ವಿಷಯಕ್ಕೆ ಹೋಗು

ಪುಟ:ರಾಣಾ ರಾಜಾಸಿಂಹ.djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೨ ರಾಣಾ ರಾಜಸಿಂಹ ೧ ೧ ೧ ೧ ೧೧ \\ n 1 1 1 1 / \ nor AAAAAAAA [ಪ್ರಕರಣ ೧ , ಒ ವನ್ನು ತಕ್ಕೊಂಡು ಪರ್ವತದಮೇಲೆ ಇರಲಿಕ್ಕೆ ಹೇಳಿದನು ಎರಡನೇ ಮಗ ನಾದ ಭೀಮಸಿಂಹನಿಗೆ ಮತ್ತೊಂದು ಸೇನೆಯ ತುಂಡನ್ನು ಕೊಟ್ಟು ಪ! ಮದ ಕಡೆಗೆ ಕಳಿಸಿದನು, ಅತ್ತಕಡೆಯ ಮಾರ್ಗವು ತೆರವಾಗಿದ್ದು, ಸಹಾಯಕ್ಕೆ ಬರುವ ಉಳಿದ ರಜಪೂತರಿಗೆ ಅನೂಕೂಲವಾಗ ಬೆಕೆಂಬದೆ ಅವನ ಉದ್ದೇಶವು ಮೂರನೇಭಾಗವನ್ನು ತನ್ನ ಸ್ವಾಧೀನ ದಲ್ಲಿರಿಸಿಕೊಂಡನು ಮತ್ತು ಅದನ್ನು ತಕ್ಕೊಂಡು ಪೂರ್ವದ ಕಡೆಗಿರುವ ಆಕುಂಚಿತವಾದ “ ನಯನ ' ವೆಂಬ ಖಿಂಡಿಯಲ್ಲಿ ತನ್ನ ಛಾವಣಿಯನ್ನು ಹಾಕಿದನು. ಅಜಿಮಶಹನು ಬರುವದಿಕ್ಕಿನಲ್ಲಿ ಮೊದಲು ಆತನನ್ನು ಗುಡ್ಡದ ಓರೆಯಲ್ಲಿಯೇ ತಡೆದನು ಪರ್ವತವನ್ನು ಏರಿಬರುವದು ಕರಿಣವಾಗಿತ್ತು ಮತ್ತು ಮೇಲಿಂದ ಕೆಳಗಿನವರಿಗೆ ಗುಂಡಿನಿಂದಾಗಲಿ, ಕಲ್ಲುಗಳಿಂದಾ ಗಲಿ ಎಸೆಯುವದು, ಸುಲಭವಾಗಿತ್ತು, ಅಜಿಮಶಹನಿಗೆ ಪರ್ವತವನ್ನು ದಾಟಿ ಬರುವದಾಗಲಿಲ್ಲ. ಅಜಮಿಾರದ ಹತ್ತರ ಔರಂಗಜೇಬ, ಅಕಬರಶಹ, ಇವರ ಬೆಟ್ಟಿ ಯಾಯಿತು, ಮೊದಲು ಸೇನೆಯನ್ನು ಒಟ್ಟುಗೂಡಿಸಿ ಪರ್ವತದ ಮಗ್ಗೆ ಲಿಗೆ ಒಳಗೆಹೋಗುವದಕ್ಕೆ ಮೂರು ಮಾರ್ಗಗಳಾಗಿದ್ದಲ್ಲಿಗೆ ಬಂದು ಮುಟ್ಟಿದನು. ಈ ಮರು ಮಾರ್ಗಗಳು ಪರ್ವತದಲ್ಲಿ ಇಕ್ಕಟ್ಟಾದ ಖಿಂಡಿಗಳು, ಅದರಲ್ಲಿ ಮೊದಲನೆಯದರ ಹೆಸರು * ದುಬಾರಿ ' ಎರಡ ನೆಯದರ ಹೆಸರು • ದೇಲವಾಡಿ.” ಮೂರನೆಯದರ ಹೆಸರು * ನಯನಾ' ದುಬಾರಿ ಖಿಂಡಿಯ ಮಾರ್ಗಕ್ಕೆ ಸೇನೆಯುಬಂದ ಕೂಡಲೆ ಔರಂಗಜೇ ಬನು ಅಕಬರಶಹನ ಕೈಯ್ಯಲ್ಲಿ ಐವತ್ತು ಸಾವಿರ ಸೇನೆಯನ್ನು ಕೊಟ್ಟು ಆ ದಾರಿಯಿಂದ ಮುಂದೆ ಹೋಗುವದಕ್ಕೆ ಆಜ್ಞಾಪಿಸಿದನು ಉಳಿದ ಸೇನೆಯನ್ನು ತನ್ನ ಹತ್ತಿರ ಇಟ್ಟುಕೊಂಡು ಉದಯಸಾಗರವೆಂಬ ಸರೋ ವರದ ದಂಡೆಯ ಮೇಲೆ ವಿಶ್ರಾಂತಿಗೋಸ್ಕರ ನಿಂತುಬಿಟ್ಟನು.