V\ v /V Jv ೧೩೦ ರಾಣಾ ರಾಜಸಿಂಹ [ಪ್ರಕರಣ • • • • • • • • • • •v • •v \v » “ನಾಗಿ ಬಂದು ಬಿಡುತ್ತಿದ್ದನು, ಗೋವಳಕೊಂಡ, ವಿಜಾಪುರ ಮಹಾ ರಾಷ್ಟ್ರಗಳೊಡನೆ ದಕ್ಷಿಣದಲ್ಲಿ ಕಾದಿ, ಅನುಭವಪಡೆದ ಸೇನೆಯನ್ನು ತಕ್ಕೊಂಡು ಬಾದಶಹನ ಹಿರೇಮಗನಾದ ಶಹಾಅಲಮನು, ದಕ್ಷಿಣದಿಂದ ಉದೇಪುರದಕಡಗೆ ಬರುವದಕ್ಕೆ ಹೊರಟಿದ್ದನು. ಬಾದಶಹನ ಎರಡನೇ ಮಗನಾದ ಅಜಿಮಶಹನು ಬಂಗಾಲದ ಸುಭೆ ಹಾಗು ಪೂರ್ವ ಹಿಂದುಸ್ತಾ ನದೊಳಗಿನ ತನ್ನ ಸೇನೆಯನ್ನು ತಕ್ಕೊಂಡು ಮೇವಾಡದ ಪರ್ವತಾವ ಳಿಯ ಬಾಗಲಿಗೆ ಬಂದು ನಿಂತಿದ್ದನು ಮೂರನೇಮಗನಾದ ಆಕ ಬರಶಹನು ಪಶ್ಚಿಮದಲ್ಲಿ ಮುಲ್ತಾನದಿಂದ ಪಂಜಾಬ, ಕಾಶ್ಮೀರ, ಕಾಬೂಲಗಳೊಳಗಿನ ಸೇನೆಯನ್ನು ತಕ್ಕೊಂಡು ದಿಲ್ಲಿಗೆ ಬಂದು ಮುಟ್ಟಿ ದನು. ಸ್ವತಃ ಬಾದಶಹನು ದಿಲ್ಲಿಯಲ್ಲಿರುವ ಸೇನೆಯನ್ನು ತಕ್ಕೊಂಡು ಉದೇಪುರದ ಹೆಸರುಸಹ ಜಗತ್ತಿನಲ್ಲಿ ಇಲ್ಲೆನಿಸಿಬಿಡಬೇಕೆಂದು ಹೊರಟಿ ಧನು, ಈ ಪ್ರಕಾರ ಉದೇವುರವು ಬಾದಶಹನ ಸೇನೆಯಿಂದ ನಾಲ್ಕು ಮಗ್ಗಲು ಸುತ್ತಿಕೊಂಡಿತ್ತು, ಅಸಂಖ್ಯ ಸರ್ಪಸೇನೆಯಿಂದ ಗರುಡನಿಗೆ ಉಂಟಾಗುವಷ್ಟೆ ಭೀತಿಯು ರಾಜಸಿಂಹನಿಗೆ ಉಂಟಾಗಿತ್ತು. ಕೌರವ ಪಾಂಡವರ ಯುದ್ದ ದನಂತರ ಭರತಭೂಮಿಯಲ್ಲಿ ಈ ವರೆಗೆ ಇಷ್ಟು ಸೇನೆಯು ಕಲೆತಿತ್ತೊ ಇಲ್ಲೊ ಎಂಬದರ ಸಂಶಯವದೆ. ಸೇನೆಯನ್ನು ಯುದ್ದ ಕಾಲದಲ್ಲಿ ನಿಯಮಾನುಸಾರವಾಗಿ ಅಪ್ಪಣೆಯಮೇಲೆ ಅಪ್ಪಣೆ ಯನ್ನು ಕೊಟ್ಟು ನಡಿಸುವದಕ್ಕೆ ಇಂಗ್ಲಿಷದಲ್ಲಿ ೯ ಮಿಲಿಟ್ರಿಟೆಕ್ನಿಕ್ಸ್” ಎಂದೆನ್ನು ವರು, ನಮ್ಮ ಪುರಾಣಗಳಲ್ಲಿ ಅಥವಾ ಹಳೆಯ ಇತಿಹಾಸಗ ಳಲ್ಲಿ ಪ್ರಸಿದ್ದ ವೀರರೆಂದು ಕೀರ್ತಿಯನ್ನು ಹೊಂದಿದವರು, ಬಾಣದಲ್ಲಿಯ ಕತ್ತಿಯಲ್ಲಿಯೂ ಪ್ರವೀಣತೆಯನ್ನು ಹೊಂದಿದ್ದರು, ಹಿಂದಿನಕಾಲದ ಇತಿಹಾಸ ಲೇಖಕರಿಗೆ ಯುದ್ಧ ವಿದ್ಯೆಯಾದ ಟಿಕ್ಕಿಕ್ಷವು ಗೊತ್ತಿದ್ದಿಲ್ಲ. ಅಧವಾ ಪೂರ್ವಕಾಲದಲ್ಲಿ ಈ ವಿದ್ಯೆಯು ಇದ್ದಿಲ್ಲ ವೆಂತಲೆ ಹೇಳುವರು. ರಾಮಚಂದ್ರ, ಅರ್ಜುನರಿಗೆ ಯುದ್ಧ ವಿದ್ಯೆಯು ಎಷ್ಟರಮಟ್ಟಿಗೆ ಬರುತ್ತಿ ತೆಂಬದು ನಮಗೆ ಸ್ವಲ್ಪವೂ ಗೊತ್ತಿಲ್ಲ. ಆಶೋಕ, ಚಂದ್ರಗುಪ್ತ,
ಪುಟ:ರಾಣಾ ರಾಜಾಸಿಂಹ.djvu/೧೪೪
ಗೋಚರ