ವಿಷಯಕ್ಕೆ ಹೋಗು

ಪುಟ:ರಾಣಾ ರಾಜಾಸಿಂಹ.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೪ ರಾಣಾ ರಾಜಸಿಂಹ [ಪ್ರಕರಣ • • • • • » »v ~~ •••• • • ••••••wwwxwwws (ಸಂಚಲ, ಹೀಗೆ ಅಧೀರಳಾಗಬೇಡ ಯಾವದೊಂದು ಕೆಲಸ ವನ್ನು ಪೂರ್ಣವಿಚಾರಿಸಿ ಮಾಡುವುದು ಸರಿಯಾದದ್ದು ಮಾರ್ಗದ ಲ್ಲಿಯೆ ನಿನ್ನನ್ನು ಬಿಡಿಸುವ ಯೋಚನೆಯನ್ನು ಯಾಕೆ ಮಾಡಿರಬಾರದು? ಧೈರ್ಯವನ್ನು ಬಿಡಬೇಡ ನಾನು ನಿನ್ನ ಹಿಂದಿನಿಂದ ಬರುವೆನು ” ಎಂದು ಗೆಳತಿಯರಿಬ್ಬರು ಪರಸ್ಪರವಾಗಿ ಆಲಿಂಗಿಸಿದರು - ಚಂಚಲಕುಮಾರಿಯು ಶೃಂಗರಿಸಿಕೊಳ್ಳುವುದಾದಮೇಲೆ ಈಶ್ವರ ದರ್ಶನಕ್ಕೆ ದೇವಾಲಯವನ್ನು ಹೊಕ್ಕಳು. ಆಕೆ ದಿನಾಲು ಶಂಕರನನ್ನು ಪೂಜಿಸುತ್ತಿದ್ದಳು, ದಿನದಂತೆ ದರ್ಶನಕ್ಕೆ ಹೋದಳು ಏಕಾಗ್ರಚಿತ್ತದಿಂದ ಶಂಕರನನ್ನು ಸ್ತುತಿಸಿದಳು ಈ ಸಂಕಟವನ್ನು ದೂರೀಕರಿಸೆಂದು ಮನೋ ಭಾವದಿಂದ ಪ್ರಾರ್ಥಿಸಿದಳು. ಪೂಜೆಯಾದಮೇಲೆ ತಾಯಿತಂದೆಗಳ ಒಳಿಗೆ ಬಂದು ಆವರ ಚರಣಗಳಿಗೆರಗಿ ಅವರ ಅಪ್ಪಣೆಯನ್ನು ತಕ್ಕೊಂಡಳು ಆಕೆಯ ಕಣ್ಣಿಂದ ಅಶ್ರುಗಳು ಸುರಿಯುತ್ತಿದ್ದವು ವಿಕ್ರಮಸಿಂಹಂನು- “ ಮಗಳೆ ನಿನಗ ಯಾವಮಾರ್ಗವನ್ನು ಸ್ವೀಕರಿಸೆಂದು ಹೇಳುತ್ತೆನೆಯೊ ಅದರಿಂದ ನನಗೆ ಅಜ್ಜಿ ಯೆನಿಸುತ್ತದೆ ಆದರೆ ಮಾಡುವದೇನು ? ನಮ್ಮ ಶಕ್ತಿಯನ್ನು ನೋಡಿಕೊಂಡು ನಡೆಯ ಬೇಕಾಗುವುದು. ಮೊಗಲರೊಡನೆ ಕಾದುವಷ್ಟು ಶಕ್ತಿಯು ನಮ್ಮಲ್ಲಿಲ್ಲ ಎಲ್ಲವೂ ಪ್ರತಿಕೂಲವಾಗಿರುವುದು, ಈಹೊತ್ತಿನಲ್ಲಿ ಪ್ರತಾಪನಿದ್ದರೆ ಒಂದುವೇಳೆ ಎಷ್ಟೋ ಅನುಕೂಲವಾಗುವಂತಿತ್ತು ಆದರೆ ಆತನು ಎಲ್ಲಿಯ ಇಲ್ಲದಂತಾಗಿರುವನು, ಮುಪ್ಪಿನವನಾದ ನಾನೊಬ್ಬನೇನು ಮಾಡುವುದು ? ಹೋಗು ಹೆದರಬೇಡ, ಈಶ್ವರನು ನಿನ್ನ ಸಂಕಟ ವನ್ನು ದೂರಮಾಡುವನು.” ಈರೀತಿ ಚಂಚಲಕುಮಾರಿಯು ಎಲ್ಲರ ಅಪ್ಪಣೆಯನ್ನು ಹೊಂದಿ ಮೇಣೆಯಲ್ಲಿ ಕುಳಿತಳು, ಒಂದುಸಾವಿರ ಸವಾ ರರಿಗೆ ಮೇಣೆಯ ಮುಂದೆ ನಡೆಯುವ ಅಪ್ಪಣೆಯಾಯಿತು. ಉಳಿದ ಒಂದುಸಾವಿರ ಜನರು ಹಿಂದೆ ಬರುತ್ತಿದ್ದರು. ಅಪ್ಪಣೆಯಾದ ಕೂಡಲೆ ಎಲ್ಲ ಸೇನೆಯು ನಡೆಯಹತ್ತಿತು. ಪ್ರಾತಃಕಾಲದ ಶೀತಲವಾದ ವಾಯು