ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೩೦

ರಾಮಚಂದ್ರ ಚರಿತಪುರಾಣಂ

ಕದ ಪೊಳಪು ಮುಟ್ಟೆ ಕಿಡಿಯಿಡುವ ಸೂರ್ಯಕಾನ್ತದ ಶಿಲೆಗಳುಮಂ ಅತಿಕುತೂಹಲದಿಂ
ನೋಡುತ್ತೆ ಮುಟ್ಟಿಬರ್ಪ ಸಮಯದೊಳ್ ತೊಟ್ಟನೆ ಕಟ್ಟಿದಿರೊಳ್.

ಮ||ಸ್ರ|| ಮನಮಂ ಮುಟ್ಟೈಸಿ, ಮಧ್ಯಂದಿನದ ಬಿಸಿಲೆ ಬೆಳ್ದಿಂಗಳ೦ತಾಗೆ ತನ್ನಿಂ|
         ತನುವಂ ಬೇರ್ಕೆಯ್ದು ಬಾಹ್ಯೇಂದ್ರಿಯಮನುಡುಗಿ ಕೈಯಿಕ್ಕಿನಿರ್ವಾಣಸಾಮ್ರಾ||
         ಜ್ಯ ನಿವಾಸಕ್ಕೊರ್ವನಂತರ್ಮುಖನಭಿಮುಖನಾದಿತ್ಯಬಿಂಬಕ್ಕೆ ಯೋಗೀ೦|
         ದ್ರನತಂದಂ ನಿರ್ನಿ ಮೇಷಂ ನಗನಿಕಟ ಹಟದ ತ್ನಕೂಟಂಬೊಲಿರ್ದ೦||೧೪||

ಅ೦ತಾಮಹಾತಿಥಿ ನಯನಾತಿಥಿಯಾಗಿರ್ಪುದುಂ---

         ಕಂ|| ಮುಗಿದುವು ಕರಕಮಲಂಗಳ್,
               ಬಗೆಯಿಂ ಮುಂಬರಿದು ಮುನಿಮುಖಾಂಬುಜಮಂ ತುಂ||
               ಬಿಗಳಂತೆ ಮುಸುರಿದುವು ದಿ
               ಟ್ವಿಗಳೇನಭಿನುತನೊ ವಜ್ರಬಾಹುಕುಮಾರಂ||೧೫||

               ದಾರುಣ ಸಂಸರಣ ವಿಷೋ
               ರ್ವೀರುಹಮಂ ಕೀಳ್ವಿ ಬವಸೆಯಿಂದಿರ್ದಪನೀ||
               ಧೀರನೆನುತ್ತು೦ ರಾಜಕು
               ಮಾರಕನಾಮುನಿಯ ಬಗೆದ ಬಗಯಂ ಬಗೆದಂ||೧೬||

               ದಿನಮುಖದರ್ಶನದಿಂ ತೊ
               ಟ್ಟನೆ ಕಳ್ತಲೆ ಪಿಂಗುವಂತೆ ಮುನಿಪತಿ ಮುಖ ದ||
               ರ್ಶನದಿಂ ಚಿತ್ತದ ಕಲ್ತೆಳೆ
               ಜನಪತಿಗೊರ್ಮೊದಲೆ ಪಿಂಗಿಪೋದತ್ತಾಗಳ್||೧೭||

               ಏನಯ್ಯ ಖಡ್ಡ ಧಾರೆಯ
               ಜೇನೆಯ೦ ನಕುವಂತೆ, ಸಂಸಾರಸುಖ
               ಕ್ಕಾನಳಿಪೆ ವಿಷಯಲೋಭದಿ
               ನೇನಸ್ಸಂತಾನಮೆನ್ನನೇನಳಿಲಿಸದೋ||೧೮||

         ಎಂದು ತರಿಸಂದು ಮನದಳಕದಿಂದವಲೋಕಿಸುತ್ತಿರ್ಪುದುಮುದಯ ಸುಂದ
ರಂವಜ್ರ ಬಾಹುಕುಮಾರನ ಮುಖಾರವಿಂದಮಂ ನೋಡಿ----



೧. ಮಹೋ, ಕ, ಖ , ಗ, ಘ
೨. ಇನ. ಗ. ಫ.