ಪುಟ:ರಾಣಾ ರಾಜಾಸಿಂಹ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧] ೧೧] ಧರ್ಮೋದ್ದಾರರಾದ ವೀರರ ಗುಪ್ತ ಸಂಘ ಹೇಳತೊಡಗಿದಳು ತಪಸ್ವಿನಿಯು ಸ್ವಲ್ಪ ವಯಸ್ಸು ಹೋದವಳು; ಆದಾ ಗ್ಯೂ ಅವಳಕಂರದಲ್ಲಿ ಮಾಧುರ್ಯವೂ ಅಧಿಕಾರಯುಕ್ತವಾದ ವಾಣಿಯ ಇದ್ದವು ಯಾವತ್ತು ಸಭಿಕರು ತಟಸ್ಥರಾಗಿ ಅದನ್ನು ಕೇಳಹತ್ತಿದರು. ಪ್ರತಿಯೊಬ್ಬನ ಮೈಮೇಲೆ ರೋಮಾಂಚಗಳೆದ್ದವ, ವೀರರು ತಮ್ಮ ಕತ್ತಿಗಳಿಗೆ ಕೈಹಾಕಿದರು. ಎಲ್ಲಾ ಕಡೆಯಲ್ಲಿಯ ವೀರಶ್ರೀಯು ತುಂಬಿ ತುಳುಕಹತ್ತಿತು ಗಾಯನವು ಮುಗಿದಮೇಲೆ ಪರಮಹಂಸನು ಎದ್ದು ನಿಂತು ರಾಣಿಯವರ ಕಡೆಗೆ ತಿರುಗಿ“ಮಗಳೆ, ಯಾವ ವ್ರತವನ್ನು ಪರಿಗ್ರಹಿಸುವದಕ್ಕಾಗಿ ಈ ವ್ಯೂಹವು ರಚಿಸಿರುತ್ತದೊ ಅದು ಸುಲಭವಾಗಿ ಕೊನೆಗಾಣುವದಕ್ಕೆ ನಾವು ದೃಢವಾಗಿ ಪ್ರಯತ್ನ ಮಾಡುವದು ಅವಶ್ಯ ವದೆ. ಇದೋ ನೋಡು, (ಆ ದಿವಾಣಖಾನೆಯಲ್ಲಿರುವ ಯಾವತ್ತು ವೀರ ರನ್ನು ತೋರಿಸಿ) ಈ ವೀರರಂಧ ಒಂದು ಲಕ್ಷ ವೀರರು ಕೇವಲ ನಿನ್ನ ಆಜ್ಞೆ ಯಾದಕೂಡಲೆ ತಮ್ಮ ಕತ್ತಿಗಳನ್ನು ಹಿರಿದು ಶತ್ರುಗಳನ್ನು ಸಂಹರಿಸಲಿಕ್ಕೆ ಸಿದ್ಧರಿರುವರು. ಆಮೇಲೆ ಅಂಜಿಕೆಯಾಕೆ ? ಧರ್ಮದ ಕಡೆಗೆ ಜಯವಿರು ವುದು ಸನಾತನಧರ್ಮದವರು ನೀತಿಯಿಂದ ನಡೆದರೆ ದೇವರು ಅವ ರಿಗೆ ನಿಶ್ಚಯವಾಗಿ ಜಯ ಕೊಡುವನು. " ಇದನ್ನು ಕೇಳಿ ರಾಣಿಯು • ಪಿತಾಜಿ, ಧರ್ಮಸೇವೆ, ಅಬಲಾರ ಕ್ಷಣ ಇವುಗಳ ಬಗ್ಗೆ ಅಂಗೀಕರಸಿದ ಕಾರ್ಯಗಳಲ್ಲಿ ಪ್ರಸಂಗ ಒದಗಿದರೆ ಪ್ರಾಣಹೋಗುವವರೆಗೂ ಹಿಂದೆ ಮುಂದೆ ನೋಡಬಾರದೆಂಬುದು ನಮ್ಮ ಕ್ಷತ್ರಿಯರ ಕರ್ತವ್ಯವು, ದೇಶದಲ್ಲಿ ತೋರುವ ಜುಲುಮೆ, ಧರ್ಮದ ನಾಶ, ಪತಿವ್ರತೆಯರ ಮೇಲಿನ ಅತ್ಯಾಚಾರ ಇತ್ಯಾದಿ ಕ್ರೂರಕೃತ್ಯಗ ಳನ್ನು ಕಂಡು ಯಾವಾತನ ಮನಸ್ಸು ಸಂತಾಪದಿಂದ ಪ್ರಜ್ವಲಿಸುವದಿ ಲ್ಲವೂ ಆತನು ಕ್ಷತ್ರಿಕನೇನು ? ವ್ರತವನ್ನು ಕೈಕೊಂಡಮೇಲೆ ಅದು ಕೊನೆಗಾಣುವವರೆಗೂ ಹೊಡೆದಾಡುವದು ಪ್ರತಿಯೊಬ್ಬನ ಕರ್ತವ್ಯವು. ನನ್ನ ಪ್ರಿಯ ಬಂಧುಗಳೆ ! ಈ ನನ್ನ ಮಾತಿಗೆ ನಿಮ್ಮೆಲ್ಲರ ಒಪ್ಪಿಗೆ ಯುಂಟೇ ??