ವಿಷಯಕ್ಕೆ ಹೋಗು

ಪುಟ:ರಾಣಾ ರಾಜಾಸಿಂಹ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೪. ಕಾಣಿರಿರಾಜಸಿಂಹ [ಪ್ರಕರಣ VY VV «VY VVVV + V + +vvvvvvY VV V \ yyyy ಮುಂದಿನ ವಾಕ್ಯವು ಪೂರ್ಣವಾಗುವದರೊಳಗಾಗಿ ಆತನ ತಲೆಯು ಕುತ್ತಿಗೆಯಿಂದ ಕಳಚಿ ಕೆಳಗೆಬಿತ್ತು ಈe~. ೧೩ನೆಯ ಪ್ರಕರಣ ಜಯಸಿಂಹ ಕಳ್ಳರ ಹಂಚಿಕೆಯನ್ನು ಕಂಡು ಕುದುರೆಯ ಸವಾರನು ಪರ್ವ ತದ ಶಿಖರದ ಮೇಲೆಯೆ ಸ್ವಲ್ಪ ಹೊತ್ತು ನಿಂತು ಅವರು ಎಲ್ಲಿಗೆ ಹೋಗು ತಾರೆಂಬದನ್ನು ನೋಡಿದನು ಆಮೇಲೆ ಕುದುರೆಯಿಂದಿಳಿದು ಮೆಲ್ಲ ಮೆ ಲ್ಲನೆ ಅದರ ಬೆನ್ನ ಮೇಲೆ ಕೈಯಿಂದ ಚಪ್ಪರಿಸುತ್ತ-“ವಿಜಯ, ಇಲ್ಲಿಯ ನಿಂತಿರು, ಅತ್ತಿತ್ತ ಹೋಗಬೇಡ, ಈಗ ಬರುತ್ತೇನೆ.” ಆತನ ಅಪ್ಪಣೆಯ ಪ್ರಕಾರ ಕುದುರೆಯು ಸ್ತಬ್ಧವಾಗಿ ನಿಂತುಬಿಟ್ಟಿತು, ತನ್ನ ಒಡೆಯನ ಕಡೆಗೆ ಮುಖವನ್ನು ತಿರುಗಿಸಿ ಆತನಿಗೆ ಅನುಮತಿಯನ್ನು ಕೊಟ್ಟಿತು, ಅಲ್ಲಿಂದ ಸವಾರನು ಮಿತ್ರದೇವನ ಕಟ್ಟು ಬಿಚ್ಚಿದನು. ಬಿಚ್ಚುತ್ರ ಆದದ್ದನ್ನು ಸ್ವಲ್ಪದರಲ್ಲಿಯೇ ಹೇಳೆಂದು ಕೇಳಿದನು ಅದಕ್ಕೆ ಮಿಶ್ರದೇವನು - ನನ್ನ ಒಡವೆಗಳನ್ನು ಅಪಹರಿಸಿಕೊಂಡು ಈಗ ಓಡಿಹೋದ ನಾಲ್ಕು ಜನರೊಡನೆ ಉದೇಪುರಕ್ಕೆ ಹೋಗುತ್ತಿದ್ದೆನು, ಅವರ ಗುರ್ತು ನನಗೆ ಇದ್ದಿಲ್ಲ ದಾರಿಯಲ್ಲಿಯೆ ನನಗೆ ಗೆಳೆಯರಾದರು ತಾವು ರಜ ಪೂತರೆಂದು ಹೇಳಿದರು ರಜಪೂತರು ವಿಶ್ವಾಸಘಾತಕರಲ್ಲೆಂದು ಅವ ರನ್ನು ಒಡಗೂಡಿದೆನು ಇಲ್ಲಿಯವರೆಗೆ ಬಂದಕೂಡಲೆ ನನ್ನನ್ನು ಹಿಡಿದು ಇದ್ದದ್ದನ್ನೆಲ್ಲ ತೆಗೆದುಕೊಂಡು ಓಡಿಹೋದರು ?