಡು ಆಮೇಲೆ ಯುದ್ಧ ಮಾಡುವದು ಯೋಗ್ಯವಾದದ್ದು, ನಾವು ಯುದ್ಧ ಮಾಡುವ ಪ್ರದೇಶದಲ್ಲಿಯೆ ಒಂದು ವೇಳೆ ರಾಜಕನ್ನೆ ಯಿದ್ದರೆ ಆಕೆಗೆ ಹಾನಿಯಾಗುವ ಸಂಭವವು ಹೆಚ್ಚು. ಮೊದಲು ಆಕೆಯ ಸಂರಕ್ಷಣೆ ಮಾಡಬೇಕು, ಈ ಕೆಲಸವು ನೀಗು ವದೇ? ಜಯಸಿಂಹ_ ಮಹಾರಾಜ, ನಾನು ಅಲ್ಪಬುದ್ದಿಯ ಪಾಮ ರನು, ಅದಕ್ಕಾಗಿ ಮಾಡುವದನ್ನೆಲ್ಲ ತಾವು ಆಜ್ಞಾಪಿಸಿದರೆ ಅದರಂತೆ ಪ್ರಾಣದ ಆಶೆ ತೊರೆದಾದರೂ ಮಾಡುತ್ತೇನೆ, ೨