೩೪] ಚಿಂತಯ ನಿರ್ಮೂಲನ ೧೭೭ ವುದಕ್ಕೆ ಅಪ್ಪಣೆಯನ್ನು ಕೊಟ್ಟನು ಬಾದಶಹನ ಛಾವಣಿಯೆಂದರೆ ಅತ್ಯಂತ ಘನವಾದ ಪ್ರಕರಣವು ಎಳುತ್ತ ಏಳುತ್ತ ಪೂರ್ಣನಾಲ್ಕು ತಾಸು ಹೂತ್ತೇರಿತು ಮೊಗಲ ಬಾದಶಹನ ಸೇನೆಯಂದರೆ ಐಷ ಆರಾಮದ ಮರ್ತಿ ಸುಧಾರಿಸಿಕೊಳ್ಳುವದರಲ್ಲಿಯ ಎರಡು ತಾಸುಗಳು ಕಳೆದುಹೋಗು ವವು ಬಹಳ ಜನರು ಬೇಗಮ್ಮಳನ್ನೂ ದಾಸದಾಸಿಯರನ್ನೂ ತರು ತಿದ್ದರು ಇಂಧವರಪಾಲಿಗೆ ಅಪಜಯವು ಕಟ್ಟಿಟ್ಟ ಮಾತು. ಈ ರೀತಿ ಉಭಯ ಸೇನೆಯ ಸ್ಥಿತಿ ಇತ್ತು, ಬಾದಶಹನ ಸೇನೆಯು ಹೊರಟುಹೋಗು ವವರೆಗೆ ರಾಜಸಿಂಹನು ತನ್ನ ಛಾವಣಿಯನ್ನು ಹಾಗೇ ಸ್ಥಿರವಾಗಿಟ್ಟಿ ದ್ದನು ಆತನು ಹೊರಟುಹೋದನಂದು ಪೂರ್ಣವಾಗಿ ಗೊತ್ತಾದ ಮೇಲೆ ತನ್ನ ರಾಹುಟಿಯನ್ನು ಕೀಳಲಿಕ್ಕೆ ಅಪ್ಪಣೆಯನ್ನು ಕೊಟ್ಟನು. ದಿಲೇರಖಾನನನ್ನು ಸೋಲಿಸಿದ್ದಕ್ಕೆ ಗೋಪೀನಾಧ, ವಿಕ್ರಮಸಿಂಹ, ಹಾಗು ಪ್ರತಾಪಸಿಂಹರಿಗೆ ಅತ್ಯಂತ ಅಭಾರ ಪೂರ್ವಕವಾಗಿ ಮನ್ನಣೆಮಾಡಿದನು. ಆಪತ್ತಿನಿಂದ ಮುಕ್ತನಾದೊಡನೆಯ ಕಾರ್ಯ ಕರ್ತೃವಿನ ಚಿತ್ತವು ಸಮಾ ಧಾನಗೆ ಎಳ್ಳುವಂತೆ ಉದೇಪುರಕ್ಕೆ ಹೋದಮೇಲೆ ರಾಣಾನಿಗೆ ಅತ್ಯಂತ ಸಮಾಧಾನವಾಯಿತು, ವಿಜಯ ಮದದಿಂದ ಸ್ನಾತರಾದ ರಜಪೂತ ವೀರರು ನಗರವನ್ನು ಅತ್ಯುತ್ಸವದಿಂದ ಪ್ರವೇಶಿಸಿದರು ನಗರವನ್ನು ಪ್ರವೇಶಿಸುವಕಾಲಕ್ಕೆ ಪುರವಾಸಿಗಳು ಮಾಡಿದ ಸ್ವಾಗತಾರ್ಧದಿಂದ ಅವ ರ ಪರಿಶ್ರಮವು ಪರಿಹಾರವಾಯಿತು ಈ ಹೊತ್ತು ನಮ್ಮ ಕರ್ತವ್ಯಕ ರ್ಮವನ್ನು ಮಾಡಿ ತೀರಿಸಿದೆವೆಂದು ಸಂತೋಷಸಾಗರದಲ್ಲಿ ಮುಳುಗಿ ಹೋದರು ಎತ್ತ ನೋಡಿದತ್ತ • ಮಹಾರಾಣಾರಾಜಸಿಂಹಕಿ ಜಯ ? ಇದೇಧ್ವನಿಯು ತುಂಬಿಹೋಗಿತ್ತು, ಇದಕ್ಕೂ ಸ್ವಲ್ಪ ಹೊತ್ತಿನ ಪೂರ್ವ ದಲ್ಲಿ ಒಂದು ಮಹಲಿನಲ್ಲಿ ಇಬ್ಬರು ನವಯವ್ವನೆಯರು ವಿಚಾರ ಸಾಗರ ದಲ್ಲಿ ಮಗ್ನರಾಗಿದ್ದರು ಅವರೊಳಗಿನವಳೊಬ್ಬಳು ಕಪೋಲವನ್ನು ವಾಮ ಹಸ್ತದಮೇಲೆ ಇಟ್ಟು ಕೊಂಡು ಕುಳಿತಿದ್ದಳು. ಚಿಂತೆಯಿಂದ ಅವಳ ಮುಖವು
ಪುಟ:ರಾಣಾ ರಾಜಾಸಿಂಹ.djvu/೧೯೩
ಗೋಚರ