ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೬೦

ರಾಮಚಂದ್ರಚರಿತಪುರಾಣಂ

 
       ಕ೦|| ವ್ಯವಹಾರ ಮಂಗಳಾಚಾ
             ರವೆಲ್ಲವಂ ತೀರ್ಚಿ ಮುಖ್ಯ ಮಾಂಗಲ್ಯಮನಾ||
             ಯುವತಿ ಜಿನಪೂಜೆಯಂ ಮಾ
             ಡಿ ವಿಚಿತ್ರಮೆನಿಪ್ಪ ಚಿತ್ರಶಾಲೆಗೆ ಬಂದಳ್||೮೩||

       ಅಂತು ಬಂದು ಮರಕತಮಣಿ ವೇದಿಕೆಯ ನಡುವಣ ಚೆಂಬೊನ್ನ ಪಟ್ಟವಣೆಯ
ಮೇಲೆ ರೋಹಣನಗ ನಿತಂಬದೊಳ್ಪೊಳೆವ ರತ್ನ ಶಲಾಕೆಯಂತೆ ನಿಜಶರೀರ ಕಾಂತಿ ಪಸರಿಸೆ ಕುಳ್ಳಿರ್ಪುದುಂ, ಆಗಳುಭಯಪಾರ್ಶ್ವದೊಳಂ ಚಾಮರಗ್ರಾಹಿಣಿಯರ್ಕಳ್
ಕಾಶ ಕಣಿಶಂಗಳಿಂದೆಸೆವ ಶರಲ್ಲಕ್ಷ್ಮಿಯಂ ನೆನೆಯಿಸೆ ಕುಂಚದಡಪದ ಡವಕೆಯ ಕನ್ನ
ಡಿಯ ಪರಿಚಾರಿಕೆಯರ್ ಕುಸುಮಶರ ವಶೀಕರಣ ಮಂತ್ರಾಧಿದೇವತೆಯ ಪರಿವಾರ
ದೇವತೆಯರೆನಿಸೆ--

       ಕಂ|| ಕರ ಕಿಸಲಯ ರುಚಿಯಿಂದಂ
             ಪರಭಾಗಂಬಡೆದು ರಾಗಮಂ ಬೀರುವಿನ೦||
             ಚರಣ ಮಣಿವಲಯ,ಮಣಿನೂ
             ಪುರಮಂ ನೃಪವಧುಗೆ ತುಡಿಸಿದಳ್ ಮತ್ತೋರ್ವಳ್||೮೪||

             ಗೆಲೆವಂದುವಲರ್ದ ಕರ್ನೆ
             ಯ್ದಿಲ ಪೂಗಳ ಚೆಲ್ವನೀಗಳೆನೆ ಕೆನ್ನೆಗಳಾ||
             ದಲೆಗೆಯ್ದಿದ ಚೆನ್ನೆಯ ಕ
             ಣ್ಮಲರೊಳ್ ಕಾಡಿಗೆಯನೆಚ್ಚಿದಳ್ ಮತ್ತೊರ್ವಳ್||೮೫||

             ಅಂಬುಜದ ಬಂಡನುಣ್ಬೆಳ
             ದುಂಬಿಯನಜನಿಸೆ ಮನೋಜ ಗಜಗಮನೆಯ ವ||
             ಕ್ತ್ರಾಂಬುಜದೊಳ್ ಮತ್ತೋರ್ವಳ್
             ಬಿಂಬಾಧರೆ ಮೃಗಮದಾಂಬು ತಿಲಕಮನಿಟ್ಟಲ್||೮೬||

             ತೊಳಗುವವತಂಸ ಮುಕ್ತಾ
             ಫಳ ರುಚಿಯೊಳ್ ಕೆಲದ ಕನ್ನೆಯರ ನಗೆಗಣ್ಗಳ್||
             ಪೊಳೆದುವು ಪೊಸವೆಳ್ದಿಂಗಳ
             ಬಳಸಿಂಗೊಳಗಾದ ಚಳ ಚಕೋರಂಗಳವೋಲ್||೮೭||


೧ ಮಾಲೆಯಂತೆ, ಕ, ಖ, ಚ.