ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
x

(೧೦) ಸುಗ್ರೀವ ಮೊದಲಾದವರು ಕಪಿಧ್ವಜರೆ೦ದೂ ಖೇಚರರೆಂದೂ ಹೇಳಿದೆ.

(೧೧) ಸುಗ್ರೀವನ ತಂಗಿಯಾದ ಶ್ರೀಪ್ರಭೆಯನ್ನು ರಾವಣನು ಮದುವೆಯಾ
ಗಿದ್ದನೆಂದಿದೆ.

(೧೨) ವಾಲಿಯು ಕೈಲಾಸಪರ್ವತದಲ್ಲಿ ತಪಸ್ಸು ಮಾಡುತ್ತಿರುವಾಗ ಆ ಪರ್ವತ
ವನ್ನು ರಾವಣನು ಎತ್ತಲು, ವಾಲಿಯು ತನ್ನ ಹೆಬ್ಬೆರಳಿನಿಂದ ತುಳಿದನೆಂದೂ ಅದ
ರಿಂದ ರಾವಣನಿಗೆ ಬಹು ಬಾಧೆಯಾಗಿ ಅವನು ಅರಚಿಕೊಂಡನೆಂದೂ ಆ ಕಾರಣ
ದಿಂದ ಅವನಿಗೆ ರಾವಣನೆಂಬ ಹೆಸರು ಬಂದಿತೆಂದೂ ಹೇಳಿದೆ.

(೧೩) ಕಾರ್ತವೀರ್ಯರ್ಜುನನಿಗೆ “ ಸಹಸ್ರಬಾಹು” ಎಂಬ ಹೆಸರಿದೆ. ರಾವಣ ನನ್ನು ಸಹಸ್ರಬಾಹು ಸೆರೆಹಿಡಿದನೆಂಬುದಕ್ಕೆ ಬದಲಾಗಿ ರಾವಣನೇ ಅವನನ್ನು ಸೆರೆಹಿಡಿದನೆಂದಿದೆ.

(೧೪) ರಾವಣನ ತಂಗಿಯಾದ ಚಂದ್ರನಖಿಯ ಮಗಳಾದ ಅನಂಗಪುಷ್ಪೆ
ಯನ್ನು ಹನುಮಂತನು ಮದುವೆಯಾಗಿ ರಾವಣನು ಕೊಟ್ಟ ಕರ್ಣಕುಂಡಲಪುರಕ್ಕೆ
ದೊರೆಯಾಗಿ ಅವನ ಸ್ನೇಹಿತನಾಗಿದ್ದನೆಂದೂ ರಾವಣನು ಸೀತೆಯನ್ನು ಅಪಹರಿಸಿ
ದುದಕ್ಕಾಗಿ ಅವನಿಗೆ ಹಗೆಯಾಗಿ ರಾಮನಿಗೆ ಸಹಾಯಮಾಡಿದನೆಂದೂ ಹೇಳಿದೆ.

(೧೫) ರಾವಣನನ್ನು ಸಂಹರಿಸಿದವನು ಲಕ್ಷ್ಮಣನೆಂದು ಹೇಳಿದೆ.

ಇಲ್ಲಿ ಹೇಳಿರುವುವಲ್ಲದೆ ಇತರ ವ್ಯತ್ಯಾಸಗಳೂ ಮುಂದೆ ಕೊಟ್ಟಿರುವ ಕಥಾ
ಸಂಗ್ರಹದಿಂದ ತಿಳಿಯಬರುವುವು.

ಉತ್ತಮವಾದ ಈ ಕಾವ್ಯವನ್ನು ಕನ್ನಡಿಗರು ಆದರದಿಂದ ಓದಿ ಆನಂದಪಡುವ
ರೆಂದು ಹಾರೈಸುತ್ತೇವೆ.

ಕರ್ಣಾಟಕ ಸಾಹಿತ್ಯ ಪರಿಷತ್ತು
ಬೆಂಗಳೂರು
ಸಂಪಾದಕರು.
ರೌದ್ರಿನಾಮ ಸಂ
ಗುರುವಾರ