ಪುಟ:ರಾಣಾ ರಾಜಾಸಿಂಹ.djvu/೧೨೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೮] ಚಯಾಪಚಯ ೧೧೩ \AA \ 1/w ಹೊತ್ತಿನಲ್ಲಿ ಯುದ್ಧಕ್ಕೆ ಸಿದ್ಧರಾದರು, ಆಕಾಶದೊಳಗಿನ ಮೋಡಗಳಂತೆ ಎರಡೂ ಸೇನೆಗಳು ಅಚಲವೂ ಸ್ತಬ್ಧವೂ ಆಗಿದ್ದುವು. ಎರಡೂ ಕಡೆ ಯವರು ವರಿಷ್ಠರ ಅಪ್ಪಣೆಗಳನ್ನು ನಿರೀಕ್ಷಿಸುತ್ತಿದ್ದರು. ರಾಣಾನು ಮೊಗಲರಮೇಲೆ ಬೀಳಲಿಕ್ಕೆ ಹೇಳಿದನು. < ಹರಹರಮಹಾದೇವ ?” ಎಂಬ ವೀರಧ್ವನಿಯನ್ನು ಗರ್ಜಿಸಿ ಒರೇ ಆ ನೂರು ರಜಪೂತರು ಮೊಗಲರ ಮೇಲೆ ಬಿದ್ದರು, ಮೊಗಲರಿಗೆ ತೋಫುಹಚ್ಚುವಷ್ಟು ಅವಕಾಶಕೊಡಲಿಲ್ಲ. ಇತ್ತ ದಿಲೇರಖಾನನೂ ತನ್ನ ಸೇನೆಗೆ ಅಪ್ಪಣೆಯನ್ನು ಕೊಟ್ಟನು (“ಅಲ್ಲಾ ಹು ಅಕಬರ ” ಎಂಬ ಧ್ವನಿಯು ಪರ್ವತದಲ್ಲೆಲ್ಲ ಪ್ರತಿಧ್ವನಿಗೊಂಡಿತು. ಕೂಡಲೆ ಯುದ್ಧಕ್ಕೆ ಸುರುವಾಯಿತು. ರಜಪೂತರು ಜೀವದಾಶೆಯನ್ನು ಬಿಟ್ಟಿದ್ದರು, ಗೆಲ್ಲುವೆವು ಇಲ್ಲವೆ ಸಾಯುವೆವೆಂಬ ದೃಢಸಂಕಲ್ಪದಿಂದ ಕಾದುವರು; ಒಬ್ಬ ರಜಪೂತನು ಎರಡೆರಡು ಮರುಮರು ಮೊಗಲ ರನ್ನು ಕೇಳಲೊಲ್ಲನು, ಮೊಗಲರ ತಲೆಗಳು ಹಾರಹತ್ತಿದವು, ರಜಪೂ ತರ ಸಂಖ್ಯೆಯಾದರೋ ಕಡಿಮೆಯಾಗಹತ್ತಿತು. ಮೊಗಲರ ಹಾನಿಯು ಹೆಚ್ಚಾಯಿತು. ಪ್ರತಿಯೊಬ್ಬರಜಪೂತನು ಪ್ರಾಣಕ್ಕೆ ಹೆದರಲೊಲ್ಲನು; ಮೊಗಲರಿಗೆ ಯಮನಂತೆ ತೋರಹತ್ತಿದನು. ಮೊಗಲರು ಹೆದರಿದರು. ಆದರೇನು ? ಅವರು ಸಹಸ್ರ ಜನರು, ರಜಪೂತರು ಒಂದುನೂರು ಜನರು. ಬಲವಾದ ಮೊಗಲಸೇನೆಯ ಮುಂದೆ ಈ ಅತ್ಯಲ್ಪ ರಜಪೂತ ಸಂಖ್ಯೆ ಯು ಎಷ್ಟೊತ್ತಿನದು ? ಅವರ ಸಂಖ್ಯೆಯನ್ನು ನೋಡಿ ತಮಗೆ ಅಪಯ ಶವು ನಿಶ್ಚಯವಾಗಿ ಬರುವದೆಂದು ರಾಜಸಿಂಹನಿಗೆ ಮನವರಿಕೆಯಾ ಯಿತು, ರಜಪೂತರನ್ನು ಹುರಿದುಂಬಿಸುವುದಕ್ಕೆ ಮಾಡಿದ ಪ್ರಯತ್ನವೆಲ್ಲ ವ್ಯರ್ಥವಾಯಿತು, ತೀರ ಸ್ವಲ್ಪ ಜನರು ಆ ಬಲವಾದ ಸೇನೆಯನ್ನು ಹ್ಯಾಗೆ ನಾಶಮಾಡಬೇಕು ? ಇಷ್ಟರಲ್ಲಿ ಮೊಗಲರ ಹಿಂಭಾಗದಲ್ಲಿ ಸಹಸ್ರ ಸಹಸ್ರವಾಗಿ ತುಪಾಕಿಗಳು ಹಾರುವ ಸಪ್ಪಳವು ಕೇಳಿಬಂತು, ನೂರಾರು ಮೊಗಲರು ನೆಲಕ್ಕುರುಳಿದರು, ದಿಲೇರಖಾನನು ಚಕಿತನಾಗಿ ಮರಳಿ ನೋಡಹತ್ತಿದನು, ಆತನಿಗೆ ಕಾಣಿಸಿದುದೇನು ?