ವಿಷಯಕ್ಕೆ ಹೋಗು

ಪುಟ:ರಾಣಾ ರಾಜಾಸಿಂಹ.djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ev LOVVಲ ೧n 11ndr \ nr NAAA # 11 1 1 1 # hnt \ n 11 ಇದನ್ನು ಕಂಡು ರಾಣಾನು ಪತ್ರವನ್ನು ತೆಗೆದು ಅವಳಿಗೆ ತೋ ರಿಸಿ-.ಇದನ್ನು ನೀವೆ ಕಳಿಸಿದ್ದಿರಲ್ಲವೆ ?” ಎಂದನು. ಅದಕ್ಕೆ ಒಂಚಲ ಕುವಾರಿಯು 1: ಹೌದು ” ಎಂದು ಉತ್ತರಕೊಟ್ಟಳು ರಾಣಾ-• ಇ ದರೊಳಗಿನ ಎಲ್ಲ ಸಂಗತಿಯು ನಿಜವಿರುವದೆ?' ಚಂಚಲೆ-« ಸುಳ್ಳಾಗಲಿಕ್ಕೆ ಏನಾಯಿತು ? ಅರ್ದಂತೆಯೇ ಕೃತಿ ಯಾದಮೇಲೆ ಅದರೊಳಗಿನ ವಿಷಯವು ಹ್ಯಾಗೆ ಸುಳ್ಳಾಗುವುದು? ಮಹಾರಾಜರೇ, ಕ್ಷತ್ರಿಯ ರಾಜರು ಕನ್ನೆಯನ್ನು ಅಪಹರಿಸುವುದು ಲಗ್ನ ಕ್ಯಾಗಿಯ ಅಲ್ಲವೇನು ? ಬೇರೆ ಯಾವಕಾರಣದಿಂದಾದರೂ ಸ್ತ್ರೀಯನ್ನು ಅಪಹರಿಸುವುದು ಮಹಾಪಾತಕವು.” ರಾಣಾ-ನಾನು ನಿಮ್ಮನ್ನು ಹರಣಮಾಡಿಲ್ಲ ನಿಮ್ಮ ಕುಲದ ರಕ್ಷಣೆಗಾಗಿ ಮೊಗಲರ ಕೈಯಿಂದ ಬಿಡಿಸಿದೆನು ಇನ್ನು ಮೇಲೆ ನಿಮ್ಮನ್ನು ನಿಮ್ಮ ತಂದೆಯ ಕಡೆಗೆ ಕಳಿಸು ವುದು ಯೋಗ್ಯವಾದ ರಾಜಧರ್ಮವು. " ಈವರೆಗೆ ಚಂಚಲಕುಮಾರಿಯು ಸ್ತ್ರೀಯರ ಸ್ವಾಭಾವಿಕಲಜ್ಜೆ ಗನುಸರಿಸಿ ಮುಖವನ್ನು ತಗ್ಗಿಸಿಕೊಂಡು ಉತ್ತರವನ್ನು ಕೊಡುತ್ತಿದ್ದಳು. ಇನ್ನು ಅವಳಿಂದ ತಡೆಯಲಿಕ್ಕಾಗಲಿಲ್ಲ. ತನ್ನ ಮುಖವನ್ನು ಚಟ್ಟನೆ ಮೇಲಕ್ಕೆತ್ತಿ ರಾಣಾನಕಡೆಗೆ ನೋಡುತ್ತ-ಮಹಾರಾಜರೇ ನಿಮ್ಮ ಧರ್ಮವನ್ನು ನೀವುಪಾಲಿಸಿರಿ ನನ್ನ ಧರ್ಮವು ನನಗೆಗೂತ್ತಿದೆ. ನಾನು ಯಾವದಿವಸ ತಮ್ಮ ಚರಣಕಮಲದಲ್ಲಿ ನನ್ನ ಆತ್ಮವನ್ನು ಸಮರ್ಪಿಸಿ ದೆನೊ ಅಂದಿನಿಂದಲೂ ನಾನು ತಮ್ಮವಳಾಗಿರುತ್ತೇನ, ಮನಸಿದ್ದರೆ ನನ್ನನ್ನು ಅಂಗೀಕರಿಸಿರಿ, ಇಲ್ಲದೆ ಹೋದರೆ ಬಿಟ್ಟು ಬಿಡಿರಿ, ನಾನಾದರೂ ನನ್ನ ಧರ್ಮದಂತೆ ನಿಮ್ಮ ವಳಾಗಿರುತ್ತೇನೆ, ಇನ್ನು ಮೇಲೆ ಬೇರೆಯವರನ್ನು ಆಶ್ರಯಿಸುವುದು ಎಂದೂ ಶಕ್ಯವಲ್ಲ. ನೀವು ನನ್ನ ಸ್ವಾಮಿ; ತಮ್ಮ ಅಪ್ಪಣೆಯಂತ ನಡೆಯುವುದು ನನ್ನ ಕರ್ತವ್ಯವು, ತಾವು ರೂಪನಗರಕ್ಕೆ ಕಳಿಸಿದರೂ ಹೋಗುತ್ತೇನೆ, ಆದರೆ ಅಲ್ಲಿಗೆ ಹೋದಮೇಲೆ ನನ್ನ ಸ್ಥಿತಿ ಏನಾದೀತೆಂಬದರ ಬಗ್ಗೆ ವಿಚಾರಿಸಿರುವಿರಾ ? ?” ಎಂದಳು.