ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



i‍x

ಎರಡು ಕಥೆಗಳಿಗೂ ಇರುವ ಕೆಲವು ಮುಖ್ಯವಾದ ವ್ಯತ್ಯಾಸಗಳನ್ನು ಇಲ್ಲಿ ತೋರಿಸಿರುವೆವು :- ಪಂಪರಾಮಾಯಣದಲ್ಲಿ
(೧) ಪುತ್ರಕಾಮೇಷ್ಟಿ ಯಾಗದ ವಿಷಯವೇ ಇಲ್ಲ ; ರಾಮನ ತಾಯಿ ಅಪರಾಜಿತೆ, ಲಕ್ಷ್ಮಣನೊಬ್ಬನೇ ಸುಮಿತ್ರೆಯ ಮಗ, ಶತ್ರುಘ್ನನ ತಾಯಿ ಸುಪ್ರಭೆ.
(೨) ರಾಮಲಕ್ಷ್ಮಣರು ಬಲಾಚ್ಯುತರೆಂದೂ ಕಾರಣ ಪುರುಷರೆಂದೂ ಹೇಳಿದೆ. ಲಕ್ಷ್ಮಣನಿಗೆ ಎಂಟನೆಯ ಕೇಶವ, ಉಪೇಂದ್ರ, ವಾಸುದೇವ, ಕೃಷ್ಣ, ನಾರಾಯಣ, ಲಕ್ಷ್ಮೀಧರ, ಪುರುಷೋತ್ತಮ, ಜನಾರ್ದನ-ಎ೦ಬ ಹೆಸರುಗಳೂ ಉಂಟು; ಇವನೇ ನಿಜವಾದ ಕಥಾನಾಯಕನು. ರಾಮನ ವರ್ಣವು ಬಿಳುಪು, ಲಕ್ಷ್ಮಣನದು ಕಪ್ಪು.
(೩) ವಿಶ್ವಾಮಿತ್ರನ ಪ್ರಸ್ತಾವವೇ ಇಲ್ಲ. ನಾರದನು ಸೀತಾದೇವಿಯನ್ನು ಮೋಹಿಸಿದನೆಂದು ಹೇಳಿದೆ.
(೪) ಸೀತಾದೇವಿಗೆ ಪ್ರಭಾಮಂಡಲನೆ೦ಬ ಅಣ್ಣನಿದ್ದನೆಂದೂ ಅವನು ಖಚರ ಪತಿಯಾದ ಇಂದುಗತಿಯ ಸಾಕುಮಗನೆಂದೂ, ಅವನು ನಾರದನು ಬರೆದಿಟ್ಟಿದ್ದ ಸೀತೆಯ ಪಟವನ್ನು ನೋಡಿ, ತಿಳಿಯದೆ ಆಕೆಯನ್ನು ಮೋಹಿಸಿ, ಕಡೆಗೆ ನಿಶ್ಚಯಾಂಶವನ್ನು ತಿಳಿದು ವ್ಯಸನಪಟ್ಟನೆಂದೂ ಹೇಳಿದೆ.
(೫) ಖಚರಪತಿಯಾದ ಇಂದುಗತಿಯ ಬಳಿಯಲ್ಲಿದ್ದ ವಜ್ರಾವರ್ತ ಸಾಗರಾ ವರ್ತಗಳೆಂಬ ಧನುಸ್ಸುಗಳನ್ನು ಆತನು ಜನಕನೊಡನೆ ಮಿಥಿಲೆಗೆ ಕಳುಹಿಸಿದನೆಂ ದೂ ಅವುಗಳಲ್ಲಿ ಮೊದಲನೆಯದನ್ನು ರಾಮನು ಬಗ್ಗಿಸಿ ಸೀತೆಯನ್ನೂ, ಎರಡನೆಯ ದನ್ನು ಲಕ್ಷ್ಮಣನು ಬಗ್ಗಿಸಿ ಚ೦ದ್ರಧ್ವಜನ ಇಬ್ಬರು ಮಕ್ಕಳನ್ನೂ ಪಡೆದರೆಂದು ಹೇಳಿದೆ.
(೬) ಭರತನು ರಾಮಲಕ್ಷ್ಮಣರಿಗುಂಟಾದ ವೈಭವದಿಂದ ವಿಷಾದಪಟ್ಟು ವೈರಾಗ್ಯಪರನಾದಂತೆಯೂ, ಕೈಕೆಯ ಸಲಹೆಯ ಮೇರೆಗೆ ಅವನಿಗೆ ಜನಕನ ತಮ್ಮ ನಾದ ಕನಕನ ಮಗಳನ್ನು ಮದುವೆ ಮಾಡಿದಂತೆಯೂ ಹೇಳಿದೆ.
(೭) ವಿಜಯ ಯಾತ್ರೆಯಲ್ಲಿ ಲಕ್ಷ್ಮಣನಿಗೆ ಅನೇಕ ಮದುವೆಗಳಾಗುತ್ತವೆ.
(೮) ವಾಲ್ಮೀಕಿಯು ಹೇಳಿರುವಂತೆ ಏಕಪವ್ರತವುಳ್ಳ, ರಾಮನಿಗೆ ಪಂಪ ರಾಮಾಯಣದಲ್ಲಿ ಸುಗ್ರೀವನ ಮಕ್ಕಳನ್ನೂ ದಧಿಮುಖನಗರದ ದೊರೆಯ ಮಕ್ಕ ಇನ್ನೂ ರತ್ನಪುರದರಸನ ಮಗಳನ್ನೂ ಕೊಟ್ಟು ಮದುವೆಯಾದಂತೆ ಹೇಳಿದೆ.
(೯) ಮಾರೀಚನು ಮಾಯಾಮೃಗವಾಗಿ ರಾಮನ ದನಿಯನ್ನನುಕರಿಸಿ ಆರ್ತ ಧ್ವನಿಮಾಡಿದನೆಂಬುದಕ್ಕೆ ಬದಲಾಗಿ ರಾವಣನ ವಶವಾದ ಅವಲೋಕಿನೀ ವಿದ್ಯೆಯು ಲಕ್ಷಣನ ದನಿಯಂತೆ ಸಿಂಹನಾದ ಮಾಡಿದಹಾಗೆ ಹೇಳಿದೆ.