ಪುಟ:ರಾಣಾ ರಾಜಾಸಿಂಹ.djvu/೯೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಆ> ಉಣರಾಜಸಿಂಹ [ಪಕರಣ ಯೋಗವಾಗುವುದು ನಮಗಾದರೂ ಬ್ರಾಹ್ಮಣರಜೀವ ಉಳಿಸಿದ ಪುಣ್ಯ ಬರುವುದು 12 ಇದನ್ನು ಕೇಳಿ ಅನಂತಮಿಶ್ರನ ಮನಸ್ಸು ಸಂಶಯಗೊಂಡಿತು. ತನ್ನಲ್ಲಿರುವ ಮೊಹರು, ರತ್ನ ದಹಾರ ಮೊದಲಾದದ್ದನ್ನು ಅವರ ಕೈಯ್ಯಲ್ಲಿ ಕೊಡಬೇಕೆಂದೆಣಿಸಿದನು ಆದರೆ ಪ್ರವಾಸದ ಗುರ್ತು ಇವರೇ ಕಳ್ಳರಿರ ಬಾರದೇಕೆ ? ಈ ವಿಚಾರವು ಅವನ ಮನಸ್ಸಿನಲ್ಲಿ ಬಂದೊಡನೆಯೆ ಅವನ ಮುಖಲಕ್ಷಣವು ಬದಲಾಯಿತು ಮಿಶ್ರದೇವನ ಈ ಸ್ಥಿತಿಯನ್ನು ಕಂಡು ಇವನಲ್ಲಿ ಏನಾದರೂ ಇರಬಹುದೆಂದು ಆ ರಜಪೂತರು ನಿಶ್ಚಯಿಸಿದರು. ಕೂಡಲೆ ಒಬ್ಬನು ಅನಂತಮಿತ್ರನ ಹಿಂದೆ ಹೋಗಿ ಆತನನ್ನು ನೆಲಕ್ಕೆ ಕೆಡವಿ ಎದೆಯಮೇಲೆ ಕುಳಿತನು, ಮಿತ್ರದೇವನು ಅವನಿಂದ ಬಿಡಿಸಿಕೊಳ್ಳುವು ದಕ್ಕೆ ತನ್ನಿಂದಾದಷ್ಟು ಪ್ರಯತ್ನ ಮಾಡಿದರೂ ಅವನ ಶಕ್ತಿಯು ಕಳ್ಳನ ಮೇಲೆ ನಡೆಯಲಿಲ್ಲ. ಕಳ್ಳನು ಕುತ್ತಿಗೆಯನ್ನು ಅವುಕಿ ಹಿಡಿದುಕೊಂ ಡನು. ಬೇರೊಬ್ಬನು ಅನಂತಮಿಶ್ರನ ಬೊಕ್ಕಣದಲ್ಲಿ ಕೈ ಹಾಕಿ ವಿಕ್ರಮ ಸಿಂಹನು ರಾಜಸಿಂಹನಿಗೆ ಕೊಟ್ಟ ಪತ್ರ, ಚಂಚಲಕುಮಾರಿಯ ಪತ್ರ ಮುತ್ತಿನಹಾರ, ಐದು ಮೊಹರು ಇಷ್ಟನ್ನು ತಕ್ಕೊಂಡು ತನ್ನ ಸ್ನೇಹಿತರ ಕಡೆಗೆ ತಿರುಗಿ, " ನಡೆಯಿರಿ, ಆಗಬೇಕಾದ ಕೆಲಸವಾಯಿತು. ಇವನಲ್ಲಿ ಏನೂ ಉಳಿಯಲಿಲ್ಲ, ಆದರೆ ಇವನನ್ನು ಹಾಗೇ ಬಿಡದೆ ಒಂದು ಗಿಡದ ಬೊಡ್ಡಿಗೆ ಕಟ್ಟಿ ಹಾಕಿ ಹೋಗುವುದು ಯೋಗ್ಯವಾದದ್ದು” ಮಿಶ್ರದೇವ ನನ್ನು ಕಟ್ಟಿ ಆಯಿತು. ಎರಡೂ ಪರ್ವತಗಳ ನಡುವಿನ ಖಿಂಡಿಯ ಮಾರ್ಗ ದಿಂದ ಕಳ್ಳರು ಹೋದರು. ಪರ್ವತದ ಶಿಖರದಮೇಲಿರುವ ಒಬ್ಬ ಕುದು ರೆಯ ಸವಾರನು ಇದೆಲ್ಲವನ್ನು ನೋಡುತ್ತಿದ್ದನು, ನೋಡುತ್ತಿದ್ದ ಹಾಗೆ ತನ್ನ ಕುದುರೆಯನ್ನು ಆದಷ್ಟು ವೇಗದಿಂದ ಓಡಿಸಿಕೊಂಡು ಬಂದನು. ಇತ್ರ ಆ ಕಳ್ಳರು ಸ್ವಲ್ಪ ದೂರಹೋದಮೇಲೆ, ದಟ್ಟವಾದ ಗಿಡ ಗಳ ಗುಂಪನ್ನು ಹೊಕ್ಕರು. ಅಲ್ಲಿಗೆ ಹೋದೊಡನೆಯೆ ಮೊದಲೊಬ್ಬನು ಹುಕ್ಕಾ ವನ್ನು ಸಿದ್ಧಗೊಳಿಸಿದನು. ಬೇರೊಬ್ಬನು ಅಡಿಗೆ ಮಾಡಲಾರಂಭಿಸಿ