ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೫೩

ತೃತಿಯಾಶ್ವಾಸಂ



ಚ|| ದೆಸೆ ಮಸುಳ್ವನ್ನೆಗಂ ಮಸಗಿರಾಜತನೂಭವರೆಚ್ಚ ಬಾಣಮಂ|
     ಪೊಸಮಸೆಯಂಬಿನಿಂ ಕಡಿದು ಕಳ್ತಲೆಯಂ ಬೆದರಟ್ಟಿ ಕಣ್ಗಗು||
     ರ್ವಿಸುವಿನ ಮಂಡಲಕ್ಕೆ ಪರಿವೇಷಮದಾಯ್ತೆನೆ ತೀವ್ರತೇಜಮಂ|
     ಪಸರಿಸಿ ಕಣ್ಗೆಕುಂಡಲಿತ ಚಾಪಮಗುರ್ವಿಸಿದಂ ಮಹೀಭುಜಂ
 
     ಕೆಲರ ವರೂಥಮಂ ಕೆಲರ ವಾಜಿಗಳ೦, ಕೆಲರುಗ್ರಬಾಣಮಂ|
     ಕೆಲರ ಕಿರೀಟಮಂ,ಕೆಲರ ಚಾಪಮನಿರ್ಕಡಿ ಮಾಡಿ ತನ್ನ ದೋ||
     ರ್ಬಲದ ಪೊಡರ್ಪು ಜೀಯೆನಿಸೆ ಮಾರ್ಪಡೆಯಂ ಕೊಲಲೊಲ್ದನಿಲ್ಲಮೆ|
     ಯ್ಗಲಿ ರಘುವೀರ ನಾಥನ ಶರಾಸನ ವಿದ್ಯೆಗಿದಾವ ವಿಸ್ಮಯಂ||೫೫||

      ಕಂ|| ಗರಿಯಿಂ ಸೋರ್ಚಿದುದೆನೆಕೆಂ
            ಗರಿಯಂಬೆಳ್ಬಿಟ್ಟಿ ರಾಜಸುತ ಸಂದೋಹಂ||
            ಗರಿ ಸೋಂಕದೆ ಬೆಳ್ಳೆರಲೆಗೆ
            ಗರಿ ಮೂಡಿದ ತೆರದಿನೋಡಿ ಪೋದತ್ತಾಗಳ್||೫೬||

ಮ|| ಮೃಗರಾಜಂಗಗಿದೋಡುವಾನೆಗಡುಪಂ ಕೈಕೊಂಡು ಯೂಧಾಧಿಪಂ|
     ಮಗುಳ್ದುಂ ಸಿಂಹದ ಮೇಲೆ ಪಾಯ್ವ ತೆರದಿಂ, ಹೇಮಪ್ರಭಂ ರಾಜಸೂ||
     ನುಗಳಂ ತನ್ನೊಡಗೂಡಿಕೊಂಡು ಕರೆದಂ ಜ್ಯಾಘಾತ ಮೇಘಧ್ವನಿ|
     ಸ್ಥಗಿತಾಶಾಮುಖನುನ್ಮುಖಾಂಶು ಚಪಲಾವೇಗಂ ಶರಾಸಾರಮಂ||೫೭||

ಆ ಸಮಯದೊಳ್--

     ಕಂ|| ಇದು ಮಾಯಾ ಮಯಮೊಂಡ
           ಲ್ಲಿದು ಕೋಟ್ಯನುಕೋಟಿ ರಥಮೆನಲ್ ವೈರಿಬಲಂ||
           ಬೆದರೆ ಮನೋಜವದಿಂ ಪರಿ
           ದುದು ಪೂರ್ಣಮನೋರಥಂ ರಥಂ ದಶರಥನಾ||೫೮||

      ಅಂತು ಪರಿದು ನೆರೆದ ರಾಜನ್ಯಕಮಂ ಪಳಿಯಂತೆ ಪಲಾಯನಶೀಲಮ್ಮಾಡಿ
ಹೇಮಪ್ರಭನಂ ಮುಟ್ಟೆವಂದು--


1. ನೊಚ್ಚಿದರೆನೆ, ಚ ; ನೋರ್ಚಿದರೆನೆ, ಗ.
2 ಕೋಟಾಕೋಟಿ. ಕ ಖ ಗ ಘ ಚ