ಪುಟ:ರಾಣಾ ರಾಜಾಸಿಂಹ.djvu/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩] ಯುದ್ಧದ ಮೊದಲನೆಯ ಪ್ರಸಂಗ ೧೩೩ ಆ ಇಕ್ಕಟ್ಟಾದ ಖಿಂಡಿಯ ಮಾರ್ಗದಿಂದ ಅಕಬರಶಹನು ಮುಂದಕ್ಕೆ ಹೋದನು, ಮಾರ್ಗದಲ್ಲಿ ತನ್ನ ಸೇನೆಯನ್ನು ತಡೆಯುವದಕ್ಕೆ ಒಬ್ಬ ಮನುಷ್ಯನೂ ಬರಲೊಲ್ಲನು, ಎಗಗಮಗ್ಗಲು ಪರ್ವತದ ಎತ್ತ ರವಾದ ಸಾಲುಗಳು, ಅವುಗಳಮೇಲೆ ಹಚ್ಚಗಿನ ವೃಕ್ಷ ಸಮುದಾಡುವು ನಡುವೆ ಸರೋವರ, ಸರೋವರದ ನಡುವೆ ಅಲ್ಲಲ್ಲಿಗೆ ಸಣ್ಣ ಸಣ್ಣ ದಿಬ್ಬಗಳು, ಈರೀತಿ ನಿರ್ಜನವಾದ ಸೃಷ್ಟಿಸೌಂದರ್ಯವು ಸೇನೆಯ ಜನರಿಗೆ ಕಾಣಿ ಸುತ್ತಿತ್ತಲ್ಲದೆ ಮನುಷ್ಯರು ಗುರ್ತು ಇಲ್ಲ. ಸುತ್ತಲು ಶಾಂತಸ್ಥಿತಿಯು ಕಂಡದ್ದರಿಂದ ಕಡೆಗೆ ಅಕಬರಶಹನು ಛಾವಣಿಯನ್ನು ಹಾಕಿದನು ಇಲ್ಲಿಯ ಜನರು ಅಂಜಿ ಓಡಿಹಿಗಿರಬಹುದೆಂದು ಆತನು ತಿಳಕೊಂ ಡನು ಛಾವಣಿಯನ್ನು ಹಾಕಿದೊಡನೆಯೆ ಮೊಗಲ ಸೇನೆಯು ಪೂರ್ವ ಕ್ರಮದಂತೆ ವಿನೋದವನ್ನೂ ಆರಂಭಿಸಿತು ಕೆಲವರು ಊಟದ ಸಿದ್ಧತೆ ಯಲ್ಲಿ, ಕೆಲವರು ಆಟನೂಟಗಳಲ್ಲಿ, ಕೆಲವರು ಸಮಾಜವಾಡುವದರಲ್ಲಿ ಮಗ್ನ ರಾಗಿ ಹೋಗಿದ್ದರು. ಹೊಂಚುಹಾಕಿಕೊಂಡು ಕುಳಿತಿರುವ ಹುಲಿಯು ಮಲಗಿದ ದಾರಿಕಾರರಿಮೈಮೇಲೆ ಒಮ್ಮೆಲೆ ಹಾರಿಬೀಳು ವಂತೆ ಕುಮಾರ ಬಯಸಿಂಹನು ಅಕಬರನ ಸೇನೆಯ ಮೇಲೆ ಬಿದ್ದುಬಿ ಟ್ಟನು. ಐವತ್ತು ಸಾವಿರ ಮುಸಲ್ಮಾನರಲ್ಲಿ ತೀರಸ್ವಲ್ಪ ಜನರು ಎಲ್ಲೆಲ್ಲಿಯೊ ಓಡಿ ಉಳಕೊಂಡರು, ಸ್ವತಃ ಅಕಬರಶಹನು ಗುಜರಾಧದ ಕಡೆಗೆ ಓಡಿ ಹೋದನು ಶಹಾಅಲಮ (ಮಜುಮಶಹ) ನು ದಕ್ಷಿಣದಿಂದ ದೊಡ್ಡ ಸೇನೆ ಯೊಡನೆ ಬಂದು ಅಹಮದಾಬಾದದ ದಾರಿಯ ಮೇಲೆ ಮೇವಾಡದ ಪರ್ವ ತಗಳ ಪಶ್ಚಿಮದ ಮಗ್ಗಲಿಗೆ ಬಂದಿದ್ದನು ಅಲ್ಲಿಂದ ಮುಂದೆ ದಾರಿಯು ಪರ್ವತದೊಳಗಿಂದ ಹಾಯ್ದು ಬರುತ್ತಿತ್ತು, ಆ ದಾರಿಯ ಹೆಸರು ಗಣ ರಾವ ಅದನ್ನು ದಾಟಿ ಶಹಾಅಲಮನು ಕಾಕರೋಳಿಯ ಹತ್ಯರಿರುವ ಸರೋವರದಮೇಲೆ ಒಂದು ನಿಂತನು. ಅಲ್ಲಿಂದ ಮುಂದೆ ಹೋಗುವ ಮಾರ್ಗವು ಸ್ವಲ್ಪವೂ ಗೊತ್ತಾಗಲೊಲ್ಲದು. ದಾರಿಯನ್ನು ಸುಲಭ