dny ಕೋಣನ ರಜಸಿಂಹ ಪ್ರಕರಣ /VVVy J JV V \ \ \ \ VVS VV / \ VYVV VVV VV\ \Vy ಹತ್ತೊಂಭತ್ತನೆಯ ಪ್ರಕರಣ. ಪಲಾಯನ ಹೇಳಿದ ವುದಕ್ಕೆ ಆಗಲೊಲ್ಲದು. ದಾರಿ ದೊರೆದ ವಿಜಯ ದಿಲೇರಖಾನನು ಹಿಂದಿರುಗಿನೋಡಿದನು. ಕಪ್ಪನೆಯ ವಸ್ತ್ರದಿಂದ ಮುಖವನ್ನು ಆಚ್ಛಾದಿಸಿಕೊಂಡ ಸಾವಿರಾರು ಜನ ಕುದುರೆ ಸವಾರರು ತಮ್ಮ ಹಿಂದೆ ಬಂದು ಹಲ್ಲಾ ಮಾಡುತ್ತಾರೆ ಎರಡೂ ಮಗ್ಗಲಿಗೆ ಕಾದು ವದು ಸುರುವಾಯಿತು, ಕನಸುಮನಸಿನಲ್ಲಿಲ್ಲದ ಈ ಅಕಲ್ಪಿತ ಸಹಾಯ ವನ್ನು ಕಂಡು ರಜಪೂತರಿಗೆ ಅತ್ಯಾನಂದವಾಯಿತು. ಉತ್ಸಾಹವು ದ್ವಿಗು ಣಿತವಾಯಿತು, ಮೊಗಲರು ಧೈರ್ಯಗುಂದಿದರು. ಹೊಸಸವಾರರ ಶಕ್ತಿಗೆ ಎದುರು ಕೊಟ್ಟು ನಿಲ್ಲುವುದಕ್ಕೆ ಆಗಲೊಲ್ಲದು. ದಾರಿ ದೊರೆದ ಪಲಾಯನ ಹೇಳಿದರು. ದಿಲೇರಖಾನನಾದರೂ ಅವರನ್ನು ತಡೆಯಲೊ ೪ನು, ಇದನ್ನು ಕಂಡು ಆಚ್ಛಾದಿತಸವಾರರು “ ಜಯರಾಣಾಜೀಕಿ ಜಯ ” ಎಂದು ಜಯಘೋಷಮಾಡುತ್ತ ಬೆನ್ನಟ್ಟಿದರು. ದಿಲೇರಖಾನನು ತನ್ನ ಭಿನ್ನ ವಿಭಿನ್ನವಾದ ಸೇನೆಯಲ್ಲಿ ಉತ್ಸಹಹುಟ್ಟಿ ಸಬೇಕೆಂದು ಅನೇಕ ಪ್ರಯತ್ನಗಳನ್ನು ಮಾಡಿದನು. ಆದರೆ ಅದೆಲ್ಲ ವ್ಯರ್ಥ: ಒಂದಾವರ್ತಿ ತಪ್ಪಿದ ಅಣಿಯು ಪುನಃ ಸರಿಯಾಗಲಿಲ್ಲ ಈವ ರೆಗೆ ರಾಜಸಿಂಹನು ಆಶ್ಚರ್ಯಮಗ್ನನಾಗಿ ತಟಸ್ತನಾಗಿ ನಿಂತುಬಿಟ್ಟಿದ್ದನು. ಈ ಸಹಾಯವು ಯಾರಿಂದಾಯಿತು ? ಎಲ್ಲಿಂದ ಬಂತೆಂಬ ಅನುಮಾನ ಸಹ ಆಗಲೊಲ್ಲದು. ಇಷ್ಟರಲ್ಲಿ ಒಬ್ಬ ಆಚ್ಛಾದಿತರಾಹುತನು ರಾಣಾನ ಹತ್ತಿರ ಬಂದು «ಮಹಾರಾಣಾನಿಗೆ ವಿಜಯವಾಗಲಿ ” ಎಂದು ಹರಸಿ ನಿಂತುಕೊಂಡನು. ರಾಣಾನು ಸವಾರನಿಗೆ ಆತಂಕವೇನೂ ಇಲ್ಲದಿದ್ದರೆ ಮುಖದಮೇಲಿನ ಆವರಣವನ್ನು ತೆಗೆಯಲಿಕ್ಕೆ ಹೇಳಿದನು ಸವಾರನು ತನ್ನ ಆವರಣವನ್ನು ತೆಗೆದುಹಾಕಿದನು ಕೂಡಲೆ ರಾಣಾನು-ಯಾರು ಪ್ರತಾಪಸಿಂಹ ಸಂಕಟಸಮಯಕ್ಕೆ ಧಾವಿಸಿಬಂದು ಸಹಾಯಮಾಡುವ ವೀರಪ್ರತಾಪನೆ ?”
ಪುಟ:ರಾಣಾ ರಾಜಾಸಿಂಹ.djvu/೧೨೮
ಗೋಚರ