ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ದ್ವಿತೀಯಾಶ್ವಾಸಂ

೩೧



ಉ||ಭಾವಮುನೀಂದ್ರರಂ ಬಿಡದೆ ನೋಡಿದಪೈ ಮನಮೊಲ್ದೊಡಂ ತಪ|
    ಶ್ಶ್ರೀವಧು ಕಾಮಿನೀಜನದವೋಲ್ ನಿನಗೀವಳೆ ಕೂರ್ತು ವಸ್ತ್ರಭೂ|
    ಷಾವಳಿಯಂ ಕಚಾವಳಿಯನೀವಧು ಗರ್ವದ ಗಾಳು ವಸ್ತ್ರಭೂ|
    ಪಾವಳಿಯಂ ಕಚಾವಳಿಯನಿತ್ತರನಲ್ಲದೆ ಪೊರ್ದಲೀವಳೇ

    ಎಂದು ಸರಸಮಂ ನುಡಿದೊಡರಸನುದಯಸುಂದರಂಗೆಂದನಾಂ ತಪಮಂ
ಕೈಕೊಂಡೊಡೆ ನೀನೇಗೆಯ್ವೆಯೆನೆ ನಿನ್ನೊಡನಾನುಂ ತಪಮಂ ಕೈಕೊಳ್ವೆನೆಂಬುದುಂ--

ಪೃಥ್ವಿ|| ಒಡಂಬಡಿಸಿ ವಾಗ್ವಿಡಂಬನದಿನಾತನಂ ಬಂಧಮಂ
        ಪಡಲ್ವಡಿಪ ಬೇಗದಿಂದಿಳಿದು ವಾರಣಸ್ಕಂಧದಿಂ||
        ತೊಡರ್ಪರಿದ ವನ್ಯವಾರಣದ ಮಾಳ್ಕೆಯಿಂದೇರಿದಂ
        ತೊಡರ್ಪನಿನಿಸಾನುವಂ ಬಗೆಯದಾಕುಭೃತ್ಸಾನುವಂ||೨೦||

        ಆಗಳಾತನ ಮನದ ತರಿಸಲವಂ ಕಂಡು---
       
        ಕಂ|| ನಗೆ ದಿಟವಾದೊಡೆ, ನಾಡೆಯು
              ಮಗಿದು ಸುಹೃಜ್ಜನಮುಮುದಯಸುಂದರನುಂ ಕೈ
              ಮುಗಿದೆರಗೆ ಮಾಣ್ಬನಲ್ಲೆಂ
              ಬಗೆಯದಿರಿಂ ಪೆರತನೆಂದು ಪರಿಪಡೆ ನುಡಿದಂ||೨೧||

              ಈ ಮುನಿಯುಮನೀಮನಮುಮ
              ನೀ ಮೈಯುಮನೀಮನುಷ್ಯಗತಿಯುಮನಾ೦ಮು||
              ನ್ನೇಮಾತೊ ಪಡೆದೆನಿಲ್ಲೀ
              ಸಾಮಗ್ರಿಯೊಳಷ್ಟು ಕೆಯ್ವೆನಘವವಿಘಟನಮಂ||೨೨||

              ಎಂದು ಮನದ ಪರಿಚ್ಛೇದಮಂ ನಾಲಗೆಗೆ ತಂದು ಪರಿಜನಮನೊಡಂಬಡಿಸಿ--

         ಉ|| ಕರ್ವಿನ ಬಿಲ್ಲನಿಕ್ಕಿ ಭಯದಿಂ ಮದನಂ ಪರಿದೇರ ಪುತ್ರನಾ
              ಪರ್ವತಮಂ ನರೇಂದ್ರಸುತನೇರಿ ವಿರಾಜಿತಕೇಶಪಾಮಂ
              ಪರ್ವಿದ ಮೋಹಪಾಶದೊಡನೊರ್ಮೊದಲೊಳ್ ಪರಿದಿಕ್ಕಿದಂ ಜಸಂ
              ಪರ್ವುವಿನಂ ಜಗತ್ತ್ರಯಮನಾ ಮುನಿಮುಖ್ಯನ ಪಾದಪಾರ್ಶ್ವದೊಳ್

              ಅಂತು ವಜ್ರಬಾಹುಕುಮಾರಂ ಗುಣಸಾಗರಭಟ್ಟಾರಕರ ಚರಣೋಪಾಂತ
ದೊಳ್ ತಪಶ್ಚರಣ ನಿರತನಪ್ಪುದುಂ--